ಸಿ.ಎಲ್.ಸಿಯಿಂದ ಸಿ.ಎಲ್.ಸಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ ಬರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ವತಿಯಿಂದ ಸಿ.ಎಲ್.ಸಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಸಾಧನೆಗೈದ ಸಿ.ಎಲ್.ಸಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಆ.7 ರಂದು ಜರಗಿತು.



ಸಿ.ಎಲ್.ಸಿ ಸದಸ್ಯರಾದ ಮೌರಿಸ್ ಕುವೆಲ್ಲೋ ಹಾಗೂ ಫ್ಲೋರಿನ್ ಕುವೆಲ್ಲೋರವರ ಪುತ್ರಿ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ ಪ್ರೀಮಾ ಮರಿಯಾ ಕುವೆಲ್ಲೋ, ಸಿ.ಎಲ್.ಸಿ ಮಾಜಿ ಅಧ್ಯಕ್ಷ, ಕುಡಿಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಹಾಗೂ ಶಿಕ್ಷಕಿ ಹೆಲೆನ್ ಮಸ್ಕರೇನ್ಹಸ್ ರವರ ಪುತ್ರಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿ ದಿಶಾ ಪರ್ಲ್ ಮಸ್ಕರೇನ್ಹಸ್, ಮಾಯಿದೆ ದೇವುಸ್ ಚರ್ಚ್ ಆರ್ಥಿಕ ಸಮಿತಿ ಸದಸ್ಯ ಓಸ್ವಾಲ್ಡ್ ಲೋಬೋ ಹಾಗೂ ಗೀತಾ ಲೋಬೊರವರ ಪುತ್ರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಫಿಲೋಮಿನಾ ಪಿಯು ಕಾಲೇಜಿನ ವಿದ್ಯಾರ್ಥಿ ಆಶ್ಲಿ ಲೋಬೊ, ಕ್ಲಬ್ ಸದಸ್ಯ ಹಾಗೂ ಫಿಲೋಮಿನಾ ಪಿಯು ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಫೆಲಿಕ್ಸ್ ಡಿ’ಸೋಜ ಹಾಗೂ ವಾಯಿಲೆಟ್ ಡಿ’ಸೋಜರವರ ಪುತ್ರಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಎಂಬಿಎ ಪದವಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿರುವ ವಿಯೋಲಿನ್ ಲುಸಿಟ ಡಿ’ಸೋಜ ಹಾಗೂ ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಎ ಸಮಾಜಶಾಸ್ತ್ರದಲ್ಲಿ ಏಳನೇ ರ್ಯಾಂಕ್ ಗಳಿಸಿದ ಡೇನಿಯಲ್ ಸಿಕ್ವೇರಾ ಹಾಗೂ ಎವ್ಲಿನ್ ಸಿಕ್ವೇರಾರವರ ಪುತ್ರ ಕ್ಲಬ್ ಸದಸ್ಯ ಹಾಗೂ ಫಿಲೋಮಿನಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಲೆ|ಜಾನ್ಸನ್ ಡೇವಿಡ್ ಸಿಕ್ವೇರಾರವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕ್ಲಬ್ ಹಿರಿಯ ಸದಸ್ಯರಾದ ಜೋನ್ ಮಿನೇಜಸ್, ಜೋನ್ ಪಿಂಟೋ, ಅಧ್ಯಕ್ಷ ಜೋಯೆಲ್ ಕುಟಿನ್ಹಾರವರು ಪ್ರತಿಭಾವಂತರನ್ನು ಸನ್ಮಾನಿಸಿದರು. ಸದಸ್ಯ ಜೇಸನ್ ವರ್ಗೀಸ್ ಪ್ರತಿಭಾವಂತರ ಕುರಿತು ಮಾತನಾಡಿದರು. ಕ್ಲಬ್ ಕಾರ್ಯದರ್ಶಿ ವಿಲಿಯಂ ನೊರೋನ್ಹಾ, ಉಪಾಧ್ಯಕ್ಷ ಸುಜಿತ್ ಪಾಯಿಸ್, ಜೊತೆ ಕಾರ್ಯದರ್ಶಿ ರುಡೋಲ್ಫ್ ಪಿಂಟೋ, ಕೋಶಾಧಿಕಾರಿ ನರೇಶ್ ಲೋಬೋ ಸಹಿತ ಸಿ.ಎಲ್.ಸಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here