34-ನೆಕ್ಕಿಲಾಡಿ: ಸಾಮಾಜಿಕ ಪರಿಶೋಧನಾ ಸಭೆ

0

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ೨೦೨೨-೨೩ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರಗಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು ಇದರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶ್ರೀಲತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಸಂಯೊಜಕ
ಪ್ರವೀಣ್ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ವಿಜಯಕುಮಾರ್, ಶ್ರೀಮತಿ ಗೀತಾ, ಶ್ರೀಮತಿ ರತ್ನಾವತಿ, ಶ್ರೀಮತಿ ವೇದಾವತಿ, ಶ್ರೀಮತಿ ಸುಜಾತ ರೈ, ಹರೀಶ್ ಕೆ. ಗ್ರಾಮಸ್ಥರಾದ ಜಯಮಣಿ, ಸುಪ್ರಿಯ, ಪ್ರಣಮ್ಯ, ಸವಿತಾ, ಯಶ್ಮಿತಾ, ವಿನುತ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಪಿಡಿಒ. ಸತೀಶ್ ಬಂಗೇರ ಸ್ವಾಗತಿಸಿ, ಸಿಬ್ಬಂದಿ ವಸಂತಿ ವಂದಿಸಿದರು. ಸುಶೀಲಾ, ಸಾರಿಕಾ, ನಿತಿನ್, ಯಶೋಧ ಸಹಕರಿಸಿದರು.

LEAVE A REPLY

Please enter your comment!
Please enter your name here