ವೆಸ್ಟ್ಇಂಡೀಸ್‌ಗೆ ಸೋಲುಣಿಸಿದ ಭಾರತ, ಸರಣಿ 4-1 ಕೈವಶ

0

ಲಾಡರ್‌ಹಿಲ್ (ಫ್ಲೋರಿಡಾ): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸರಣಿಯುದ್ಧಕ್ಕೂ ಶ್ರೇಷ್ಟ ಪ್ರದರ್ಶನ ನೀಡಿದ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಟಿ20ಯಲ್ಲಿ 4-1 ಅಂತರದಿಂದ ಪಂದ್ಯಾಟವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ.
ಲಾಡರ್‌ಹಿಲ್ (ಫ್ಲೋರಿಡಾ) ಸ್ಟೇಡಿಯಂನಲ್ಲಿ ಅ.7ರಂದು ನಡೆದ 5ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಭಾರತ 88 ರನ್‌ಗಳ ಅಂತರದಿಂದ  ಸೋಲಿಸಿದೆ.

ಕೊನೆಯ ಪಂದ್ಯದ ನಾಯಕತ್ವ ವಹಿಸಿದ್ದ ಹಾರ್ದಿಕ್‌ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿಸಿತ್ತು. ಮೊದಲ ವಿಕೇಟ್‌ಗೆ ಮೊತ್ತ 38 ತಲುಪುತ್ತಿದ್ದಂತೆ ಕಿಶನ್ 11ಕ್ಕೆ ಔಟಾದರು. ಬಳಿಕ ದೀಪಕ್ ಹುಡಾ (38), ಅಯ್ಯರ್ (64) 10ರ ಸರಾಸರಿಯಲ್ಲಿ ರನ್‌ಗಳಿಸತೊಡಗಿದರು. ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (15), ನಾಯಕ ಹಾರ್ದಿಕ ಪಾಡ್ಯ (28) ಆಸರೆಯಾದರು. ಬಳಿಕ ಕಾರ್ತಿಕ್ (12), ಅಕ್ಷರ್ ಪಟೇಲ್ (9) ರನ್ ಗಳಿಸಿ ಅಂತಿಮವಾಗಿ 7 ವಿಕೇಟ್ ನಷ್ಟಕ್ಕೆ 188 ರನ್‌ಗಳಿಸಿದರು. ವೆಸ್ಟ್ ಇಂಡೀಸ್ ಪರ ಓಡಿಯನ್ ಸ್ಮಿತ್ 3, ಹೋಲ್ಡರ್, ಡೋಮಿನಿಕ್, ಹೈಡೇನ್ ತಲಾ 1 ವಿಕೇಟ್ ಪಡೆದರು.

ಬಳಿಕ ಬ್ಯಾಟಿಂಗ್ ನಡೆಸಿದ ವೆಸ್ಟ್ಇಂಡೀಸ್ ತಂಡ ಭಾರತದ ಸ್ಪಿನ್ನರ್ ಎದುರು ರನ್‌ಗಳಿಸಲು ಪರದಾಡಿತು. ಅಕ್ಷರ್ ಪಟೇಲ್ ಮೊದಲ ಓವರ್‌ನಲ್ಲೇ ಹೋಲ್ಡರ್ (0) ವಿಕೇಟ್ ಪಡೆದರು. ಬಳಿಕ ಹಂತ-ಹಂತವಾಗಿ ವಿಕೆಟ್ ಉದುರಿತು. ಶಿಮ್ರಾನ್ ಹೆಟ್ಮೆಯರ್ ಏಕಾಂಗಿಯಾಗಿ ಗೆಲುವನ್ನು ಪಡೆಯಲು ಯತ್ನಿಸಿದಾದರೂ ಸಫಲರಾಗಲಿಲ್ಲ. ಅಂತಿಮವಾಗಿ 16 ಓವರ್ ಮುಗಿಯುವ ವೇಳೆಗೆ ಎಲ್ಲಾ ವಿಕೇಟ್ ಕಳೆದು ಬರೀ 100 ರನ್‌ಗೆ ಶರಣಾಯಿತು. ಭಾರತದ ಪರ ಸ್ಪಿನ್ನರ್‌ಗಳಾದ ಅಕ್ಷರ್ (15-3), ರವಿ ಬಿಷ್ಣೋಯಿ (16-4), ಕುಲ್‌ದೀಪ್ ಯಾದವ್ (12-3) ಪಡೆದರು. ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಎಲ್ಲಾ ವಿಕೇಟ್ ಪಡೆದದ್ದು ವಿಶೇಷ. 5 ಸರಣಿಗಳ ಪಂದ್ಯಾಟದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಹರ್ಷ್‌ ದೀಪ್ ಸಿಂಗ್ ಪಡೆದರೆ, ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

LEAVE A REPLY

Please enter your comment!
Please enter your name here