ಯಶಸ್ವಿಯಾಗಿ ಮುನ್ನಡೆಯುತ್ತಿದೆ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು; ಭಕ್ತರಿಗೆ ಪ್ರಸಾದ ರೂಪದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು 5ನೇ ತಿಂಗಳ ಉಚಿತ ವೈದ್ಯಕೀಯ ಶಿಬಿರವು ಆ.7ರಂದು ನಡೆಯಿತು. ಈ ಬಾರಿಯ ಶಿಬಿರದಲ್ಲಿ ಕಣ್ಣಿನ ಚಿಕಿತ್ಸೆ, ಕೀಲು ಮತ್ತು ಎಲುಬು ಚಿಕಿತ್ಸೆ, ಹೋಮಿಯೋಪತಿಕ್ ಚಿಕಿತ್ಸೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ವಿತರಣೆಯು ವಿಶೇಷವಾಗಿತ್ತು.

ಶಿಬಿರವನ್ನು ಆರ್‌ಎಸ್‌ಎಸ್ ಮುಖಂಡ ಅಚ್ಚುತ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇವಸ್ಥಾನಗಳೆಂದರೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಲ್ಲ. ಅದು ಸಾಮಾಜಿಕ ಕಾರ್ಯಕ್ರಮಗಳ ಕೇಂದ್ರ ಎಂಬುದು ಹಿರಿಯರ ಆಶಯ. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನವೂ ಅದರಂತೆ ನಡೆಯುತ್ತಿದ್ದು ಎಲ್ಲಾ ದೇವಸ್ಥಾನಗಳಿಗೂ ಮಾದರಿಯಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಬೇಕು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಸಾಮಾಜಿಕ ಕಳಕಲಿಯಿಂದ ಧಾರ್ಮಿಕತೆಯ ಜೊತೆಗೆ ವೈದ್ಯಕೀಯ ಸೇವೆಯನ್ನು ಮುನ್ನಡೆಸುತ್ತಿದ್ದು ಭಗವಂತನ ಸೇವೆಯ ರೂಪದಲ್ಲಿ ಜನರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವುದು ಶ್ಲಾಘನೀಯ. ಇದು ನಿರಂತರವಾಗಿ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ದೇವಸ್ಥಾನದ ಭಕ್ತಾದಿಗಳಿಗೆ ಹಾಗೂ ಪರಿಸರದ ಜನರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಶಿಬಿರ ಪ್ರಾರಂಭಿಸಲಾಗಿದೆ. ಆದರೂ ದೂರದವರ ಬರಬಾರೆಂಬುದಲ್ಲ. ನಾವು ಕೈಗೊಂಡ ಯೋಜನೆಯ ಇತರ ದೇವಸ್ಥಾನಗಳಿಗೂ ಸ್ಫೂರ್ತಿಯಾಗಬೇಕು. ಎಲ್ಲಾ ಕಡೆಗಳಲ್ಲಿಯೂ ಇಂತಹ ಕಾರ್ಯಕ್ರಮ ನಡೆಸಲು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯವಾಗಿದೆ ಎಂದರು.
ಕಣ್ಣಿನ ತಜ್ಞ ವೈದ್ಯರುಗಳಾದ ಡಾ.ಆಶಾಜ್ಯೋತಿ ಪುತ್ತೂರಾಯ, ಪಾರೆ ಕ್ಲಿನಿಕ್‌ನ ಡಾ.ಪ್ರವೀಣ್ ಪಾರೆ, ಪುತ್ತೂರು ಪಾಲಿಕ್ಲಿನಿಕ್‌ನ ಡಾ.ಸಚಿನ್ ಶಂಕರ್ ಹಾರಕರೆ, ಹೋಮಿಯೋಪತಿ ವೈದ್ಯರಾದ ಡಾ.ರಮೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಊಟ ಉಪಾಹಾರದ ಪ್ರಾಯೋಕರಾಗಿ ಸಹಕರಿಸಿದ ರಮಾನಾಥ ಬೈಲಾಡಿಯವರನ್ನು ಸನ್ಮಾನಿಸಲಾಯಿತು. ಶಿಬಿರದ ವಿವಿಧ ವಿಭಾಗಗಳಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.

ಪ್ರಾರ್ಥನಾ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು. ಪ್ರಸನ್ನ ಕುಮಾರ್ ಮಾರ್ತ ವಂದಿಸಿದರು. ಉದಯಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾತಂತ್ರ‍್ಯೋತ್ಸವದ ಅಮೃತಮಹೋತ್ಸವ ಆಚರಣೆ:
ದೇಶದ ಸ್ವಾತಂತ್ರ‍್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಆ.13ರಂದು ದೇವಸ್ಥಾನದಲ್ಲಿ ರಕ್ತದಾನ ಶಿಬಿರ, ಹರ್ ಘರ್ ತಿರಂಗಾದAಗವಾಗಿ ಮನೆಗಳಿಗೆ ರಾಷ್ಟçಧ್ವಜ ವಿತರಣೆ, ಆ.14ರಂದು ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆ, ಸಂಪ್ಯದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು, ಆ.15ರಂದು ಸ್ವಾತಂತ್ರ‍್ಯೋತ್ಸವದ ಆಚರಣೆ ಹಾಗೂ ಉಚಿತ ವೈದ್ಯಕೀಯ ಶಿಬಿರದಲ್ಲಿ ಅನ್ನದಾನಿಗಳಾಗಿ ಸಹಕರಿಸಿದವರಿಗೆ ಸನ್ಮಾನಿಸಲಾಗುವುದು ಎಂದು ಪ್ರಸನ್ನ ಕುಮಾರ್ ಮಾರ್ತ ತಿಳಿಸಿದರು.

ಐದನೇ ಶಿಬಿರದಲ್ಲೇನಿತ್ತು….!:
ಈ ಬಾರಿಯ ಉಚಿತ ಶಿಬಿರದಲ್ಲಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ವೈದ್ಯರ ತಂಡದೊAದಿಗೆ ಉಚಿತ ಕಣ್ಣಿನ ಚಿಕಿತ್ಸೆ ನಡೆಸಿ ಆವಶ್ಯಕತೆಯುಳ್ಳವರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಣೆ, ಆವಶ್ಯವೆನಿಸಿದವರಿಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಉಚಿತ ಶಸ್ತçಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು. ಕಣ್ಣಿನ ತಜ್ಞ ವೈದ್ಯರುಗಳಾದ ಡಾ.ಆಶಾಜ್ಯೋತಿ ಪುತ್ತೂರಾಯ, ಪಾರೆ ಕ್ಲಿನಿಕ್‌ನ ಡಾ.ಪ್ರವೀಣ್ ಪಾರೆಯವರು ಕಣ್ಣಿನ ತಪಾಸಣೆ ನಡೆಸಿದರು. ಪುತ್ತೂರು ಪಾಲಿಕ್ಲಿನಿಕ್‌ನ ಡಾ.ಸಚಿನ್ ಶಂಕರ್ ನೇತೃತ್ವದಲ್ಲಿ ಕೀಲು ಹಾಗೂ ಎಲುಬು ಚಿಕಿತ್ಸೆಗಳು, ಡಾ.ರಮೇಶ್ ಭಟ್‌ರವರಿಂದ ಹೋಮಿಯೋಪಥಿ ಚಿಕಿತ್ಸೆಗಳು, ಮೂಳೆ ಸಾಂದ್ರತೆ ಪರೀಕ್ಷೆ ವಿಶೇಷವಾಗಿ ಈ ಬಾರಿಯ ಶಿಬಿರದಲ್ಲಿ ಆಯೋಜಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ದರ್ಬೆ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ನೇತೃತ್ವದಲ್ಲಿ ರಕ್ತಪರೀಕ್ಷೆ ಹಾಗೂ ಇಸಿಜಿ, ವೈದ್ಯಕೀಯ ತಜ್ಞರಾದ ಡಾ ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ.ಸಾಯಿಪ್ರಕಾಶ್ ಹಾಗೂ ಡಾ.ದೀಕ್ಷಾರವರು ವೈದ್ಯಕೀಯ ಚಿಕಿತ್ಸೆಗಳನ್ನು ನಡೆಸಿದರು. ಶಿಬಿರದಲ್ಲಿ ಒಂದು ತಿಂಗಳ ಅವಧಿಗೆ ಆವಶ್ಯಕವಾದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ನಡೆಯಲು ಅಸಾಧ್ಯವಾದವರಿಗೆ ವ್ಹೀಲ್ ಚೆಯರ್ ಸೌಲಭ್ಯವನ್ನು ಒದಗಿಸಲಾಗಿತ್ತು. ಶಿಬಿರದಲ್ಲಿ ಉಚಿತ ಚಿಕಿತ್ಸೆ ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಊಟ, ಉಪಾಹಾರಗಳನ್ನು ಒದಗಿಸಲಾಗಿತ್ತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಸಂಪ್ಯ ನವಚೇತನಾ ಯುವಕ ಮಂಡಲ, ಶ್ರೀಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಮಹಾವೀರ ಆಸ್ಪತ್ರೆ ಬೊಳುವಾರು, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ದರ್ಬೆ, ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು, ಭಾರತೀಯ ಜನೌಷಧ ಕೇಂದ್ರಗಳು ಹಾಗೂ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here