ಜೆ.ಇ.ಇ. ಪ್ರವೇಶ ಪರೀಕ್ಷೆ: ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

0

ಉಪ್ಪಿನಂಗಡಿ:2021-22ರ ಜೆ.ಇ.ಇ. ಪ್ರವೇಶ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಭರತ್ ಎಲ್.-3274ನೇ ರ್‍ಯಾಂಕ್, ರಾಹುಲ್ ಎನ್.ಸಿ.-7156ನೇ ರ್‍ಯಾಂಕ್ ಹಾಗೂ ಅಭಿಷೇಕ್ ವಿ.ಕೆ.-10549ನೇ ರ್‍ಯಾಂಕ್ ಪಡೆದು ಉತ್ತಮ ಸಾಧನೆಗೈದು ಮುಂದಿನ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭರತ್ ಎಲ್. ಇವರು ನೆಕ್ಕಿಲಾಡಿ ಲಕ್ಷ್ಮೀಶ ಕೆ. ಮತ್ತು ರತ್ನಾವತಿ ಎ. ದಂಪತಿಗಳ ಪುತ್ರ. ರಾಹುಲ್ ಎನ್.ಸಿ.ಯವರು ರಾಮಕುಂಜದ ರಮೇಶ್ ಎನ್.ಸಿ. ಮತ್ತು ರಮ್ಯ ದಂಪತಿಗಳ ಪುತ್ರ. ಅಭಿಷೇಕ್ ವಿ.ಕೆ. ಇವರು ರಾಮಕುಂಜದ ವೇಣುಗೋಪಾಲ ಕಲ್ಲೂರಾಯ ಕೆ. ಮತ್ತು ಆಶಾಲತ ವಿ. ಕಲ್ಲೂರಾಯ ದಂಪತಿಗಳ ಪುತ್ರರಾಗಿರುತ್ತಾರೆ. ದೇಶದಾದ್ಯಂತ ನಡೆದ ಈ ಪರೀಕ್ಷೆಯಲ್ಲಿ ಒಟ್ಟು 6 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

 

ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ನಿರಂತರ ವರ್ಷಗಳಲ್ಲಿ ಉತ್ತಮ ಶೈಕ್ಷಣಿಕ ಸಾಧನೆಯನ್ನು ತೋರುತ್ತಾ ಬಂದಿದ್ದು ಪ್ರಸಕ್ತ ಸಾಲಿನ ಫಲಿತಾಂಶವು ಇದಕ್ಕೆ ನಿದರ್ಶನವಾಗಿದೆ ಎಂದು ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here