ವಿಟ್ಲ: ದ್ವಿಚಕ್ರ ವಾಹನ – ಜೀಪ್ ಮಧ್ಯೆ ಅಪಘಾತ : ದ್ವಿಚಕ್ರ ಸವಾರ ಮೃತ್ಯು

0

ವಿಟ್ಲ: ಹೋಂಡಾ ಆಕ್ಟಿವಾ ಹಾಗೂ ಜೀಪ್‌ ಮಧ್ಯೆ ಅಪಘಾತ ಸಂಭವಿಸಿದ ಘಟನೆ ವಿಟ್ಲ – ಕಾಸರಗೋಡು ರಸ್ತೆಯ ಉಕ್ಕುಡ ಚೆಕ್ ಪೋಸ್ಟ್ ಬಳಿ ನಡೆದಿದ್ದು, ಘಟನೆಯಿಂದ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆಲಂಗಾರು ನಿವಾಸಿ ದಿನೇಶ್ ಮೃತದುರ್ದೈವಿ ಎಂದು ಮಾಹಿತಿ ಲಬಿಸಿದ್ದು, ಘಟನೆ ನಡೆದ ಕೂಡಲೇ ಅವರನ್ನು ಸ್ಥಳೀಯರು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here