ಶಾಂತಿನಗರ ಹಾ.ಉ.ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 2.50 ಲಕ್ಷ ರೂ.,ನಿವ್ವಳ ಲಾಭ; ಶೇ.14 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 79 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.8ರಂದು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪ್ರತಾಪಚಂದ್ರ ರೈ ಕುದುಮಾರುಗುತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 30-3-2021ರಂದು ಉದ್ಘಾಟನೆಗೊಂಡ ಸಂಘದಲ್ಲಿ ಆರಂಭದಲ್ಲಿ 183 ಲೀ.ಹಾಲು ಸಂಗ್ರಹವಾಗುತ್ತಿತ್ತು. ಪ್ರಸ್ತುತ 350ರಿಂದ 450 ಲೀ.ತನಕ ಹಾಲು ಸಂಗ್ರಹಣೆಯಾಗುತ್ತಿದೆ. 2021-22ನೇ ಸಾಲಿನಲ್ಲಿ ಸಂಘವು 42,08,895 ರೂ.ಮೊತ್ತದ ಹಾಲು ಖರೀದಿ ಮಾಡಿದ್ದು ಇದರಲ್ಲಿ 2,29,278 ರೂ.,ಮೊತ್ತದ ಹಾಲು ಸ್ಥಳೀಯವಾಗಿ ಹಾಗೂ 43,28,342 ರೂ.ಮೊತ್ತದ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಪಶು ಆಹಾರ, ಲವಣ ಮಿಶ್ರ ಸಂಘದ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ಸಂಘಕ್ಕೆ ವರದಿ ಸಾಲಿನಲ್ಲಿ 2,50,192 ರೂ.,ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.14 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 79 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು. ಪ್ರಸ್ತುತ ಸಂಘವು ಬಾಡಿಗೆ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದು ಸ್ವಂತ ಕಟ್ಟಡಕ್ಕೆ ಇಲಾಖೆಗೆ ಮನವಿ ಮಾಡಲಾಗಿದೆ. ಜಾಗ ಮಂಜೂರಾತಿಗೆ ತಡೆ ಸಿಕ್ಕಿರುವುದರಿಂದ ಸ್ವಲ್ಪ ವಿಳಂಬ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸರಾಸರಿ 500 ಲೀ.ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದ್ದು ಸಂಘದ ಸದಸ್ಯರು ಸಹಕರಿಸಬೇಕು. ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಪ್ರತಾಪಚಂದ್ರ ರೈಯವರು ಹೇಳಿದರು.

ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಹಾಲಿನ ಗುಣಮಟ್ಟ ಕಡಿಮೆ ಆದಲ್ಲಿ ಸರಕಾರದ ಪ್ರೋತ್ಸಾಹಧನ ಸದಸ್ಯರಿಗೆ ಸಿಗುವುದಿಲ್ಲ. ಅಲ್ಲದೇ ಸಂಘವೂ ನಷ್ಟ ಅನುಭವಿಸಲಿದೆ. ಆದ್ದರಿಂದ ಸದಸ್ಯರು ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸಬೇಕು. ಬೈಹುಲ್ಲು, ಹಸಿರುಹುಲ್ಲು ಸೇರಿದಂತೆ ಜಾನುವಾರುಗಳಿಗೆ ಸಮತೋಲನದ ಆಹಾರ ನೀಡಬೇಕು, ಪಶುಗಳ ಕೆಚ್ಚಲುಬಾವು, ಮನೆ ಮದ್ದು, ರಾಸುಗಳ ವಿಮೆಯ ಬಗ್ಗೆ ಮಾಹಿತಿ ನೀಡಿದ ಅವರು, ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದುವಂತೆ ಹೇಳಿದರು.

ಶಾಂತಿನಗರ ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲರವರು ಶಾಲಾ ಬೆಳ್ಳಿಹಬ್ಬ ಆಚರಣೆ ಕುರಿತಂತೆ ಮಾಹಿತಿ ನೀಡಿದರು. ಪುರುಷರ ರತ್ನ ಬಯೋ ಪ್ರೊಡ್ಯೂಸರ್ ಕಂಪನಿ ನಿರ್ದೇಶಕರಾದ ಕೆಡೆಂಜಿಗುತ್ತು ಪ್ರವೀಣ್‌ಕುಮಾರ್‌ರವರು ಬಯೋಗ್ಯಾಸ್ ಬಗ್ಗೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಜನಾರ್ದನ ಗೌಡ ಬರಮೇಲು, ನಿರ್ದೇಶಕರಾದ ವೇದಕುಮಾರ್ ಪುಳಾರ, ಬಾಲಕೃಷ್ಣ ಗೌಡ ಆರಕರೆ, ದೇಜಪ್ಪ ಗೌಡ ಬಾಂಕೋಡಿ, ಗುಮ್ಮಣ್ಣ ಗೌಡ ಡೆಂಬಲೆ, ಸೂರಪ್ಪ ಗೌಡ ಅನಾಲು, ಪುರುಷೋತ್ತಮ ಗುರುಂಪು, ಸದಾನಂದ ಮುರಿಯೇಲು, ವಾಮನ ನಾಯ್ಕ ನೂಜೋಲು, ಚೋಮಯ್ಯ ಶಾಂತಿನಗರ, ನಂದಿನಿನಾರಾಯಣ ಪೂಜಾರಿ ಡೆಂಬಲೆ, ಸೀತಮ್ಮ ಶಾಂತಿನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಜತ್‌ಕುಮಾರ್ ಜೈನ್ ವರದಿ ಮಂಡಿಸಿದರು. ಉಪಾಧ್ಯಕ್ಷ ಜನಾರ್ದನ ಗೌಡ ಬರಮೇಲು ಸ್ವಾಗತಿಸಿ, ಹಾಲು ಪರೀಕ್ಷಕಿ ಜಯಂತಿಹರೀಶ್ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.

ಬಹುಮಾನ ವಿತರಣೆ:
2021-22ನೇ ಸಾಲಿನಲ್ಲಿ ಸಂಘಕ್ಕೆ 8755.60 ಲೀ.ಹಾಲು ಪೂರೈಸಿದ ಬಾಲಕೃಷ್ಣ ಗೌಡ ಪ್ರಥಮ, 8526.30 ಲೀ.ಹಾಲು ಪೂರೈಸಿದ ಜನಾರ್ದನ ಗೌಡರಿಗೆ ದ್ವಿತೀಯ, 6486.70 ಲೀ.ಹಾಲು ಪೂರೈಸಿದ ದೇಜಪ್ಪ ಗೌಡರವರಿಗೆ ತೃತೀಯ, 4752.30 ಲೀ.ಹಾಲು ಪೂರೈಸಿದ ಭವಾನಿ ಜಿ.ಯವರಿಗೆ ಚತುರ್ಥ ಹಾಗೂ 4404.10 ಲೀ.ಹಾಲು ಪೂರೈಸಿದ ಬಾಬು ಗೌಡರವರಿಗೆ 5ನೇ ಬಹುಮಾನ ನೀಡಿ ಗೌರವಿಸಲಾಯಿತು. ವರದಿ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.