ಸ್ವಾತಂತ್ರ್ಯ ಅಮೃತ ಮಹೋತ್ಸವ: ರೇಡಿಯೋ ಪಾಂಚಜನ್ಯದಲ್ಲಿ ರಸಪ್ರಶ್ನೆ ಸ್ಪರ್ಧೆ 

0

ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್‍ಎಂ ನೇತೃತ್ವದಲ್ಲಿ ಇನ್ನರ್‍ವೀಲ್ ಹಾಗೂ ಮುಳಿಯ ಸಹಯೋಗದಲ್ಲಿ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ರಸಪ್ರಸ್ನೆ ಸ್ಪರ್ಧೆ ಆ. 8ರಂದು ನಡೆಯಿತು. 
20 ತಂಡಗಳು ಭಾಗವಹಿಸಿದ್ದು ಬಹಳ ಸಂತಸದಾಯಕವಾಗಿದೆ. ಮೊದಲಿಗೆ ಲಿಖಿತ ಪರೀಕ್ಷೆ ನಡೆಯಿತು. ಅದರಲ್ಲಿ ಉತ್ತಮವಾದ ನಾಲ್ಕು ತಂಡಗಳನ್ನು ಆಯ್ಕೆ ಮಾಡಿ ರಸಪ್ರಸ್ನೆ ರೇಡಿಯೋ ಪಾಂಚಜನ್ಯ ಸ್ಟುಡಿಯೊದಲ್ಲಿ ನಡೆಸಲಾಯಿತು. 
ಪ್ರಶ್ನೊತ್ತರ ಸುತ್ತು , ಚಿತ್ರಪಠ ಸುತ್ತು , ಥಟ್ ಅಂತ ಹೇಳಿ ಜೊತೆಗೆ 75ರ ಅಮೃತ ಮಹೋತ್ಸವದ ಕುರಿತಾದ ಸುತ್ತು ನಡೆಯಿತು. ಸ್ಪರ್ಧಾ ವಿಜೇತರಾಗಿ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ ತೇಜಸ್ವಿ ಕೆ. ಮತ್ತು ವೈಶಾಕ್ ಕೆ.ವಿ (ಪ್ರಥಮ), ಪುತ್ತೂರು ಸುದಾನ ವಸತಿಯುತ ಶಾಲಾ ವಿದ್ಯಾರ್ಥಿಗಳಾದ ಆರ್ನವ್ ಅನಂತ ಆರಿಗ, ಅನಿಶ್ ಎಲ್.ರೈ (ದ್ವಿತೀಯ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಜೆ.ಎಸ್ ಹಾಗೂ ಎಂ. ಶ್ರೀವತ್ಸ (ತೃತೀಯ) ಹಾಗೂ ಉಪ್ಪಿನಂಗಡಿ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಾದ ಅದಿತಿ ಆರ್ ರೈ ಮತ್ತು ಅರ್ಪಿತ ಎ. (ನಾಲ್ಕನೇ) ಸ್ಥಾನ ಪಡೆದುಕೊಂಡಿದೆ. 
ಸಭಾಕಾರ್ಯಕ್ರಮದಲ್ಲಿ ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ, ಇನ್ನರ್‍ವೀಲ್ ಅಧ್ಯಕ್ಷೆ ಟೈನಿ ದೀಪಕ್ ವಂದಿಸಿದರು. 
ರಸಪ್ರಸ್ನೆ ಕಾರ್ಯಕ್ರಮವನ್ನು ಇನ್ನರ್ ವೀಲ್ ಸದಸ್ಯೆಯಾದ ಶ್ರೀದೇವಿ ಹಾಗೂ ನ್ಯಾಯವಾದಿ ಸೀಮಾ ನಾಗರಾಜ್ ನೆರವೇರಿಸಿದರು. ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿ ರಾಜೇಶ್ ಮತ್ತು ತಾಂತ್ರಿಕ ವಿಭಾಗದ ಪ್ರಶಾಂತ್ ಸಹಕರಿಸಿದರು.

LEAVE A REPLY

Please enter your comment!
Please enter your name here