ಕಾವು:ತುಡರ್ ಯುವಕ ಮಂಡಲದಿಂದ ಸ್ವಚ್ಛತಾ ಕಾರ್ಯಕ್ರಮ

0

ಮಾಡ್ನೂರು ಗ್ರಾಮದ ಏಳು ಪ್ರಯಾಣಿಕರ ಬಸ್ ತಂಗುದಾಣ ಸ್ವಚ್ಚಗೊಳಿಸಿ ಸ್ವಚತೆ ಬಗ್ಗೆ ಜಾಗೃತಿ ಮೂಡಿಸಿದ ತುಡರ್ ಸದಸ್ಯರು


ಕಾವು:ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲದಿಂದ ದೇಶದ ಪ್ರಧಾನಿ ನರೇಂದ್ರ ಮೋದಿರವರ ಆಶಯದ ಸ್ವಚ್ಚ ಭಾರತ್ ನಿರ್ಮಾಣದ ಪರಿಕಲ್ಪನೆಯಂತೆ ತುಡರ್ ಯುವಕ ಮಂಡಲವು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಮಾಡ್ನೂರು ಗ್ರಾಮದ ಕಾವು ಶಿವಪೇಟೆ ಬಳಿಯ ಎರಡು ಪ್ರಯಾಣಿಕರ ಬಸ್ ತಂಗುದಾಣ, ಕಾವು ಪಂಚವಟಿ ನಗರದ ಎರಡು ಬಸ್ ತಂಗುದಾಣ ಹಾಗೂ ನನ್ಯ ಬಸ್ ತಂಗುದಾಣ, ಮದ್ಲ ವ್ಯಾಪ್ತಿಯ ಎರಡು ಪ್ರಯಾಣಿಕರ ಬಸ್ ತಂಗುದಾಣ ಸೇರಿದಂತೆ ಒಟ್ಟು ಏಳು ಪ್ರಯಾಣಿಕರ ಬಸ್ ತಂಗುದಾಣಗಳನ್ನು ಸ್ವಚ್ಛತಾ ಕಾರ್ಯ ನಡೆಸಿ, ಅಲ್ಲಿದ್ದ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಿ ಬಸ್ ತಂಗುದಾಣದ ಹೊರಗಿನ ಭಾಗದಲ್ಲಿ ಸುತ್ತಮುತ್ತ ಇದ್ದ ಪೊದೆಗಳನ್ನು ತೆಗೆದು, ಮಳೆಗಾಲದ ನೀರು ಸರಾಗವಾಗಿ ಹೋಗಲು ಅನುಕೂಲವಾಗುವಂತೆ ಚರಂಡಿಯನ್ನು ಸ್ವಚ್ಚಗೊಳಿಸಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗೌಡ, ಉಪಾಧ್ಯಕ್ಷರಾದ ಸಂದೇಶ ಚಾಕೋಟೆ, ಸದಸ್ಯರಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಬಾಲಕೃಷ್ಣ ಪಾಟಳಿ, ಜಗದೀಶ ನಾಯ್ಕಆಚಾರಿಮೂಲೆ, ಪುರುಷೋತ್ತಮ ಆಚಾರ್ಯ ನನ್ಯ, ಲಿಂಗಪ್ಪ ನಾಯ್ಕ ನನ್ಯ, ಶ್ರೀಕುಮಾರ್ ಬಲ್ಯಾಯ, ಹರ್ಷ ಎ ಆರ್ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here