ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಸ್ವತಂತ್ರ್ಯದ ಅಮೃತ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 75 ಬಡ, ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶುಲ್ಕ ರಿಯಾಯಿತಿ ಘೋಷಣೆ

  • ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಪುತ್ತೂರು: ದೇಶದ ಎಪ್ಪತ್ತೈದನೇ ಸ್ವಾತಂತ್ರಂತ್ರ್ಯದ ಅಮ್ರತಮಹೋತ್ಸವದ ಅಂಗವಾಗಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.


ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿನಿಯರಿಗೆ `ಸ್ವಾತಂತ್ರ್ಯೋತ್ಸವ ಅರ್ಥಪೂರ್ಣ ಆಚರಣೆ ಹೇಗೆ’? ಎಂಬ ವಿಷಯದಲ್ಲಿ ಆನ್ಲೈನ್ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಈಗಾಗಲೇ ಉತ್ತಮ ಸ್ಪಂದನೆ ದೊರಕಿದ್ದು ಆ.15ರಂದು ವಿಜೇತರನ್ನು ಘೋಷಿಸಲಾಗುತ್ತದೆ.

ಸಂಸ್ಥೆಯ ಪದವಿ, ಶರೀಅ ಹಾಗೂ ಪದವಿಪೂರ್ವ ವಿಭಾಗಗಳ ವಿದ್ಯಾರ್ಥಿನಿಯರಿಗೆ `ಸ್ವಾತಂತ್ರ್ಯ ಭಾರತದ ಅಭಿವೃದ್ಧಿ’ ಎಂಬ ವಿಷಯದಲ್ಲಿ ಆ.13 ರಂದು ಪ್ರಬಂಧ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿಯರಿಗೆ ಚಿತ್ರಕಲಾ ಸ್ಪರ್ಧೆಯೂ ನಡೆಯಲಿದೆ. ಆ.15ರ ತನಕ ಪ್ರತಿದಿನ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಣೆ ನಡೆಯಲಿದೆ. ಆ.15ರ ವರೆಗೆ ಬೆಳಗ್ಗಿನ ಪ್ರಾರ್ಥನೆ ಬಳಿಕ ಪ್ರತಿದಿನ ರಾಷ್ಟ್ರಭಕ್ತಿ ಗೀತೆಯ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಅಮೃತ ಮಹೋತ್ಸವದ ಸ್ಮರಣಾರ್ಥ 75 ಫಲ ಗಿಡಗಳನ್ನು ವಿತರಣೆ ಮಾಡಲಿದ್ದು ಆ.15ರಂದು ಕ್ಯಾಂಪಸ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರಂತ್ರ್ಯ ದಿನದಂದು ಧ್ವಜಾರೋಹಣದ ಬಳಿಕ ಮೂರೂ ವಿಭಾಗಗಳ ವಿದ್ಯಾರ್ಥಿನಿಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆಯ ಮೂರೂ ವಿಭಾಗಗಳ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಕಾರ್ಯದರ್ಶಿ, ಸಹಕಾರ್ಯದರ್ಶಿಯವರನ್ನು ಅಭಿನಂಧಿಸುವ ಕಾರ್ಯಕ್ರಮವೂ ನಡೆಯಲಿದೆ.
ವಿಶೇಷವಾಗಿ ಅತ್ಯಂತ ಬಡ, ಪ್ರತಿಭಾವಂತ 75 ವಿದ್ಯಾರ್ಥಿನಿಯನ್ನು ಆಯ್ದು ಅವರಿಗೆ ಶುಲ್ಕ ರಿಯಾಯಿತಿ ನೀಡುವ ಮೂಲಕ ಕಲಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.