ಕಾವು ತುಡರ್ ಮಹಿಳಾ ಮಂಡಲದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ – ರಾಷ್ಟ್ರಧ್ವಜ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಇದರ ಸಹಭಾಗಿತ್ವದಲ್ಲಿ ತುಡರ್ ಮಹಿಳಾ ಮಂಡಲ ನನ್ಯ-ಕಾವು ಇದರ ನೇತೃತ್ವದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜ ವಿತರಣೆ ಕಾರ‍್ಯಕ್ರಮವು ಆ.9ರಂದು ಕಾವು ಸಮುದಾಯ ಭವನದಲ್ಲಿ ನಡೆಯಿತು.

ಕಾರ‍್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿಯವರು ಮಾತನಾಡಿ ಈ ಬಾರಿಯ ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈಗಾಗಲೇ ನಮ್ಮ ಪ್ರಧಾನಿಯವರು ಹರ್ ಘರ್ ತಿರಂಗಾ ಅಭಿಯಾನದಡಿ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವಂತೆ ಕರೆ ನೀಡಿದ್ದಾರೆ, ಭಾರತದ ಪ್ರಜೆಗಳಾದ ನಾವೆಲ್ಲರೂ ಈ ಆದೇಶವನ್ನು ಪಾಲಿಸಿ ನಮ್ಮೆಲ್ಲರ ಮನೆಯಲ್ಲೂ ತ್ರಿರ‍್ಣ ಧ್ವಜ ಹಾರಿಸುವುದರ ಜತೆಗೆ ರಾಷ್ಟ್ರಧ್ವಜದ ದರ‍್ಬಳಕೆ ಆಗದಂತೆ ಕೂಡ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.

ರಾಷ್ಟ್ರಧ್ವಜ ವಿತರಿಸಿದ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಮಾತನಾಡಿ ತುಡರ್ ಮಹಿಳಾ ಮಂಡಲದ ಸದಸ್ಯರು ಸಮಾಜ ಸೇವೆ ಮಾದರಿಯ ಕರ‍್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಮಾಡುವ ಮೂಲಕ ಸರಕಾರದ ಆದೇಶದಂತೆ ನಮ್ಮ ಭಾಗದ ಪ್ರತಿ ಮನೆಯಲ್ಲೂ ತ್ರಿರ‍್ಣ ಧ್ವಜ ಹಾರಾಡುವಂತೆ ಮಾಡಲು ಕರ‍್ಯಕ್ರಮದ ಮೂಲಕ ರಾಷ್ಟ್ರಧ್ವಜ ವಿತರಣೆಯನ್ನು ಮಾಡಿರುವುದು ಉತ್ತಮ ಕೆಲಸವಾಗಿದೆ, ನಿಮ್ಮ ಎಲ್ಲಾ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.

ಮುಖ್ಯ ಭಾಷಣ ಮಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವುರವರು ಮಾತನಾಡಿ ಕೇಂದ್ರ ರ‍್ಕಾರದ ಆದೇಶದಂತೆ ಈ ಬಾರಿಯ ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯೊಂದಿಗೆ ಆಚರಿಸಿ, ಪ್ರತಿ ಮನೆಯಲ್ಲೂ ೩ ದಿನ ರಾಷ್ಟ್ರಧ್ವಜ ಹಾರಿಸುವುದರ ಜತೆಗೆ ಈ ೩ ದಿನದಲ್ಲಿ ಅಮೃತ ಮಹೋತ್ಸವದ ಸವಿನೆನಪಿನ ದೇಶಸೇವೆಯ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಮಾತನಾಡಿ ತುಡರ್ ಮಹಿಳಾ ಮಂಡಲವು ಉತ್ತಮ ಸಮಾಜಮುಖಿ ಕರ‍್ಯಗಳನ್ನು ಮಾಡುತ್ತಿದ್ದು, ಗ್ರಾ.ಪಂನಿಂದ ಇಂತಹ ಕರ‍್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತೇವೆ, ಈ ಬಾರಿಯ ಸ್ವಾತಂತ್ರ‍್ಯೋತ್ಸವವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸೋಣ ಎಂದು ಹೇಳಿದರು.

ಕಾವು ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ಪ್ರಸ್ತಾವನೆಗೈದರು. ಮಹಿಳಾ ಮಂಡಲದ ಸದಸ್ಯರು ದೇಶಭಕ್ತಿ ಗೀತೆ ಹಾಡಿದರು.

ರಾಷ್ಟ್ರಧ್ವಜ ವಿತರಣೆ:
ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನದಡಿ ಆಗಸ್ಟ್ ೧೩ರಿಂದ ೧೫ರವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಕರ‍್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನೆಹರು ಯುವ ಕೇಂದ್ರದ ಸಹಕಾರದೊಂದಿಗೆ ತುಡರ್ ಮಹಿಳಾ ಮಂಡಲದಿಂದ ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು.

ಯಶಸ್ವಿನಿ ಮತ್ತು ಪೂಜಾಲಕ್ಷ್ಮೀ ಪ್ರರ‍್ಥಿಸಿದರು. ಮಹಿಳಾ ಮಂಡಲದ ಸದಸ್ಯೆ ತ್ರಿವೇಣಿ ಸ್ವಾಗತಿಸಿ, ಪ್ರಧಾನ ಕರ‍್ಯರ‍್ಶಿ ತುಳಸಿ ಪುರುಷೋತ್ತಮ ಆಚರ‍್ಯ ವಂದಿಸಿದರು. ಸದಸ್ಯೆ ಅಶ್ವಿತಾ ಎಂ ಕರ‍್ಯಕ್ರಮ ನರ‍್ವಹಿಸಿದರು. ಕಾರ‍್ಯಕ್ರಮದಲ್ಲಿ ಅರಿಯಡ್ಕ ಗ್ರಾ.ಪಂ ಸದಸ್ಯರಾದ ಲೋಕೇಶ್ ಚಾಕೋಟೆ, ಅನಿತಾ ಆಚಾರಿಮೂಲೆ, ಕಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರಾವ್ ನಿಧಿಮುಂಡ, ಕುಶಾಲಪ್ಪ ಗೌಡ ಬದಿಯಡ್ಕ, ದೇವಣ್ಣ ರೈ ಮುದರ್‌ಪಳ್ಳ, ತುಡರ್ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ತುಡರ್ ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ತುಡರ್ ಯುವಕ ಮಂಡಲದ ಸದಸ್ಯರಾದ ಜಗದೀಶ ನಾಯ್ಕ ಆಚಾರಿಮೂಲೆ, ನಿರಂಜನ ರಾವ್ ಕಮಲಡ್ಕ, ಶ್ರೀಕುಮಾರ್ ಬಲ್ಯಾಯ, ರ‍್ಷ ಎ.ಆರ್, ರಾಜೇಶ್ ಬಿ, ಬಾಲಕೃಷ್ಣ ಪಾಟಾಳಿ, ಮೋಹನಚಂದ್ರ ಆಚಾರಿಮೂಲೆ, ಭವಿತ್ ರೈ, ರ‍್ಷಿತ್ ಆಚಾರಿಮೂಲೆ, ಮಹಿಳಾ ಮಂಡಲದ ಗೌರವ ಸಲಹೆಗಾರ ಗೀತಾ ಮಾಣಿಯಡ್ಕ, ಉಪಾಧ್ಯಕ್ಷೆ ಗಾಯತ್ರಿ, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.