ಕೆದಂಬಾಡಿ ಗ್ರಾಪಂ ಅಮೃತ ಸರೋವರ ಪೂರ್ವಭಾವಿ ಸಭೆ, ಸಮಿತಿ ರಚನೆ

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಅಮೃತ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು ಈ ನಿಟ್ಟಿನಲ್ಲಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಅಮೃತ ಸರೋವರ (ಕೆರೆ)ದ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಮೇಲುಸ್ತುವಾರಿ ಸಮಿತಿ ರಚನೆಯು ಆ.10 ರಂದು ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ 1 ಎಕರೆ ವಿಸ್ತ್ರೀರ್ಣದಲ್ಲಿ ಈ ಅಮೃತ ಸರೋವರ ಕೆರೆ ನಿರ್ಮಾಣವಾಗಲಿದೆ. ಈ ಬಗ್ಗೆ ಈಗಾಗಲೇ ಇಂಜಿನಿಯರ್‌ರವರೊಂದಿಗೆ ನಕ್ಷೆ ತಯಾರಿಗೆ ತಿಳಿಸಲಾಗಿದೆ. ಕೆರೆ ನಿರ್ಮಾಣಕ್ಕೆ ಆ.15 ರಂದು ಬೆಳಿಗ್ಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದರು.

ಮೇಲುಸ್ತುವಾರಿ ಸಮಿತಿಯಲ್ಲಿ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ಅಧ್ಯಕ್ಷರಾಗಿ, ಸದಸ್ಯ ವಿಠಲ ರೈ ಮಿತ್ತೋಡಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಮಾಜಿ ಸೈನಿಕರು, ಪತ್ರಕರ್ತರು, ಗಣ್ಯರು, ನಿವೃತ್ತ ಸರಕಾರಿ ಉದ್ಯೋಗಿಗಳು ಸಮಿತಿಯಲ್ಲಿ ಇರಲಿದ್ದಾರೆ. ಇವರುಗಳೆಂದರೆ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ, ನಿವೃತ್ತ ಸೈನಿಕರಾದ ಚಿದಾನಂದ ಗೌಡ, ಪತ್ರಕರ್ತ ಸಿ.ಶೇಷಪ್ಪ ಕಜೆಮಾರ್, ನಿವೃತ್ತ ಸರಕಾರಿ ಅಧಿಕಾರಿ ವೆಂಕಟರಮಣ ಶಗ್ರಿತ್ತಾಯ, ಗಣ್ಯ ವ್ಯಕ್ತಿಗಳಲ್ಲಿ ಜಯಾನಂದ ರೈ ಮಿತ್ರಂಪಾಡಿ, ಭಾಸ್ಕರ ಬಲ್ಲಾಳ್ ಬೀಡು, ಸಂತೋಷ್ ಕುಮಾರ್ ರೈ ಕೋರಂಗ, ರಾಘವ ಗೌಡ ಕೆರೆಮೂಲೆ, ಆನಂದ ರೈ ಟೈಲರ್, ಸುಭಾಷ್ ರೈ ಮಿತ್ತೋಡಿ, ಅಣ್ಣು ತಿಂಗಳಾಡಿ ಹಾಗೂ ಅಶ್ರಫ್ ಸಾರೆಪುಣಿ ಸಮಿತಿಯಲ್ಲಿದ್ದಾರೆ. ಸಮಿತಿ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ಕೆರೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಸುನಂದ ರೈ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.

1 ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಾಣ
ಗ್ರಾಮದ ಬೋಳೋಡಿಯಲ್ಲಿ 1 ಎಕರೆ ವಿಸ್ತೀರ್ಣದಲ್ಲಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ಕೆರೆ (ಅಮೃತ ಸರೋವರ) ನಿರ್ಮಾಣವಾಗಲಿದೆ. ಕೆರೆ ನಿರ್ಮಾಣವು ನರೇಗಾ ಯೋಜನೆ ಹಾಗೂ ಇತರ ನಿಧಿಗಳನ್ನು ಬಳಸಿಕೊಂಡು ನಿರ್ಮಾಣವಾಗಲಿದೆ. ಗ್ರಾಮದಲ್ಲಿ ನೀರಿನ ಹರಿವನ್ನು ಹೆಚ್ಚಿಸುವ ಸಲುವಾಗಿ ಪ್ರತಿ ಗ್ರಾಮದಲ್ಲಿ ಒಂದು ಕೆರೆ ಇರಬೇಕು ಎಂಬುದು ಸರಕಾರದ ಆದೇಶವಾಗಿದೆ.

ಇದು ಅಮೃತ ಗ್ರಾಮದಲ್ಲಿರಲಿದೆ.
ಅಮೃತ ಗ್ರಾಮ ಯೋಜನೆಯ ಪ್ರಕಾರ ಗ್ರಾಮದಲ್ಲಿ ಸುಸಜ್ಜಿತ ರುದ್ರಭೂಮಿ, ಉದ್ಯಾನವನ, ಅಮೃತ ಸರೋವರ (ಕೆರೆ), ಘನ ತ್ಯಾಜ್ಯ ನಿರ್ವಹಣ ಘಟಕ, ಒಣ ಕಸ ನಿರ್ವಹಣ ಘಟಕ, ಸೋಲಾರ್ ರೂಪ್ ಟಾಪ್, ಆಟದ ಮೈದಾನ, ದಾರಿ ದೀಪ, ಡಿಜಿಟಲ್ ಗ್ರಂಥಾಲಯ ಇರಲಿದೆ. ಈಗಾಗಲೇ ಕೆದಂಬಾಡಿ ಗ್ರಾಮದಲ್ಲಿ ಈ ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿದೆ.

` ಅಮೃತ ಸರೋವರ ನಿರ್ಮಾಣಕ್ಕೆ ಆ.15 ರಂದು ಶಿಲಾನ್ಯಾಸ ನಡೆಯಲಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಷ್ ರೈ ಶಿಲಾನ್ಯಾಸ ಮಾಡಲಿದ್ದು, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ’ – ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here