ಕೊಂಬಾರು ಗ್ರಾ.ಪಂ. ಅಧ್ಯಕ್ಷೆಯಾಗಿ ಜಯಶ್ರೀರಾಮಚಂದ್ರ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೊಂಬಾರು ಗ್ರಾ.ಪಂ.ನ ಅಧ್ಯಕ್ಷರಾಗಿ ಜಯಶ್ರೀರಾಮಚಂದ್ರ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಆ.೧೦ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಚುನಾವಣಾಧಿಕಾರಿಯಾಗಿದ್ದರು.

ಜಯಶ್ರೀರಾಮಚಂದ್ರ              ಸದಾನಂದ ಪೂಜಾರಿ 

ಕಳೆದ ೧೫ ತಿಂಗಳಿನಿಂದ ಅಧ್ಯಕ್ಷರಾಗಿದ್ದ ಸುಶೀಲ ಶಿವಪ್ರಸಾದ್, ಉಪಾಧ್ಯಕ್ಷೆ ಸರಿತಾ ಅವರುಗಳು ರಾಜಿನಾಮೆ ನೀಡಿದ್ದು ಬಳಿಕ ತೆರವಾದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಕೊಂಬಾರು ಗ್ರಾ.ಪಂ.ನಲ್ಲಿ ಒಟ್ಟು ೯ ಸದಸ್ಯರಿದ್ದು ಎಲ್ಲ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಪಕ್ಷದ ತಿರ್ಮಾನದಂತೆ ಅಧ್ಯಕ್ಷ ಉಪಾಧ್ಯಕ್ಷರ ಅವಧಿಯನ್ನು ಈ ಹಿಂದೆಯೇ ತಿರ್ಮಾನಿಸಲಾಗಿದ್ದು ಆ ಹಿನ್ನಲೆಯಲ್ಲಿ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಗೌಡ, ಪುತ್ತೂರು ತಾ.ಪಂ. ವಿಷಯ ನಿರ್ವಾಹಕಾ ರಮೇಶ್ ಆಚಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಶೀಲ ಶಿವಪ್ರಸಾದ್, ಮಾಜಿ ಉಪಾಧ್ಯಕ್ಷೆ ಸರಿತಾ, ಸದಸ್ಯರಾದ ಮಧುಸೂಧನ್, ಚೆನ್ನಕೇಶವ ಕೈಂತಿಲ, ಗಣೇಶ್, ಸುಜಾತಜಯರಾಮ್ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಆಯ್ಕೆಯಾದ ಜಯಶ್ರೀಯವರು ಕಳೆದ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದು, ೨೦೦೫ರಿಂದ ೨೦೧೦ರವರೆಗೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾ.ಪಂ. ಸದಸ್ಯೆಯಾಗಿದ್ದರು. ಉಪಾಧ್ಯಕ್ಷ ಸದಾನಂದ ಪೂಜಾರಿಯವರು ಗ್ರಾ.ಪಂ.ಗೆ ಪ್ರಸ್ತುತ ಅವಧಿಯಲ್ಲಿ ಹೊಸ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.