ಮಾಣಿಲ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಮಾಣಿಲ ಸರಕಾರಿ ಪ್ರೌಢಶಾಲೆಯ ಪರಿಸರ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿಗಾಗಿ ಕ್ಷೇತ್ರ ಭೇಟಿ ಎಂಬ ಶೀರ್ಷಿಕೆಯಡಿ ಮಾಣಿಲ ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣು ಕೊಮ್ಮುಂಜೆ ರವರ ಕೃಷಿಭೂಮಿಯಲ್ಲಿ ಕೃಷಿ ಬಗ್ಗೆ, ಕೃಷಿ ಮಾಡುವ ವಿಧಾನ, ಸಲಕರಣೆಗಳು ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಮಾಣಿಲದ ಮುಖ್ಯೋಪಾಧ್ಯಯರಾದ ಸುಬ್ರಹ್ಮಣ್ಯ ಭಟ್, ಮಾಣಿಲ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಧರ್ ಬಾಳೆಕಲ್ಲು, ವಿಷ್ಣು ಕೊಮ್ಮುಂಜೆ ರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮಾಣಿಲ ಸರಕಾರಿ ಪ್ರೌಡ ಶಾಲಾ ಎಸ್‌ಡಿಎಮ್‌ ಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ, ಮಾಣಿಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಾಲತಿ, ಶೋಭಾ, ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡು ನೇಜಿ ನೆಡುವ ಕಾರ್ಯದಲ್ಲಿ ಪರಿಣಿತರಾದ ಕೊಮ್ಮುಂಜೆ ಪರಿಸರದ ಹಿರಿಯ ಪರಿಶ್ರಮಿ ವ್ಯಕ್ತಿಗಳಾದ ಕಮಲ, ಗಿರಿಜಾ ಹಾಗೂ ವಿಶೇಷ ಚೇತನ ವ್ಯಕ್ತಿ ಪರಮೇಶ್ವರಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಬಳಿಕ ಗದ್ದೆಯಲ್ಲಿ ಪ್ರೌಢಶಾಲಾ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಊರಿನ ಹಿರಿಯ ಮಹಿಳೆಯರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಕ್ಕಳಿಗೆ ನೇಜಿ ನೆಡುವ ಕಾರ್ಯಗಾರ, ಹಾಗೂ ಟಿಲ್ಲರ್‌ನಿಂದ ಗದ್ದೆ ಉಳುವ ಬಗ್ಗೆ ಹೇಳಿಕೊಡಲಾಯಿತು. ಶಾಲಾ ಮಕ್ಕಳು ಸೇರಿದಂತೆ ಶಾಲಾ ಶಿಕ್ಷಕರು ಬಹಳ ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.