ಆ.12ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ದುರ್ಗಾಪೂಜೆ

0

ಆಟಿ ತಿಂಗಳ ಕೊನೆಯ ಶುಕ್ರವಾರ ಪೂಜೆ
ಮಹಿಳೆಯರಿಂದ ಕುಂಕುಮಾರ್ಚನೆ
ದುರ್ಗಾಪೂಜೆಯ ಕುರಿತ ಉಪನ್ಯಾಸ
ಮಹಿಳೆಯರಿಗೆ ಅರಿಶಿನ, ಕುಂಕುಮ ಬಳೆಗಳ ವಿತರಣೆ

ಪುತ್ತೂರು: ಆಟಿ ತಿಂಗಳ ಕೊನೇ ಶುಕ್ರವಾರ ಹಾಗೂ ವರಮಹಾಲಕ್ಷಿ÷್ಮ ಹಬ್ಬದ ಪ್ರಯುಕ್ತ ಆ.12ರಂದು ಮಹತೋಭಾರ ಶ್ರಿ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ದುರ್ಗಾಪೂಜೆ, ಮಹಿಳೆಯರಿಂದ ಕುಂಕುಮಾರ್ಚನೆ ಮತ್ತು ದುರ್ಗಾಪೂಜೆಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸರಕಾರದ ಆದೇಶದಂತೆ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆಗಳ ವಿತರಣೆ ನಡೆಯಲಿದೆ.
ಸನಾತನ ಧರ್ಮದಲ್ಲಿ, ಪ್ರತಿ ದೇವರು ಮತ್ತು ದೇವತೆಯ ಆರಾಧನೆಗೂ ಮಂಗಳಕರ ಸಮಯ ಮತ್ತು ದಿನವನ್ನು ನಿಗದಿಪಡಿಸಲಾಗಿದೆ. ಆದರೆ ಶ್ರಾವಣ ಮಾಸದ ಪ್ರತಿ ದಿನವೂ ಮಂಗಳಕರ ಮತ್ತು ಕಲ್ಯಾಣವಾಗಿದೆ ಏಕೆಂದರೆ ಮಹಾದೇವನ ಕೃಪೆಯು ಶ್ರಾವಣ ಮಾಸದ ಪ್ರತಿ ದಿನದಲ್ಲೂ ಇರುವುದು. ಶ್ರಾವಣ ಮಾಸದ ಪ್ರತಿ ದಿನಕ್ಕೂ ವಿಶೇಷ ಮಹತ್ವ ಇರುವಂತೆ ಶ್ರಾವಣ ಶುಕ್ರವಾರಕ್ಕೂ ಇದೆ. ಶ್ರಾವಣ ಶುಕ್ರವಾರದಂದು ವ್ರತದ ಆಚರಣೆಯಿಂದ ನಮ್ಮ ಬಡತನ, ರೋಗ-ರುಜಿನಗಳು ದೂರವಾಗುತ್ತವೆ ಎಂಬ ಅಭಯವನ್ನು ಭಕ್ತರಿಗೆ ನೀಡಿರುವುದು ಈ ವ್ರತದ ವಿಶೇಷ. ಆ.12ರಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ದುರ್ಗಾಪೂಜೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬೆಟ್ಟಂಪಾಡಿ ಕಾಲೇಜಿನ ವರದರಾಜ ಚಂದ್ರಗಿರಿ ಅವರು ದುರ್ಗಾಪೂಜೆಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆಗಳ ವಿತರಣೆ ಸರಕಾರದ ಆದೇಶದಂತೆ ನಡೆಯಲಿದೆ. ವಿಶೇಷ ದುರ್ಗಾಪೂಜೆ ಸೇವೆ ಮಾಡಿಸುವ ಭಕ್ತರು ದೇವಳದ ಕಚೇರಿಯಲ್ಲಿ ಸೇವಾ ರಶೀದಿ ಬರೆಸಿಕೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here