ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರಾಗಿ ಪ್ರಕಾಶ್ ರೈ ಸಾರಕರೆ ಆಯ್ಕೆ

0


ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದ ನಾರಾಯಣ ಗೌಡ ಪೂವ ಇವರು ವೈಯುಕ್ತಿಕ ಆನಾನುಕೂಲತೆಗಾಗಿ ರಾಜೀನಾಮೆ ಸಲ್ಲಿಸಿದ್ದು , ತೆರವಾದ ಸ್ಥಾನಕ್ಕೆ ಸಹಕಾರಿ ಕಾಯ್ದೆಯಂತೆ ಕೋ-ಆಪ್ಟ್ ಮೂಲಕ ಪ್ರಕಾಶ್ ರೈ ಸಾರಕರೆ ಇವರನ್ನು ಆಯ್ಕೆ ಮಾಡಲಾಯಿತು. ಆ. 10 ರಂದು ಜರುಗಿದ ಸಂಘದ ಮಾಸಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ ಇವರು ನೂತನ ನಿರ್ದೇಶಕ ಪ್ರಕಾಶ್ ರೈ ಸಾರಕರೆರವರನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸ0ಘದ ಉಫಾಧ್ಯಕ್ಷ ತಾರಾನಾಥ ಕಾಯರ್ಗ, ನಿದೇಶಕರುಗಳಾದ ಉದಯ ರೈ ಮಾದೋಡಿ , ಮಹಾಬಲ ಶೆಟ್ಟಿ ಕೊಮ್ಮಂಡ , ಕರುಣಾಕರ ಪೂಜಾರಿ ಪಟ್ಟೆ, ತಿಮ್ಮಪ್ಪ ಗೌಡ ಮುಂಡಾಳ, ಚೇತನ್ ಕುಮಾರ್ ಕೋಡಿಬೈಲು , ನಿರ್ಮಲಾ ಕೇಶವ ಅಮೈ , ವೇದಾವತಿ ಕೆಡಂಜಿ, ಸೋಮನಾಥ ಡಿ ಕನ್ಯಾಮಂಗಲ , ತನಿಯಪ್ಪ ನಾಯ್ಕ ಕಾರ್ಲಾಡಿ ಮತ್ತು ಸ0ಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ , ಉಪಕರ‍್ಯನಿರ್ವಹಣಾಧಿಕಾರಿ ಜಲಜಾ ಯಚ್ ರೈ ಮತ್ತು ಸ0ಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮೂರು ಪಲಾನುಭವಿಗಳಿಗೆ ಈ ಸಭೆಯಲ್ಲಿ ಧನ ಸಹಾಯ ವಿತರಿಸಲಾಯಿತು. ಹಾಗೂ ಸರಕಾರದ ಸೂಚನೆಯಂತೆ 75 ನೇ ವರ್ಷದ ಸ್ವಾತಂತ್ರ‍್ಯವನ್ನು ಆಚರಿಸಲು ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ರಾಷ್ಟç ದ್ವಜವನ್ನು ವಿತರಿಸಲಾಯಿತು.
ಪ್ರಕಾಶ್ ರೈ ಸಾರಕರೆರವರ ಪರಿಚಯ: ಪ್ರಕಾಶ್ ರೈ ಸಾರಕರೆರವರು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ ಇದರ ಕರ್ನಾಟಕ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಉಡುಪಿ ವಿಭಾಗ ಸಮಿತಿಯ ಕಾರ್ಯಾಧ್ಯಕ್ಷ, ಸಂಘದ ಪುತ್ತೂರು ಸಮಿತಿಯ ಮಾಜಿ ಅಧ್ಯಕ್ಷ, ಜೆಸಿಐ ನರಿಮೊಗರು ಇದರ ಮಾಜಿ ಪ್ರಧಾನ ಕಾರ್ಯದರ್ಶಿ, ಬಂಟರ ಸಂಘ ಪುತ್ತೂರು ತಾಲೂಕು ಇದರ ನಿರ್ದೇಶಕ, ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾಜಿ ಅಧ್ಯಕ್ಷ, ಶ್ರೀ ಗೌರಿ ಗಣೇಶ ಸೇವಾ ಸಂಘ ವಿನಾಯಕನಗರ ಪುಣ್ಚಪ್ಪಾಡಿ ಇದರ ಮಾಜಿ ಅಧ್ಯಕ್ಷ, ಭಾರತೀಯ ಜನತಾ ಪಾರ್ಟಿ ಪುಣ್ಚಪಾಡಿ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ , 24 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯರಾಗಿರುವ ಇವರು ಭಾರತೀಯ ಜೀವವಿಮಾ ನಿಗಮ ಪುತ್ತೂರು ಶಾಖೆಯಲ್ಲಿ ಪ್ರತಿನಿಧಿಯಾಗಿ 20 ವರ್ಷಗಳ ಸೇವೆ ಪ್ರಸ್ತುತ ಡಿವಿಜನಲ್ ಮ್ಯಾನೇಜರ್ ಕ್ಲಬ್ ಸದಸ್ಯ ಮತ್ತು ಮುಖ್ಯ ಜೀವವಿಮಾ ಸಲಹೆಗಾರ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಮತ್ತು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಸೂರೆನ್ಸ್ ಕಂಪನಿ ವಿಮಾ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಾಶ್ ರೈರವರ ತಂದೆ. ಬೈಲುಗುತ್ತು ದಿ.ಬಾಲಕೃಷ್ಣ ರೈ ಸಾರಕರೆ, ತಾಯಿ ದೇವಕಿ ರೈ ಸಾರಕರೆ, ಪತ್ನಿ ಜೀವಿತಾ ಎಸ್. ರೈ, ಮಕ್ಕಳಾದ ಚೈತಾಲಿ ಪಿ.ರೈ, ಐಶಾನಿ ಪಿ. ರೈ.

LEAVE A REPLY

Please enter your comment!
Please enter your name here