ಪ್ರವೀಣ್ ಹತ್ಯೆಗೈದ ಮೂವರ ಬಂಧನ, ಹತ್ಯೆಯ ಬಳಿಕ ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದ ಆರೋಪಿಗಳು : ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್

0

ಮಂಗಳೂರು:ಪ್ರವೀಣ್ ಹತ್ಯೆ ಪ್ರಕರಣದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಸೆ.11ರಂದು ಪತ್ರಿಕಾಗೋಷ್ಠಿ ನಡೆಸಿ ‘ಪ್ರವೀಣ್ ನೆಟ್ಟಾರು ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತ ಮೂವರು ಸ್ಥಳೀಯರೇ ಆಗಿದ್ದಾರೆ. ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ  ಸರಬರಾಜು ಕೆಲಸ ಮಾಡುವ ಸುಳ್ಯದ ನಿವಾಸಿ ಶಿಯಾಬ್(33), ಚಿಕನ್ ಸಪ್ಲಯರ್ ರಿಯಾಜ್ ಅಂಕತ್ತಡ್ಕ(27), ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಬಶೀರ್ ಎಲಿಮಲೆ ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಮಾಹಿತಿ ಮೊದಲೇ ಇತ್ತು ಆದರೆ ಅವರು ಬೇರೆ ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ಪತ್ತೆ ಹಚ್ಚಲು ತಡವಾಯ್ತು. 15 ದಿನಗಳ ನಂತರ ಇದೀಗ ಪ್ರಮುಖ ಅರೋಪಿಗಳನ್ನು ಪತ್ತೆಹಚ್ಚಿದ್ದೇವೆ. ಇವರಿಗೆ ಹಳೆ ಮೇಜರ್ ಕೇಸ್ ಗಳು ಇಲ್ಲ. ಇವರಿಗೆ ಪಿ.ಎಫ್.ಐ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುವುದು. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಆ ಬಳಿಕ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ತನಿಖೆಯ ಬಳಿಕ ಖಚಿತ ಮಾಹಿತಿ ತಿಳಿಸುತ್ತೇವೆ. ಆರೋಪಿಗಳು ಬ್ಲ್ಯಾಕ್ ಕಲರ್ ಸ್ಪ್ಲೆಂಡರ್ ಬೈಕ್ ನಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿದ್ದಾರೆ. ಒಟ್ಟು ಆರು ವಾಹನಗಳನ್ನು ಈ ಕೃತ್ಯಕ್ಕೆ ಬಳಸಲಾಗಿದೆ. ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮುಂದಕ್ಕೆ ಪತ್ತೆಹಚ್ಚಲಿದ್ದೇವೆ. ಆರೋಪಿಗಳಿಗೆ ಯಾರೆಲ್ಲಾ ಆಶ್ರಯ, ಸಹಕಾರ ನೀಡಿದ್ದಾರೆ ಎಂಬುದನ್ನೂ ಪತ್ತೆಹಚ್ಚಲಿದ್ದೇವೆ. ಪ್ರವೀಣ್ ರನ್ನು ಯಾಕೆ ಗುರಿಯಾಗಿಸಿದ್ದರು ಎಂಬ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿದುಬರಬೇಕಿದೆ. ತನಿಖೆಯ ಸಂಪೂರ್ಣ ವರದಿಯನ್ನು ಎನ್.ಐ.ಗೆ ನೀಡಲಿದ್ದೇವೆ ಮುಂದಕ್ಕೆ ಅವರು ತನಿಖೆ ಮುಂದುವರೆಸಲಿದ್ದಾರೆ. ಬಂಧಿತ ಮೂರು ಪ್ರಮುಖರ ವಿಚಾರಣೆಯ ಬಳಿಕ ಪ್ರಕರಣವನ್ನು ಎನ್.ಐ.ಎಗೆ ಹಸ್ತಾಂತರಿಸುತ್ತೇವೆ ಎಂದರು. 

LEAVE A REPLY

Please enter your comment!
Please enter your name here