ಆ.13: ಪುತ್ತೂರು ತಾ| ಬಂಟರ ಸಂಘದಿಂದ `ಆಟಿಡೊಂಜಿ ದಿನ-2022′ – ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಪ್ರಶಸ್ತಿ ಪ್ರದಾನ

0

ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ನಿರ್ದೇಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಆಶ್ರಯದಲ್ಲಿ ಮಹಿಳಾ, ಯುವ ವಿದ್ಯಾರ್ಥಿ ಬಂಟರ ಸಹಯೋಗದಲ್ಲಿ `ಆಟಿಡೊಂಜಿ ದಿನ-2022′ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಆ.13ರಂದು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.

ಈ ಬಗ್ಗೆ ಆ.11ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು, ಆ.13ರಂದು ಬೆಳಗ್ಗೆ 9.30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಉದ್ಯಮಿಗಳಾದ ಕರುಣಾಕರ ರೈ ದೇರ್ಲ ದೀಪಪ್ರಜ್ವಲನೆಗೈಯಲಿದ್ದಾರೆ. ಪಿ.ಡಿ. ಕೃಷ್ಣಕುಮಾರ್ ರೈ ಪುಣ್ಚಪ್ಪಾಡಿಯವರು ಆಟಿದ ಕೂಟ ಉದ್ಘಾಟಿಸಲಿದ್ದಾರೆ. ಹಿರಿಯ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈಯವರು ಆಟಿದ ಕೂಟದ ಚಾವಡಿ ಮಾತುಗಳನ್ನಾಡಲಿದ್ದಾರೆ ಎಂದು ಹೇಳಿದರು.

ಪೂರ್ವಾಹ್ನ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 11 ಜನ ಸಾಧಕರಿಗೆ ಚಿನ್ನದ ಪದಕ ಸಹಿತ ಸನ್ಮಾನ ಸಮಾರಂಭ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸನ್ಮಾನಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಡಮಜಲು ಸುಭಾಶ್ ರೈಯವರಿಂದ ಪ್ರಾಯೋಜಿಸಲ್ಪಟ್ಟ ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ವಿಠಲ ರೈ ಬಾಲ್ಯೊಟ್ಟುಗುತ್ತು ಇವರಿಗೆ, ಡಾ.ಬಿ.ಸಂಜೀವ ರೈ ಪ್ರಾಯೋಜಿತ ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಖ್ಯಾತ ವೈದ್ಯ ಡಾ.ಎಂ.ಕೆ.ಪ್ರಸಾದ್‌ರವರಿಗೆೆ, ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಜಯರಾಮ ರೈ ಮಿತ್ರಂಪಾಡಿ ಅಬುದಾಭಿ ಇವರಿಂದ ಪ್ರಾಯೋಜಿತ ಸಮಾಜ ಸೇವಾ ‘ಮಿತ್ರ’ ಪ್ರಶಸ್ತಿಯನ್ನು ಸಮಾಜ ಸೇವಕ, ರೈ ಎಸ್ಟೇಟ್ ಕೋಡಿಂಬಾಡಿಯ ಅಶೋಕ್ ಕುಮಾರ್ ರೈಯವರಿಗೆ, ಕೆ. ಸೀತಾರಾಮ ರೈ ಸವಣೂರು ಪ್ರಾಯೋಜಿತ ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಸಹಕಾರಿ ಧುರೀಣ ಉಮೇಶ್ ರೈ ಪಟ್ಟೆ ನೆಲ್ಯಾಡಿಯವರಿಗೆ, ಮಿತ್ರಂಪಾಡಿ ಪುರಂದರ ರೈ ಪ್ರಾಯೋಜಿತ ಪಂಚಮಿ ಉದ್ಯಮ ಸಿರಿ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಸಂಜೀವ ಆಳ್ವ ಹಾರಾಡಿಯವರಿಗೆ, ಅಗರಿ ಭಂಡಾರಿ ಸಹೋದರರು ಪ್ರಾಯೋಜಿತ `ದೇಶ ಸೇವಾ ಆಗರಿ ಪ್ರಶಸ್ತಿ’ಯನ್ನು ಮಾಜಿ ಸೈನಿಕ ಅಮ್ಮಣ್ಣ ರೈ ಪಾಪೆಮಜಲುರವರಿಗೆ, ಬಂಟರ ಸಂಘ ಪುತ್ತೂರು ಪ್ರಾಯೋಜಿತ ಪುತ್ತೂರು ಬಂಟ ‘ಸಿರಿ’ ಪ್ರಶಸ್ತಿಯನ್ನು ಆದರ್ಶ ಗೃಹಿಣಿ ಗುಲಾಬಿ ಎ ರೈ ಮಠಂತಬೆಟ್ಟು ಇವರಿಗೆ, ಎನ್ ಚಂದ್ರಹಾಸ ಶೆಟ್ಟಿಯವರಿಂದ ಪ್ರಾಯೋಜಿಸಲ್ಪಟ್ಟ ದಿ| ರೇಖಾ ಮುತ್ತಪ್ಪ ರೈ ಮತ್ತು ದಿ| ಜಯಂತ್ ರೈ ಸ್ಮರಣಾರ್ಥ ಕ್ರೀಡಾ ಪ್ರಶಸ್ತಿಯನ್ನು ಉತ್ತಮ ಕ್ರೀಡಾಪಟು ಪ್ರೇಮನಾಥ ಶೆಟ್ಟಿ ಕಾವು ಅವರಿಗೆ, ದೇರ್ಲ ಕರುಣಾಕರ ರೈ ಪ್ರಾಯೋಜಿತ ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿಯನ್ನು ಉತ್ತಮ ಶಿಕ್ಷಕಿ ಭಾರತಿ ಎಸ್..ರೈಯವರಿಗೆ, ಅರಿಯಡ್ಕ ಚಿಕ್ಕಪ್ಪ ನಾÊಕ್ ಪ್ರಾಯೋಜಿತ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿ(ಪಿಯುಸಿ)ಯನ್ನು ಸಾಧಕ ವಿದ್ಯಾರ್ಥಿಗಳಾದ ಕೃಪಾ ಎಸ್ ರೈ ಗುಮ್ಮಟಗದ್ದೆಯವರಿಗೆ, ಚನಿಲ ತಿಮ್ಮಪ್ಪ ಶೆಟ್ಟಿ ಪ್ರಾಯೋಜಿತ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿ’ (ಎಸ್‌ಎಸ್‌ಎಲ್‌ಸಿ) ಪ್ರಶಸ್ತಿಯನ್ನು ವಿದ್ಯಾರ್ಥಿ ಪ್ರಮಿತ್ ರೈ ಕುಯ್ಯಾರು ಇವರಿಗೆ ಚಿನ್ನದ ಪದಕ ಸಮೇತವಾಗಿ ಪ್ರದಾನ ಮಾಡಲಾಗುವುದು ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಪಂಜೊಟ್ಟು ಚಂದ್ರಕಲಾ ವೈ ಚೌಟ ಕಕ್ಕೆಪದವುರವರು ಆಶಯ ಮಾತುಗಳನ್ನಾಡಲಿದ್ದಾರೆ. ಅಬುದಾಭಿಯ ಉದ್ಯಮಿ ಮಿತ್ರಂಪಾಡಿ ಜಯರಾಮ್ ರೈಯವರು ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಎನ್. ಜಗನ್ನಾಥ ರೈ ಮಾದೋಡಿ, ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ಪುತ್ತೂರು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷÀ್ಣ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೆಳಗ್ಗೆ ಗಂಟೆ 9ರಿಂದ ಉಪಹಾರದ ವ್ಯವಸ್ಥೆಯಿದೆ. ಮಧ್ಯಾಹ್ನ ಗಂಟೆ 1ರಿಂದ ಸಹಭೋಜನ ನಡೆಯಲಿದೆ ಎಂದು ಶಶಿಕುಮಾರ್ ರೈ ಮಾಹಿತಿ ನೀಡಿದರು.

ಬಂಟರ ಸಂಘದ ಮೂಲಕ ವರ್ಷಂಪ್ರತಿ ನಡೆಯುವ ವಿದ್ಯಾನಿಽ, ಕ್ಷೇಮನಿಧಿ ಮತ್ತು ಸಾಧಕ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲು ಸಮಾಜ ಬಾಂಧವರಿಗೆ ಅವಕಾಶವಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪಿಜಿನಡ್ಕಗುತ್ತು ರಮೇಶ್ ಬಿ. ರೈ ಡಿಂಬ್ರಿ, ಕೋಶಾಽಕಾರಿ ಆಳ್ವರಮನೆ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಮಾಧ್ಯಮ ಪ್ರಮುಖರಾದ ಉಮಾಪ್ರಸಾದ್ ರೈ ನಡುಬೈಲು ಉಪಸ್ಥಿತರಿದ್ದರು.

ಬಂಟರ ಸಂಘ ಪುತ್ತೂರಿಗಾಗಿ ಜಾಗ ಖರೀದಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಬೇಕಾದ ವ್ಯವಸ್ಥೆಗಳಾಗಿವೆ. ಮುಂದಿನ 6 ತಿಂಗಳಲ್ಲಿ ಖರೀದಿ ಮಾಡಿ ಅದನ್ನು ಬಂಟರ ಸಂಘದ ಸ್ವತ್ತನ್ನಾಗಿ ಮಾಡಲು ಕಾರ್ಯಕಾರಿ ಸಮಿತಿ ಕಟಿಬದ್ಧವಾಗಿದೆ. ಇದಕ್ಕೆ ಎಲ್ಲಾ ಬಂಟ ಬಾಂಧವರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಪುತ್ತೂರು ತಾಲೂಕಿನ ಎಲ್ಲಾ ಸಮಾಜ ಬಾಂಧವರು 105 ರೂ.ಗಳನ್ನು ಸದಸ್ಯತನದ ಶುಲ್ಕವನ್ನಾಗಿ ನೀಡಿ ಸದಸ್ಯರಾಗಬೇಕು ಎಂದು ಶಶಿಕುಮಾರ್ ರೈ ಮನವಿ ಮಾಡಿಕೊಂಡರು. ಬಂಟರ ಸಂಘ ಪುತ್ತೂರಿಗಾಗಿ ಜಾಗ ಖರೀದಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಬೇಕಾದ ವ್ಯವಸ್ಥೆಗಳಾಗಿವೆ. ಮುಂದಿನ 6 ತಿಂಗಳಲ್ಲಿ ಖರೀದಿ ಮಾಡಿ ಅದನ್ನು ಬಂಟರ ಸಂಘದ ಸ್ವತ್ತನ್ನಾಗಿ ಮಾಡಲು ಕಾರ್ಯಕಾರಿ ಸಮಿತಿ ಕಟಿಬದ್ಧವಾಗಿದೆ. ಇದಕ್ಕೆ ಎಲ್ಲಾ ಬಂಟ ಬಾಂಧವರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಪುತ್ತೂರು ತಾಲೂಕಿನ ಎಲ್ಲಾ ಸಮಾಜ ಬಾಂಧವರು 105 ರೂ.ಗಳನ್ನು ಸದಸ್ಯತನದ ಶುಲ್ಕವನ್ನಾಗಿ ನೀಡಿ ಸದಸ್ಯರಾಗಬೇಕು ಎಂದು ಶಶಿಕುಮಾರ್ ರೈ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here