ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತುಗೆ ಆಯ್ಕೆ

0

  • ಅಧ್ಯಕ್ಷ: ಅಬ್ದುಲ್ ಸಮದ್ ಬಾವಾ, ಕಾರ್ಯದರ್ಶಿ: ನಾರಾಯಣ ಕುಂಬ್ರ, ಕೋಶಾಧಿಕಾರಿ: ಹೈದರ್ ಆಲಿ ಐವತ್ತೊಕ್ಲು, ಉಪಾಧ್ಯಕ್ಷ: ಸಿಶೇ ಕಜೆಮಾರ್, ಜತೆ ಕಾರ್ಯದರ್ಶಿ: ಅಪೂರ್ವ ದರ್ಬೆ

ಪುತ್ತೂರು: ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತುನ 2022-23 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಅಬ್ದುಲ್ ಸಮದ್ ಬಾವಾ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಕುಂಬ್ರ, ಉಪಾಧ್ಯಕ್ಷರಾಗಿ ಸಿಶೇ ಕಜೆಮಾರ್, ಕೋಶಾಧಿಕಾರಿಯಾಗಿ ಹೈದರ್ ಆಲಿ ಐವತ್ತೊಕ್ಲು, ಜತೆ ಕಾರ್ಯದರ್ಶಿಯಾಗಿ ಅಪೂರ್ವ ದರ್ಬೆರವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ. ಉಳಿದಂತೆ ಸಲಹೆಗಾರರಾಗಿ ಅಬ್ದುಲ್ ಹಮೀದ್ ಕೆ ಮತ್ತು ಜಲೀಲ್ ಮುಕ್ರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿಶ್ವನಾಥ ಕುಲಾಲ್ ಮಿತ್ತೂರು, ಆನಂದ ಅಡ್ಕಸ್ಥಳ, ಕುಮಾರ್ ಪೆರ್ನಾಜೆ, ಮಂಜುಳಾ ಸುಬ್ರಹ್ಮಣ್ಯ, ಕಮರುದ್ದೀನ್ ಸಾಲ್ಮರ, ಸಫ್ವಾನ್ ಸವಣೂರು, ಪ್ರಜ್ಞಾ ಕುಲಾಲ್, ಪದ್ಮಾ ಆಚಾರ್ಯ, ಸಿದ್ದೀಕ್ ಬೀಟಿಗೆ, ಕೆ.ಎಂ.ಖಾದರ್‌ರವರುಗಳನ್ನು ಆಯ್ಕೆ ಮಾಡಲಾಗಿದೆ.

ಆ.21ಪದಗ್ರಹಣ, ಬಹುಭಾಷಾ ಚುಟುಕು ಕವಿಗೋಷ್ಠಿ
ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತುನ ಪದಾಧಿಕಾರಿಗಳ ಪದಗ್ರಹಣ ಮತ್ತು ಬಹುಭಾಷಾ ಚುಟುಕು ಕವಿಗೋಷ್ಠಿಯು ಆ.೨೧ ರಂದು ಬೆಳಿಗ್ಗೆ ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆಯಲಿದೆ. ಚುಟುಕು ಸಾಹಿತ್ಯ ಪರಿಷತ್ತುನ ಜಿಲ್ಲಾಧ್ಯಕ್ಷ ಹರೀಶ್ ಸುಳಾಯ ಒಡ್ಡಂಬೆಟ್ಟು ಕಾರ್ಯಕ್ರಮ ಉದ್ಘಾಟಿಸಲಿದ್ದು, ಚುಟುಕು ಸಾಹಿತ್ಯ ಪರಿಷತ್ತುನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ರಘುನಾಥ ರೈ ನುಳಿಯಾಲು ವಹಿಸಲಿದ್ದು, ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತುನ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ಪುತ್ತೂರು ಚುಟುಕು ಸಾಹಿತ್ಯ ಪರಿಷತ್ತುನ ಅಧ್ಯಕ್ಷ ಅಬ್ದುಲ್ ಸಮದ್ ಬಾವಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ತುನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here