ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ರಾಷ್ಟ್ರಧ್ವಜ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ: ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಹರ್ ಫರ್ ತಿರಂಗ ಪ್ರತಿಮನೆಯಲ್ಲೂ ಆ.13 ರಿಂದ 15 ರ ತನಕ ರಾಷ್ಟ್ರಧ್ವಜವನ್ನು ಹಾರಿಸುವ ಪ್ರಯುಕ್ತ ರಾಷ್ಟ್ರದ್ವಜ ವಿತರಣೆ ಕಾರ್ಯಕ್ರಮ ಆ. 11 ರಂದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಡಬ ಉಪ ತಹಶೀಲ್ದಾರ್ ಗೋಪಾಲ ಅವರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಿಟ್ಟು ಕೆ ಅವರಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ಸ್ವಾತಂತ್ಯದ ಅಮೃತ ಮಹೋತ್ಯೋತ್ಸವನ್ನು ಅತ್ಯಂತ ಅಚ್ಚುಕಟ್ಟಾಗಿ ಇಡಿ ದೇಶದಲ್ಲಿ ವಿಜೃಂಬನೆಯಿಂದ ದೇಶ ಭಕ್ತಿಯನ್ನು ಜನರಲ್ಲಿ ಮೂಡಿಸಬೇಕು ದೇಶದ ಧ್ವಜದ ಬಗ್ಗೆ ಗೌರವ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಪ್ರತಿ ಮನೆ ಮನೆಯಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಧ್ವಜವನ್ನು ಹಾರಿಸಲು 75ರ ಸಂಭ್ರಮದಲ್ಲಿ ನಮಗೆ ಅವಕಾಶವನ್ನು ಮಾಡಿಕೊಟ್ಟಿದೆ. ಈ ತ್ರಿವರ್ಣ ಧ್ವಜವನ್ನು ಮನೆ ಮನೆಗೆ ಮುಟ್ಟಿ ಸುವಲ್ಲಿ ನಾವೆಲ್ಲರೂ ಕಾರ್ಯಪ್ರವೃತರಾಗೋಣ ಎಲ್ಲರೂ ನಿಯಮಗಳನ್ನು ಪಾಲಿಸಿ ತ್ರಿವರ್ಣ ಧ್ವಜ ಹಾರಿಸಿ 75 ನೇ ಅಮೃತ ಮಹೋತ್ಸವನ್ನು ಆಚರಿಸೋಣ ಎಂದರು.

ಗ್ರಾ. ಪಂ.ಅಧ್ಯಕ್ಷ  ಗಂಗಮ್ಮ ಸಭೆಯ ಅಧ್ಯಕ್ಷೆ ತೆ ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ಇಮ್ಯಾನುವೆಲ್, ಸದಸ್ಯರಾದ ಚಂದ್ರಶೇಖರ ಹಳೆ ನೂಜಿ ಶ್ರೀದರ ಗೌಡ ಗೋಳ್ತಿಮಾರ್ ವಸಂತ ಕುಬಲಾಡಿ, ಜೋಸೆಫ್ ಪಾರೆಕಾಟಿಲ್, ಉಮೇಶ ಸಾಕೋಟೆ ಜಾಲು, ವಿನಯ ಕುಮಾರಿ,ಮೀನಾಕ್ಷಿ, ಭವಾನಿ ಕೊಪ್ಪ, ಚಂದ್ರಾವತಿ ಜಾಲು, ಶಾಲಾ ಮುಖ್ಯೋ ವಾಧ್ಯಾಯರು, ಪಶು ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿ ಕಿರಣ ಕುಮಾರಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಧಿಕಾರಿ ದಯಾ ಕಿರಣ್, ಪಂಚಾಯತ್ ನಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.೦ ಗುರುವ ಸ್ವಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.