ಶ್ರೀರಾಮ ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ-ರಕ್ಷಾಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀರಾಮ ಪ್ರೌಢಶಾಲೆಯಲ್ಲಿ ಆ.13ರಂದು ಮಧುಕರ ಸಭಾಂಗಣದಲ್ಲಿ ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಶ್ರೀ ಮಹೇಶ್ವರ ಭಟ್ ಬರೆಪ್ಪಾಡಿ ನಿವೃತ್ತ ಪ್ರಾಂಶುಪಾಲರು ಶ್ರೀರಾಮ ಪದವಿಪೂರ್ವ ಮಹಾವಿದ್ಯಾಲಯ, ಇವರುರಕ್ಷಾ ಬಂಧನದ ಮಹತ್ವ ಹಾಗೂ ಸಂಸ್ಕೃತೋತ್ಸವ ಆಚರಣೆ ಅದರ ಆಶಯವನ್ನು ಅರಿತು ರಕ್ಷಾಬಂಧನ ಹಬ್ಬವನ್ನುಆಚರಿಸಬೇಕು ಎಂದು ತಿಳಿಸಿದರು.

ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ಸ್ವಭಾಷ ಸ್ವಭೂಷ ಸ್ವಾಭಿಮಾನ ಸಂರಕ್ಷಣೆ ಅಂಶಗಳನ್ನು ಅಳವಡಿಸಿಕೊಳ್ಳೋಣ ಎಂದು ಹರಿಸಿದರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್, ಪ್ರೌಢಶಾಲೆಯ ಆಡಳಿತಾಧಿಕಾರಿ ಶಾಂಭವಿ ಮಾತಾಜಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಎಂ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಸಿಕೊಂಡು ಸಿಹಿಯನ್ನು ತಿನ್ನಿಸುವುದರ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡರು. ಸಂಸ್ಕೃತ ರೂಪಕ ಹಾಡು ನೃತ್ಯ ಕಾರ್ಯಕ್ರಮರಂಜನೆಗೆ ಸಾಕ್ಷಿಯಾಯಿತು. ಈ ಸಂದರ್ಭಲದಲ್ಲಿ ಸ್ಪರ್ಧಾ ವಿಜೇತರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಶ್ರಮಿಕ ಕಾರ್ಯಕ್ರಮ ನಿರೂಪಿಸಿ ,ಚಿನ್ಮಯಿ ಸ್ವಾಗತಿಸಿ ಅನುಷಾ ಆಳ್ವ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.