ಬಂಟ್ವಾಳದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ನಡಿಗೆ, ವಾಹನ ಜಾಥ

0

ವಿಟ್ಲ : ಸ್ವಾತಂತ್ರ್ಯದ ಅಮೃತಮಹೊತ್ಸವದ ಅಂಗವಾಗಿ ಬಂಟ್ವಾಳದಲ್ಲಿ ಅಮೃತಭಾರತಿಗೆ ಗಾನ‌ನುಡಿಯ ದೀವಿಗೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಿಗ್ಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ‌ ಬಂಟರ ಭವನದ ವರೆಗೆ ಬೃಹತ್ ವಾಹನ ಜಾಥಾ ನಡೆಯಿತು. ವಾಹನ ಜಾಥವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಬಾನಿನ ಅಂಗಳಕ್ಕೆ ತ್ರಿವರ್ಣ ಬಲೂನ್ ಹಾರಿಸಿ ಚಾಲನೆ ನೀಡಿದರು. ಬಳಿಕ ಶಾಸಕ ರಾಜೇಶ್ ನಾಯ್ಕ್ ಸಹಿತ ಅಧಿಕಾರಿಗಳು ಪೊಳಲಿ ಕೈಕಂಬ ದ್ವಾರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಬಳಿಕ ವಾಹನ ಜಾಥದ ಮೂಲಕ ಬಂಟರ ಭವನಕ್ಕೆ ,ಅಗಮಿಸಿದರು.


ಶಾಸಕ ರಾಜೇಶ್ ನಾಯ್ಕ್ ರವರ ಜೊತೆಯಲ್ಲಿ ಅಧಿಕಾರಿಗಳು ಹಾಗೂ ಹಿರಿಯರ ಉಪಸ್ಥಿತಿಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಆಗಮಿಸಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿದರು.

ಸ್ವಾತಂತ್ರ್ಯದ ಅಮೃತಮಹೀತ್ವವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 10.30 ರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಯ ಕಣಗಳು ಎಂಬ ವಿಷಯದಲ್ಲಿ ಕಾರ್ಕಳದ ಪತ್ರಕರ್ತ ಶ್ರೀಕಾಂತ್‌ ಶೆಟ್ಟಿ ಯವರು ಉಪನ್ಯಾಸ ನೀಡಿದರು, ಬಳಿಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು.

ಎಂ.ಎಲ್.ಸಿ.ಪ್ರತಾಪ್ ಸಿಂಹ ನಾಯಕ್ , ಬಂಟ್ವಾಳ ತಹಶಿಲ್ದಾರ್ ಸ್ಮಿತಾರಾಮು, ಇ.ಒ.ರಾಜಣ್ಣ, ಎಸ್.ಪಿ. ಹೃಷಿಕೇಶ್ ಸೋನಾವಣೆ, ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್, ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ಟಿ‌.ಡಿ.ನಾಗರಾಜ್, ಎಸ್.ಐ.ಗಳಾದ ಅವಿನಾಶ್, ಹರೀಶ್ , ಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಸ್ವಾಮಿ, ಅರಣ್ಯಾ ಅಧಿಕಾರಿ ರಾಜೇಶ್, ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಪಂಚಾಯತ್ ರಾಜ್ ಎ.ಇ.ಇ.ತಾರಾನಾಥ್, ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಮೆಸ್ಕಾಂ .ಇ.ಇ‌.ಪ್ರಶಾಂತ್ ಪೈ, ಎ‌ಇಇ ನಾರಾಯಣ ಭಟ್, ಪ್ರಾದೇಶಿಕ ಸಾರಿಗೆ ಇಲಾಖಾ ಅಧಿಕಾರಿ ಚರಣ್, ಒ.ಬಿಸಿ.ಕಲ್ಯಾಣಾಧಿಕಾರಿ ಬಿಂದಿಯಾ, ಪ್ರಮುಖರಾದ ಸುದರ್ಶನ ಮೂಡುಬಿದಿರೆ, ಕಸ್ತೂರಿ ಪಂಜ, ಜಗದೀಶ್ ಶೇಣವ, ಪ್ರಸಾದ್ ಕುಮಾರ್ ಬೆಳ್ತಂಗಡಿ, ವಿಕಾಸ ಪುತ್ತೂರು, ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ , ಹರಿಕೃಷ್ಣ ಬಂಟ್ವಾಳ,ತುಂಗಪ್ಪ ಬಂಗೇರ, ಸುಲೋಚನಾ ಜಿ.ಕೆ.ಭಟ್, ಮಾದವ ಮಾವೆ, ಚೆನ್ನಪ್ಪ ಕೋಟ್ಯಾನ್, ರವೀಂದ್ರ ಕಂಬಳಿ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ರಾಮ್ ದಾಸ್ ಬಂಟ್ವಾಳ, ಡೊಂಬಯ್ಯ ಅರಳ , ರವೀಶ್ ಶೆಟ್ಟಿ ಕರ್ಕಳ, ಮೋನಪ್ಪ ದೇವಸ್ಯ, ಉದಯರಾವ್ ,ಪುರುಷೋತ್ತಮ ವಾಮದಪದವು, ಸುದರ್ಶನ ಬಜ, ಗಣೇಶ್ ರೈ ಮಾಣಿ, ರಶ್ಮಿತ್ ಶೆಟ್ಟಿ, ಪ್ರಭಾಕರ್ ಪ್ರಭು, ಪುಷ್ಪರಾಜ ಚೌಟ, ವಜ್ರನಾಥ ಕಲ್ಲಡ್ಕ, ಪ್ರದೀಪ್ ಅಜ್ಜಿಬೆಟ್ಟು,ಹರ್ಷಿಣಿಪುಷ್ಪಾನಂದ , ಸೀಮಾಮಾದವ, ರತ್ನಕುಮಾರ್ ಚೌಟ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಭವನದಲ್ಲಿ ಆಗಮಿಸಿ ದ ಪ್ರತಿಯೊಬ್ಬ ರಿಗೂ ಜೈನ ಸಂಪ್ರದಾಯ ತಿಂಡಿ ತಿನಿಸು ಗಳಾದ ಕೇಕ್, ಮಸಾಲೆದೋಸೆ, ಸಜ್ಜಿಗೆ ಅವಲಕ್ಕಿ ,ಚಹಾ, ಕಾಫಿ ನೀಡಲಾಯಿತು. ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಬಳಿಕ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here