ಅಡಿಕೆ ಕೊಳೆರೋಗ ನಿವಾರಣೆಗೆ ಬೋರ್ಡೋದ್ರಾವಣದಲ್ಲಿ ಆಕರ್ಷಣ್ ಸುಣ್ಣದ ಬಳಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಿಮೆ ತಾಪಮಾನ ಮತ್ತು ಹೆಚ್ಚಿನ ಆದ್ರ್ರತೆಯೊಂದಿಗೆ‌ ನಿರಂತರ ಭಾರೀ ಮಳೆಯು ಅಡಿಕೆಯಲ್ಲಿ ಸಾಂಕ್ರಾಮಿಕ ಕೊಳೆ ರೋಗದ ಹರಡುವಿಕೆಗೆ ಮುಖ್ಯಕಾರಣ. ಅಡಿಕೆಗೆ ವರ್ಷದಿಂದ ವರ್ಷಕ್ಕೆ ಕೊಳೆ ರೋಗಬಾಧೆ ತೀವ್ರಗೊಳ್ಳುತ್ತಿದೆ. ರೋಗ ಸಾಂಕ್ರಾಮಿಕವಾಗಿದ್ದು, ಒಂದುಗಿಡಕ್ಕೆ ತಗಲಿತೆಂದರೆ ಉಳಿದೆಲ್ಲ ಗಿಡಗಳಿಗೂ ವ್ಯಾಪಿಸುತ್ತದೆ. ಇದಕ್ಕೆ ಶಾಶ್ವತ ಪರಿಣಾಮಕಾರಿ ಔಷಧ ಮಾತ್ರ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಮುನ್ನೆಚ್ಚರಿಕೆ ನಿರ್ವಹಣೆ ಮಾತ್ರ ಕೊಳೆರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.

ರೋಗದ ಹತೋಟಿಗೆ ಕೈಗೊಳಬೇಕಾದ ಕ್ರಮಗಳು :

ಕೊಳೆರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು
ತೆಗೆದು ನಾಶಪಡಿಸಬೇಕು.ಬೋರ್ಡೋದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರರೋಗದ ಸಮರ್ಪಕ ನಿರ್ವಹಣೆ ಸಾಧ್ಯ.

ಇದನ್ನು ಶೇಕಡಾ 1 ರ ಬೋರ್ಡೊದ್ರಾವಣದ (ಮೈಲುತುತ್ತನ್ನು) ಸಿಂಪಡಣೆಯಿಂದ ನಿಯಂತ್ರಿಸಬಹುದು. ಶೇಕಡಾ1ರ ಬೋರ್ಡೋದ್ರಾವಣ ತಯಾರಿಸಲು 10 ಲೀಟರ್ ನೀರಿನಲ್ಲಿ 1ಕಿ.ಗ್ರಾಂ. ಕಾಪರ್ಸಲೈಟ್ (ಮೈಲುತುತ್ತು) 10 ಲೀಟರ್ ನೀರಿನಲ್ಲಿ 1ಕಿ.ಗ್ರಾಂ ಆಕರ್ಷಣ್ ಸುಣ್ಣವನ್ನು ಬೇರೆ ಬೇರೆಯಾಗಿ ಬೆರೆಸಿ ಆಮೇಲೆ ಬೇರೊಂದು ಪ್ಲಾಸ್ಟಿಕ್ ಪಾತ್ರೆಯಲ್ಲಿ (ಡ್ರಮ್) ಏಕ ಕಾಲದಲ್ಲಿ ಈ ಎರಡೂ ದ್ರಾವಣವನ್ನು ಸುರಿಯುತ್ತಾ ಕರಡಬೇಕು. ಇದಕ್ಕೆ 40 ಗ್ರಾಂ ಗಮ್ ಅನ್ನು ಸೇರಿಸಬೇಕು. ನಂತರ ಒಂದು ಸ್ವಚ್ಛ‌ ಬ್ಲೇಡ್ ಅನ್ನು ಈ ಮಿಶ್ರಣದಲ್ಲಿ ಮುಳುಗಿಸಿ ತೆಗೆದಾಗ ಕೆಂಪುಬಣ್ಣ ಇದರ ಮೇಲೆ ಕಂಡುಬಂದಲ್ಲಿ ಇನ್ನು ಸ್ವಲ್ಪ ಆಕರ್ಷಣ್ ಸುಣ್ಣದ ನೀರನ್ನು ಸೇರಿಸಬೇಕು. ಬ್ಲೇಡಿನ ಮೇಲೆ ನೀಲಿಬಣ್ಣ ಕಂಡು ಬಂದರೆ ಶೇಕಡಾ1ರ ಬೋರ್ಡೊದ್ರಾವಣ ಸಿದ್ಧವಾಗಿದೆ ಎಂದು ಖಚಿತವಾಗುತ್ತದೆ. ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ 30 ರಿಂದ 45 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು. ಮಳೆಗಾಲ ಮುಂದುವರಿದಲ್ಲಿ ಮೂರನೇಬಾರಿಯೂ ಸಿಂಪಡಸಬೇಕಾಗುತ್ತದೆ. ರೋಗಾಣು ಮಣ್ಣಿನ ಪದರದಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.