ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶೀಂಟೂರ ಸ್ಮೃತಿ ಕಾರ್ಯಕ್ರಮ

0

ಸವಣೂರು: ನಾವು ಹಿರಿಯ ಆದರ್ಶ ಹಾಗೂ ಕನಸುಗಳನ್ನು ಸಾಕಾರಗೊಳಿಸಿ ಸಾಮಾಜಿಕ ಪ್ರಗತಿ ಹಾಗೂ ಸದೃಢ ಸಮಾಜ ನಿರ್ಮಾಣದ ಕಾರ್ಯ ಮಾಡಬೇಕು, ಶೀಂಟೂರು ನಾರಾಯಣ ರೈ ಅವರ ಶೈಕ್ಷಣಿಕ ಕ್ಷೇತ್ರದ ಪ್ರಗತಿಯ ಆಶಯವನ್ನು ಅವರ ಮಗ ಸಿತರಾಮ ರೈ ಈಡೇರಿಸಿದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.

ಅವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಂಗಣದಲ್ಲಿ ನಡೆದ ನಿವೃತ್ತ ಸೇನಾನಿ, ಶಿಕ್ಷಕ ದಿ|ಶೀಂಟೂರು ನಾರಾಯಣ ರೈ ಅವರ ಶೀಂಟೂರು ಸ್ಮೃತಿ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ನಾರಾಯಣ ರೈ ಅವರ ದೂರದೃಷ್ಠಿಯ ಫಲವಾಗಿ ಸವಣೂರಿನಲ್ಲಿ ವಿದ್ಯಾಸಂಸ್ಥೆ ಬೆಳೆದು ಹೆಮ್ಮರವಾಗಿದೆ, ಇಂತಹ ಅನೇಕ ವಿದ್ಯಾಸಂಸ್ಥೆಗಳಿಂದಾಗಿ ಇಂದು ಗ್ರಾಮೀಣ ಭಾಗಗಳಲ್ಲೂ ಲಕ್ಷಾಂತರ ಯುವಕರು ವಿದ್ಯವಂತರಾಗಿ ಹೊರಹೊಮ್ಮತ್ತಿದ್ದಾರೆ. ಶೀಘ್ರಗತಿಯಲ್ಲಿ ಪ್ರಗತಿಹೊಂದುತ್ತಿರುವ ಭಾರತ ಇನ್ನು ಹತ್ತು ಇಪ್ಪತ್ತು ವರ್ಷದಲ್ಲಿ ಇಡೀ ಜಗತ್ತಿನ ಯುವ ಜನತೆಗೆ ಉದ್ಯೋಗ ನೀಡುವಷ್ಟರಮಟ್ಟಿಗೆ ಬೆಳೆದು ನಿಲ್ಲಲಿದೆ ಎಂದು ಹೇಳಿದ ಗಿರಶ್ ನಂದನ್ ಇಂದಿನ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳಿದ್ದು, ವಿದ್ಯಾರ್ಥಿ ಜೀವನದಲ್ಲಿ ದೃತಿಗೆಡದೆ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಬೇಕು, ಸಾಮಾಜಿಕ ಜಾಲತಾಣಗಳ ಬಳಕೆ ಮಿತವಾಗಿರಲಿ ಎಂದರು.

ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ಡಾ|ಎಸ್.ರಂಗಯ್ಯ ಪ್ರಧಾನ ಭಾಷಣ ಮಾಡಿ ನಾರಾಯಣ ರೈ ಅವರ ಶಿಸ್ತುಬದ್ದ ಜೀವನ, ಆದರ್ಶಮಯ ಬದುಕು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು, ದೇಶ ಸೇವೆಯ ಬಳಿಕ ಅವರು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಡಿರುವುದರ ಹಿಂದೆ ಶೈಕ್ಷಣಿಕ ಕ್ರಾಂತಿಯ ಉದ್ದೇಶವಿತ್ತು , ಆ ಮೂಲಕ ಸಮಾಜಿಕ ಬದಲಾವಣೆಯ ಕನಸಿತ್ತು ಅವರ ದೂರದೃಷ್ಠಿಯ ವಿಚಾರವನ್ನು ಅವರ ಪುತ್ರ ಕಾರ್ಯಗತಗೊಳಿಸುತ್ತಿರುವುದು ಸಂತಸದ ವಿಚಾರ ಎಂದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸಿತಾರಮ ರೈ ಮಾತನಾಡಿ ಸವಣೂರಿನಲ್ಲಿ ವಿದ್ಯಾ ಸಂಸ್ಥೆ ಸ್ಥಾಪನೆಗೆ ನನ್ನ ತಂದೆ ನಾರಾಯಣ ರೈ ಅವರೇ ಪ್ರೇರಣೆಯಾಗಿದ್ದಾರೆ. ವರ್ಷಂಪ್ರತಿ ಅವರ ಹೆಸರಿನಲ್ಲಿ ವಿದ್ಯಾರ್ಥಿ ವೇತನ, ಮಾಜಿ ಸೈನಿಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲಲಾಗುತ್ತಿದೆ ಎಂದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯು ಸೇನೆಯ ನಿವೃತ್ತ ಸಾರ್ಜೆಂಟ್ ಸಾ.ಕೆ.ಬಾಲಕೃಷ್ಣ ಶೆಟ್ಟಿ ಅವರಿಗೆ ಶೀಂಟೂರು ಪುರಸ್ಕಾರ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ಸುರಕ್ಷಾಧಿಕಾರಿ ವಾಗೀಶ್ವರಿ ಕೆ ಅವರಿಗೆ ವಿದ್ಯಾರಶ್ಮಿ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೀಂಟೂರು ನಾರಾಯಣ ರೈ ಅವರ ಪ್ರತಿಮೆಗೆ ಎಸ್‌ಎನ್‌ಆರ್ ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವೇದಿಕೆಯಲ್ಲಿ ಎಸ್‌ಎನ್ ಆರ್ ರೂರಲ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ|ನಾರಾಯಣ ಮೂರ್ತಿ ಕೆ, ನಿಕಟಪೂರ್ವ ಪ್ರಿನ್ಸಿಪಾಲ್ ರಾಜಲಕ್ಷ್ಮೀ ರೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶೀಂಟೂರು ನಾರಾಯಣ ರೈ ಪ್ರತಿಷ್ಠಾನದ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಮ್ಯಕ್ ಜೈನ್ ಹಾಗೂ ಹರ್ಷಿತ್ ಕೆ. ಡಿ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾರ್ಥಿಗಳು ಶೀಂಟೂರು ನಾರಾಯಣ ರೈ ಕುರಿತ ಹಾಡು ಹಾಡಿದರು. ಕೆ.ಸಿತಾರಾಮ ರೈ ಸವಣೂರು ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಿನ್ಸಿಪಾಲ್ ಸೀತಾರಾಮ ಕೇವಲ ವಂದಿಸಿದರು. ತೃತೀಯ ಬಿ.ಎ ವಿದ್ಯಾರ್ಥಿನಿ ಅನುಶ್ರೀ ಎಚ್.ಎಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here