ರಾಮಕುಂಜ ಪ.ಪೂ.ಕಾಲೇಜಿನಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಸರಣಿ ಉಪನ್ಯಾಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಪ್ರಯುಕ್ತ ಸರಣಿ ಉಪನ್ಯಾಸಗಳು ನಡೆಯಿತು.
ಮೊದಲ ದಿನ ಭಾರತದ ಸಂವಿಧಾನದ ಕುರಿತಾದ ಉಪನ್ಯಾಸವು ನಡೆಯಿತು. ಕೆನರಾ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ, ಖ್ಯಾತ ವಿದ್ವಾಂಸರೂ ಆದ ಡಾ.ಅನಂತಕೃಷ್ಣ ಭಟ್‌ರವರು ಉಪನ್ಯಾಸವನ್ನು ನೀಡಿ, ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ಇರಲೇಬೇಕಾಗಿದೆ. ಸಂವಿಧಾನವನ್ನು, ಕಾನೂನುಗಳನ್ನು ನಾವು ತಿಳಿದುಕೊಂಡರೆ, ಅದರಿಂದ ನಮಗೇ ಲಾಭ. ದೇಶವಾಸಿಗಳೆಲ್ಲರಿಗೆ ನ್ಯಾಯವನ್ನು, ಭದ್ರತೆಯನ್ನು ನಮ್ಮ ಸಂವಿಧಾನವು ಖಾತ್ರಿ ಪಡಿಸುತ್ತದೆ. ಹಾಗಾಗಿ ನಮ್ಮ ದೇಶದ ಸಂವಿಧಾನವು ಬಹಳ ವಿಶಿಷ್ಟವಾಗಿ ವಿದ್ವಾಂಸರುಗಳಿಂದ ರಚಿಸಲ್ಪಟ್ಟಿದೆ ಎಂದು ಹೇಳಿದರು. ಅವರು ತಮ್ಮ ಉಪನ್ಯಾಸದಲ್ಲಿ ಸಂವಿಧಾನ ರಚನೆಯ ಪೂರ್ವ ಸನ್ನಿವೇಶವನ್ನು, ಸಂವಿಧಾನದ ಅನಿವಾರ್ಯತೆಯನ್ನು, ಅದರ ರಚನಾ ಪ್ರಕ್ರಿಯೆ ಮತ್ತು ಅದರಿಂದ ಆಗುತ್ತಿರುವ ಅನುಕೂಲಗಳನ್ನು ತಿಳಿಸಿದರು.

ಎರಡನೇಯ ದಿನದಂದು ಕಾಲೇಜಿನ ರಾಜ್ಯಶಾಸ್ತ್ರಉಪನ್ಯಾಸಕರಾದ ಗುಡ್ಡಪ್ಪ ಬಲ್ಯರವರು ಭಾರತದ ಧ್ವಜ, ಅದರ ಇತಿಹಾಸ ಮತ್ತು ಅದರ ಪ್ರಾಮುಖ್ಯತೆಯ ಕುರಿತಾದ ವಿಚಾರಗಳನ್ನು ಮಂಡಿಸಿದರು. ನಮ್ಮ ಧ್ವಜವು ನಮ್ಮ ಹೆಮ್ಮೆ. ಅದನ್ನು ಬಹಳ ಗೌರವಯುತವಾಗಿ ಕಾಣಬೇಕು. ಆ. ೧೩-೧೫ರ ವರೆಗೆ ಪ್ರತಿಮನೆಗಳಲ್ಲಿ ಧ್ವಜವನ್ನು ಹಾರಿಸಿ, ಪ್ರಧಾನಿ ಮೋದಿಯವರ ಕರೆಯಂತೆ ರಾಷ್ಟ್ರದ ಸ್ವಾತಂತ್ರ್ಯದ ಸವಿಯು ಪ್ರತಿಮನೆಯಲ್ಲಿಕಾಣುವಂತಾಗಬೇಕು ಎಂದು ಗುಡ್ಡಪ್ಪ ಬಲ್ಯ ಹೇಳಿದರು.

ಮೂರನೇ ದಿನದ ಉಪನ್ಯಾಸವನ್ನು ನಡೆಸಿಕೊಟ್ಟ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ವಿದ್ಯಾರ್ಥಿಗಳಿಗೆ ಅಗ್ನಿಪಥ ಯೋಜನೆಯ ಕುರಿತಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸೇನೆಗೆ ಸೇರಿ ಭಾರತಾಂಬೆಯ ರಕ್ಷಣೆಯನ್ನು ಮಾಡುವ ಸಂಕಲ್ಪ ಮಾಡಬೇಕು ಮತ್ತು ಅದನ್ನು ಕಾರ್ಯಗತಗೊಳಿಸಲು ಶ್ರಮ ಪಡಬೇಕು. ಸರಕಾರವು ಅಗ್ನಿಪಥಯೋಜನೆಯ ಮೂಲಕ ರಾಷ್ಟ್ರ ಸೇವೆಯನ್ನು ಮಾಡಬಯಸುವವರಿಗೆ ಉತ್ತಮ ಅವಕಾಶವನ್ನು ನೀಡಿದೆ. ಅದಲ್ಲದೆ ಯುವಜನರಿಗೆ ಸೇವಾ ಅವಧಿಯ ನಂತರ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಅವಕಾಶಗಳನ್ನೂ ನೀಡಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

ನಾಲ್ಕನೇ ದಿನದಂದು ಖ್ಯಾತ ಶಿಕ್ಷಣ ತಜ್ಞ ಮತ್ತು ಚಿಂತಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ರವರು ಪುರಾತನ ಭಾರತದ ಸಾಧನೆಗಳು ಎಂಬ ವಿಷಯವಾಗಿ ಉಪನ್ಯಾಸವನ್ನು ನೀಡಿ, ಭಾರತವು ಅತ್ಯಂತ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ ರಾಷ್ಟ್ರ. ಭಾರತದ ಪುರಾತನ ಗ್ರಂಥಗಳು ಇಂದಿಗೂ ಪ್ರಸ್ತುತ ಮತ್ತು ವೈಜ್ಞಾನಿಕವಾಗಿಯೂ ಸರಿ ಹೊಂದುತ್ತದೆ. ಪುರಾತನವಾದ ಈ ಗ್ರಂಥಗಳನ್ನು ಆಧರಿಸಿಯೇ ನಮ್ಮ ಆಚರಣೆ, ಜೀವನ ಶೈಲಿ ರೂಪುಗೊಂಡಿದೆ. ಆದರೆ ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ನಮ್ಮ ನಿಜ ಜೀವನ ಶೈಲಿಯಿಂದ ದೂರ ಉಳಿಯುವಂತಾಗಿದೆ. ಇದು ನಮಗೆ ಮಾರಕ. ಆಧುನಿಕ ಶಿಕ್ಷಣವನ್ನು ತಿಳಿದುಕೊಂಡು, ನಮ್ಮ ಸಂಸ್ಕೃತಿಯನ್ನು ಅನುಷ್ಠಾನಕ್ಕೆ ತರಬೇಕು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ಥಕತೆಯ ಬದುಕು ನಮ್ಮದಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ. ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಸರಣಿ ಉಪನ್ಯಾಸಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ರಾಷ್ಟ್ರ, ನಮ್ಮ ಮೌಲ್ಯಗಳ ಪರಿಚಯವನ್ನು ಮಾಡುವ ಯೋಜನೆ ನಮ್ಮದಾಗಿದೆ. ಉಪನ್ಯಾಸ ಮಾಡಿದ ಹಿರಿಯರು ಹೇಳಿದಂತೆ ನಡೆದು, ರಾಷ್ಟ್ರದ ಮಾದರಿ ಪ್ರಜೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ.ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾಲೇಜಿನ ಕನ್ನಡ ಉಪನ್ಯಾಸಕ ತಿಲಕಾಕ್ಷ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.