ಕೆದಂಬಾಡಿ ಗ್ರಾಪಂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಾರೆಪುಣಿ ಬಸ್ಸು ತಂಗುದಾಣದಲ್ಲಿ ಪುಸ್ತಕ ಗೂಡು ಉದ್ಘಾಟನೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪುಸ್ತಕ ಗೂಡು ಲೋಕಾರ್ಪಣೆ ಸಾರೆಪಣಿ ಪ್ರಯಾಣಿಕರ ತಂಗುದಾಣದಲ್ಲಿ ನಡೆಯಿತು. ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ಗಳನನ್ನು ಪುಸ್ತಕ ಗ್ರಾಮಗಳಾಗಿ ಬದಲಾಯಿಸಲು ಪುಸ್ತಕ ಗೂಡು ಎಂಬ ವಿನೂತನ ಪ್ರಯೋಗವು ರಾಜ್ಯದಲ್ಲಿಯೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಬಸ್ ನಿಲ್ದಾಣ, ಅಂಚೆ ಕಚೇರಿ, ಗ್ರಾಮ ಪಂಚಾಯತ್ ಕಛೇರಿ, ಸಾರ್ವಜನಿಕ ಉದ್ಯಾನ, ಮಾರುಕಟ್ಟೆ ಪ್ರದೇಶಗಳಲ್ಲಿ ಗೂಡು ನಿರ್ಮಿಸಿ ಪುಸ್ತಕಗಳನ್ನು ಇಟ್ಟು ಜನರನ್ನು ಜನರಿಗೆ ಸುಲಭವಾಗಿ ಓದಲು ನೆರವಾಗುವ ಪರಿಕಲ್ಪನೆಯೇ ಪುಸ್ತಕ ಗೂಡು. ಗೂಡುಗಳಲ್ಲಿ ಕಾದಂಬರಿ, ಕಥೆ, ಕವನ ಸೇರಿದಂತೆ ಬಗೆಬಗೆಯ ಸಾಹಿತ್ಯ ಪುಸ್ತಕಗಳು ಉಚಿತವಾಗಿ ಸಿಗಲಿವೆ ಅಲ್ಲೇ ಓದಬಹುದು ಅಥವಾ ಮನೆಗೆ ಕೊಂಡೊಯ್ದು ಓದಿ ಮರು ಹಿಂತಿರುಗಿಸಬೇಕಾಗುತ್ತದೆ. ಮನೆಯಲ್ಲಿರುವ ಹಳೆಯ ಪುಸ್ತಕವನ್ನು ಗೂಡಿಗೆ ಸೇರಿಸಬಹುದಾಗಿದೆ.

ಪುಸ್ತಕ ಗೂಡು ಉದ್ಘಾಟನೆಯನ್ನು ಕೆದಂಬಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ಉದ್ಘಾಟಿಸಿ ಮಾತನಾಡಿ ಜನರು ಬಸ್ಸಿನಲ್ಲಿ ಪ್ರಯಾಣಿಸುವಾಗ ೫/೧೦ ನಿಮಿಷದಲ್ಲಿ ಬಸ್ಸಿಗೆ ಕಾಯುವ ಬದಲು ಪುಸ್ತಕದ ಪ್ರಯೋಜನೆ ಪಡೆದುಕೊಳ್ಳಿ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ರತನ್ ರೈ ಕುಂಬ್ರ ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಸದಸ್ಯರುಗಳಾದ

ಸುಜಾತಾ ಮುಳಿಗದ್ದೆ, ರೇವತಿ ಬೋಳೋಡಿ, ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿ ಬೀಡು, ಕೃಷ್ಣಕುಮಾರ್ ಇದ್ಯಪ್ಪೆ, ವಿಠ್ಠಲ ರೈ ಮಿತ್ತೋಡಿ, ವರ್ತಕರು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಕಾರ್ಯದರ್ಶಿ ಸುನಂದ ರೈ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.