ಮುಳಿಯದಲ್ಲಿ ಅಪರಂಜಿ ಚಿನ್ನ&ಬೆಳ್ಳಿಯ ಸ್ಮರಣಿಕೆ ಅನಾವರಣ

0

  • ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಾಗೂ ಮುಳಿಯದ 78ನೇ ವರ್ಷದ ಬಾಂಧವ್ಯದ ಸಂಕೇತವಾಗಿ ಅನಾವರಣಗೊಂಡ ಸ್ಮರಣಿಕೆ

ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಲ್ಲೊಂದಾದ ಮುಳಿಯ ಜ್ಯುವೆಲ್ಲರ್ಸ್ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆ ಹಾಗೂ ಮುಳಿಯದ 78ನೇ ವರ್ಷದ ಬಾಂಧವ್ಯದ ಸಂಕೇತವಾಗಿ ಅಪರಂಜಿ ಚಿನ್ನ ಮತ್ತು ಬೆಳ್ಳಿಯ ಸ್ಮರಣಿಕೆ ಅನಾವರಣ ಕಾರ್ಯಕ್ರಮ ಆ.13ರಂದು ನಡೆಯಿತು.

ಸಹಾಯಕ ಆಯುಕ್ತಾರಾದ ಗಿರೀಶ್ ನಂದನ್ ಚಿನ್ನ ಮತ್ತು ಬೆಳ್ಳಿಯ ಸ್ಮರಣಿಕೆ ಅನಾವರಣಗೊಳಿಸಿದರು ಬಳಿಕ ಮಾತನಾಡಿದ ಅವರು “ಭಾರತ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ,ಮುಳಿಯ ಸಂಸ್ಥೆ 78ರ ಸಂಭ್ರಮದಲ್ಲಿರುವುದು ಸಂತಸದ ವಿಚಾರ,ಕೇಶವ ಪ್ರಸಾದ್ ಮುಳಿಯ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ.ವ್ಯವಹಾರ ಕ್ಷೇತ್ರದಲ್ಲೂ ಅವರ ಕೆಲಸಗಳನ್ನು ಗಮನಿಸಿದಾಗ ಹೆಮ್ಮೆಯೆನಿಸುತ್ತದೆ.ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲಿ ” ಎಂದರು.

ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್”ಈ ಸಂಸ್ಥೆ ನಾವು ಸಣ್ಣದಿಂದಲೇ ನೋಡುತ್ತಿದ್ದೇವೆ.ಅಣ್ಣ-ತಮ್ಮಂದಿರು ಸೇರಿಕೊಂಡು ಸಂಸ್ಥೆಯನ್ನು ಬೆಳವಣಿಗೆಯ ಹಾದಿಯ ಬೆಳೆಸುತ್ತಿದ್ದಾರೆ.ವ್ಯವಹಾರದ ಜೊತೆಗೆ ಸಮಾಜಸೇವೆಯನ್ನೂ ಮಾಡುತ್ತಾ ಬಂದಿರುವ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ” ಎಂದರು.

ಮುಳಿಯ ಜ್ಯುವೆಲ್ಲರ್ಸ್ನ ಚೇರ್ಮೇನ್ ಹಾಗೂ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ ‘ಗ್ರಾಹಕರ ಸೇವೆಯಿಂದ ತೃಪ್ತಿ ಪಡುವಂತೆ ಹಿರಿಯರು ಕಿವಿ ಮಾತು ಹೇಳಿದ್ದಾರೆ.ಇದನ್ನು ಬೆಳೆಸಿಕೊಂಡು ವ್ಯವಹಾರ ಮಾಡುತ್ತಿದ್ದೇವೆ,ಚಿನ್ನ ಖರೀದಿಗೆ ಯಾವತ್ತೂ ಸಕಾಲ ಮತ್ತು ಸಾರ್ವಕಾಲಿಕ. ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಹಾಗೂ ನಮ್ಮ ಸಂಸ್ಥೆಗೆ 78ನೇ ವರ್ಷದ ಸಂಭ್ರಮ ಆದ್ದರಿಂದ ಇವರೆಡರ ನೆನಪಿಗಾಗಿ ಅಪರಂಜಿ ಚಿನ್ನ ಮತ್ತು ಬೆಳ್ಳಿಯ ಸ್ಮರಣಿಕೆ ಅನಾವರಣ ಮಾಡುತ್ತಿದ್ದೇವೆ.ಗ್ರಾಹಕರಿಂದ ಮುಂದೆಯೂ ಸಹಕಾರವನ್ನು ಅಪೇಕ್ಷಿಸುತ್ತೇವೆ’ಎಂದರು.

ಈ ಸಂದರ್ಭದಲ್ಲಿ ಚಿನ್ನದ ಸ್ಮರಣಿಕೆಯ ಮೊದಲೆರಡು ಗ್ರಾಹಕರಾದ ಪ್ರಗತಿಪರ ಕೃಷಿಕ ಶ್ರೀಪತಿ ಭಟ್ ಹಾಗೂ ಪ್ರಜ್ವಲ್ ರಿಗೆ ಚಿನ್ನದ ಸ್ಮರಣಿಕೆ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಶ್ರಿಪತಿ ಭಟ್.ಯು ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿ ನವ್ಯ ಪ್ರಾರ್ಥಿಸಿ,ಪುತ್ತೂರು ಮುಳಿಯ ಚಿನ್ನಾಭರಣ ಮಳಿಗೆಯ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು,ಮಾರ್ಕೆಟಿಂಗ್ ವಿಭಾಗದ ಪ್ರಬಂಧಕರು ಸಂಜೀವ ವಂದಿಸಿ,ಶಿವಪ್ರಸಾದ್ ನಿರೂಪಿಸಿದರು.

LEAVE A REPLY

Please enter your comment!
Please enter your name here