ಜಿಲ್‌ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ರಾರಾಜಿಸುತ್ತಿದೆ ಬೃಹತ್ ತಿರಂಗ

0

ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರಿನ ಖ್ಯಾತ ಚಿನ್ನದ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಬೃಹತ್ ತಿರಂಗವನ್ನು ಆರಿಸಲಾಗಿದೆ. ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ಮುಖ್ಯ ರಸ್ತೆಯಲ್ಲಿರುವ ನೂತನ ಶೋರೂಂನಲ್ಲಿ 33 ಅಡಿ ಅಗಲ 22 ಅಡಿ ಎತ್ತರದ ವಿಶಾಲವಾದ ತಿರಂಗವನ್ನು ಆರಿಸಲಾಗಿದ್ದು ಈ ತ್ರಿವರ್ಣ ಧ್ವಜ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಈ ತಿರಂಗವು ಪುತ್ತೂರಿನಲ್ಲಿ ಆರಿಸಲ್ಪಟ್ಟ ಅತೀ ದೊಡ್ಡ ತಿರಂಗ ಎನ್ನಲಾಗುತ್ತಿದ್ದು ಪುತ್ತೂರಿನ ಆರ್ವಿ ಇಂಟರ್ ಗ್ರಾಫಿಕ್ಸ್ ಈ ಧ್ವಜವನ್ನು ತಯಾರಿಸಿದ್ದಾರೆ.

ಮಳಿಗೆಯಲ್ಲಿ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಸುಬೇದಾರ್ ಮೋಹನ್ ಗೌಡ ತೆಂಕಿಲ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸೇನೆಗೆ ಹೆಚ್ಚು ಯುವಜನತೆ ಸೇರಬೇಕು, ಎಲ್ಲಾ ವಿದ್ಯಾಭ್ಯಾಸ ಹೊಂದಿರುವವರು ಸೇನೆಗೆ ಸೇರಬಹುದು, ಸೇನೆಯಲ್ಲಿ ಉನ್ನತ ಪದವಿಯವರೆಗೆ ಹೋಗುವ ಅವಕಾಶವಿದೆ. ಈಗ ಸೇನೆಯಲ್ಲಿ ಉತ್ತಮ ಸವಲತ್ತುಗಳಿವೆ. ಹೆಚ್ಚು ಹೆಚ್ಚು ಜನ ಸೇನೆಗೆ ಸೇರಿ ದೇಶಸೇವೆ ಮಾಡಿ ಎಂದು ಕರೆಕೊಟ್ಟರು.

LEAVE A REPLY

Please enter your comment!
Please enter your name here