ಆಲಂಕಾರು ಗ್ರಾ.ಪಂ ಸ್ವಾತಂತ್ರ್ಯದಿನಾಚರಣೆ

0

ಆಲಂಕಾರು : ಆಲಂಕಾರು ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜರೋಹಣವನ್ನು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯರವರು ಧ್ವಜರೋಹಣ ನೇರವೆರಿಸಿ ಶುಭಹಾರೈಸಿದರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿಯವರು ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.

ಪಂಚಾಯತ್ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ ಶುಭಾ ಹಾರೈಸಿದರು ,ಗ್ರಾ.ಪಂ .ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿ ಯವರು ,ಧನ್ಯವಾದ ಸಮರ್ಪಿಸಿದರು. ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು,ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು, ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ಹಾಗು ಸಾರ್ವಜನಿಕರು ಆಲಂಕಾರು ಪೇಟೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಥ ಸಂಚಲನ ನಡೆಸಿದರು,ನಂತರ ನಡುಗುಡ್ಡೆಯಲ್ಲಿ ನಿರ್ಮಾಣವಾದ ಪ್ರಯಾಣಿಕರ ತಂಗುದಾಣ ಮತ್ತು ಆಲಂಕಾರು ಪೇಟೆಯಲ್ಲಿ ನಿರ್ಮಾಣವಾದ ಸಾರ್ವಜನಿಕ ಶೌಚಾಲಯದ ಉದ್ಘಾಟನೆ ನಡೆಯಿತು. ನಂತರ ಗ್ರಾ.ಪಂ ಸಭಾಭವನದಲ್ಲಿ 1994 ರಿಂದ ಆಯ್ಕೆಗೊಂಡ ಆಲಂಕಾರು ಗ್ರಾಮ ಪಂಚಾಯಿತ್ ನ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ ಹಾಗು ಉಪಾಧ್ಯಕ್ಷರು ಗಳಿಗೆ ಹಾಗು ಪ್ರಸ್ತುತ ಪಂಚಾಯತ್ ಸದಸ್ಯರಿಗೆ ಹಾಗು ಸಿಬ್ಬಂದಿಗಳಿಗೆ,ಸ್ವಚ್ಚತಾ ಸಿಬ್ಬಂದಿಗಳನ್ನು ಗೌರವಿಸಲಾಯಿತು ಹಾಗು ಪಂಚಾಯತ್ ವತಿಯಿಂದ ನಡೆಸಿದ ಚದುರಂಗ ಸ್ಪರ್ದೆಯ ವಿಜೇತರಿಗೆ ಹಾಗು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು. 75ನೇ ಸ್ವಾತಂತ್ರ್ಯಯೋತ್ಸವ ಅಂಗವಾಗಿ 75 ಮಂದಿಯನ್ನು ಗೌರವಿಸಲಾಯಿತು.

 

ಈ ಸಂಧರ್ಭ ದಲ್ಲಿ ಗ್ರಾ.ಪಂ ಸದಸ್ಯರು ,ಅಂಗನವಾಡಿ ಕಾರ್ಯಕರ್ತೆಯರು,ಶಾಲಾ ಮುಖ್ಯೋಪಾಧ್ಯಯರು, ಸಂಜೀವಿನಿ ಒಕ್ಕೋಟದ ಸದಸ್ಯರು ಹಾಗು ಪಂಚಾಯತ್ ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here