ಸುದಾನ ಶಾಲೆಯಲ್ಲಿ ಸ್ವಾತಂತ್ರ್ಯಅಮೃತ ಮಹೋತ್ಸವ ಸಂಭ್ರಮ

0

ಪುತ್ತೂರು: ಸುದಾನ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದಅಮೃತ ಮಹೋತ್ಸವವನ್ನು ಸಪ್ತಾಹವಾಗಿ ವಿಜೃಂಭಣೆಯಿಂದಆಚರಿಸಲಾಯಿತು. ಆಗಸ್ಟ್ ತಿಂಗಳ ಮೊದಲ ವಾರದಲ್ಲಿಆರಂಭವಾದದೇಶನಮನದಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ಛದ್ಮವೇಷ. ಸ್ವಾತಂತ್ಯಹೋರಾಟಗಾರರಕಥೆ, ಭಾಷಣ, ಪ್ರಬಂಧ, ಚಿತ್ರಕಲೆ, ಕವನರಚನೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ ೧೩ ರಿಂದ ೩ ದಿನಗಳ ಕಾಲ ನಡೆದರಾಷ್ಟ್ರಧ್ವಜಾರೋಹಣಕಾರ್ಯಕ್ರಮವನ್ನು ವೈವಿದ್ಯಮಯವಾಗಿ ಶಾಲೆಯ ವಿವಿಧಚಟುವಟಿಕೆ ಸಂಘಗಳು ನಿರ್ವಹಿಸಿದವು. ಹರ್‌ಘರ್‌ತಿರಂಗಕಾರ್ಯಕ್ರಮವನ್ನುಎಲ್ಲಾ ಶಿಕ್ಷಕರು ಹಾಗೂ ವಿದ್ಯಾಥಿಗಳು ನಿರ್ವಹಿಸಿದರು.

 

ಆಗಸ್ಟ್ ೧೫ ರಂದು ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನವು ನಡೆಯಿತು. ಸ್ವಾತಂತ್ರ್ಯೋತ್ಸವದಧ್ವಜಾರೋಹಣವನ್ನು ಮಾಡಿದ ಶಿಕ್ಷಕ-ರಕ್ಷಕ ಸಂಘದಅಧ್ಯಕ್ಷರಾದರಾಜೇಶ್ ಬೆಜ್ಜಂಗಳರವರು ‘ಸ್ವಾತಂತ್ಯವು ನಮಗಿತ್ತಕೊಡುಗೆಯಲ್ಲಅದುತ್ಯಾಗ ಬಲಿದಾನಗಳ ಫಲ’ಎಂದುಅಭಿಪ್ರಾಯ ಪಟ್ಟರು. ಮುಖ್ಯಅಭ್ಯಾಗತರಾಗಿ ಆಗಮಿಸಿದ್ದ ರೋಟರಿಎಲೈಟ್‌ನಅಧ್ಯಕ್ಷರಾದಅಬ್ದುಲ್‌ರಝಾಕ್‌ರವರುದೇಶದ ಪ್ರಗತಿಗಾಗಿ ನಾವೆಲ್ಲರೂ ಶ್ರಮಿಸಬೇಕುಎಂದು ಶುಭಾಶಂಸನೆಗೈದರು. ಶಾಲಾ ಸಂಚಾಲಕರಾದರೆ|ವಿಜಯ ಹಾರ್ವಿನ್‌ರವರು’ಸಮಾಜದಅಶಾಂತಿಗೆಕಾರಣವಾಗಿರುವ ದುಷ್ಟಶಕ್ತಿಗಳನ್ನು ನಿಗ್ರಹಿಸಿ ಭಾರತವನ್ನು ಸಶಕ್ತವಾಗಿಸಬೇಕು’ಎಂದುಕರೆನೀಡಿದರು. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್’ಪರಸ್ಪರ ಮೈತ್ರಿಯಿಂದ ಭವಿಷ್ಯದ ಸೌಹಾರ್ದತೆಯನ್ನು ವಿದ್ಯಾರ್ಥಿಗಳು ಕಾಪಾಡುತ್ತಾ ಬಾಳಬೇಕು’ಎಂದುಶುಭಾಶಂಸನೆಗೈದರು.

ಉಪಮುಖ್ಯಶಿಕ್ಷಕಿ ಶ್ರೀಮತಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ ಪ್ರತಿಮಾ, ಅಮೃತವಾಣಿ, ಶಿಕ್ಷಕ ಶಿಕ್ಷಕೇತರರು, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಅಮೃತಮಹೋತ್ಸವದಲ್ಲಿ ಭಾಗವಹಿಸಿದರು. ಶಾಲಾ ವಿದ್ಯಾರ್ಥಿಗಳು ದೇಶಭಕ್ತಿಯ ಹಾಡು ಮತ್ತು ನೃತ್ಯಪ್ರದರ್ಶನವನ್ನು ಮಾಡಿದರು. ಅಲೀಮಾಅಸ್ನ (೧೦) ದಿನದ ಮಹತ್ವವನ್ನು ವಿವರಿಸಿ, ಮನೋಜ್ (೧೦) ಸ್ವಾಗತಿಸಿ, ಲಾರ್‍ಯ ಪ್ರೀಮಲ್ ಮಸ್ಕರೇನಸ್ (೧೦) ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಲತಾಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಸಿಹಿ ವಿತರಣೆ ನಡೆಸಿ ತರಗತಿಗಳಲ್ಲಿ ಅಮೃತಮಹೋತ್ಸವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಬಹಳ ವಿಜೃಂಭಣೆಯಿಂದಕಾರ್ಯಕ್ರಮ ಸಂಪನ್ನಗೊಂಡವು.

LEAVE A REPLY

Please enter your comment!
Please enter your name here