ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಆ.22ರಂದು ಪುತ್ತೂರಿನಿಂದ ವಿಟ್ಲ ತನಕ ಪಾದಯಾತ್ರೆ

0

ಪುತ್ತೂರು : ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯದ ಪುನರಪಿ ನೆನಪಿಸಿಕೊಳ್ಳುವ ಅಂಗವಾಗಿ ಪುತ್ತೂರಿನಿಂದ ವಿಟ್ಲ ತನಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಆ.೨೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಅವರು ಆ.೧೮ರಂದು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಬೆಳಿಗ್ಗೆ ೯ ಗಂಟೆಗೆ ದರ್ಬೆ ಸರ್ಕಲ್‌ನಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜರವರು ಉದ್ಘಾಟಿಸಲಿದ್ದಾರೆ. ಮಾಜಿ ಸಚಿರಾದ ವಿನಯಕುಮಾರ್ ಸೊರಕೆ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಹರೀಶ್ ಕುಮಾರ್ ಭಾಗವಹಿಸಲಿದ್ದಾರೆ. ವಿಟ್ಲದಲ್ಲಿ ನಡೆಯುವ ಸಮಾರೋಪದಲ್ಲಿ ರಾಜ್ಯ ಕೆಪಿಸಿಸಿ ವಕ್ತಾರ ನಿಖಿತ್‌ರಾಜ್, ಪುತ್ತೂರು ಕ್ಷೇತ್ರದ ಉಸ್ತುವಾರಿ ರಕ್ಷಿತ್ ಶಿರಾಮ ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಲೋಬೋ, ಮೊಯಿದಿನ್ ಬಾವ, ಅಭಯಚಂದ್ರ ಶೆಟ್ಟಿ, ಡಾ.ರಘು, ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಜಾಥಾವು ಮುಖ್ಯರಸ್ತೆಯಾಗಿ ಸುಮಾರು ೧೫ ಕಿ.ಮಿ. ನಡೆದು ವಿಟ್ಲ ತಲುಪಲಿದೆ. ಜಾಥಾಕ್ಕೆ ಅಲ್ಲಲ್ಲಿ ಜನರು ಸೇರಿಕೊಳ್ಳಲಿದ್ದಾರೆ. ನಿರೀಕ್ಷಿತ ೨ರಿಂದ ೩ ಸಾವಿರ ಮಂದಿ ಸೇರಲಿದ್ದಾರೆ ಎಂದು ಅವರು ತಿಳಿಸಿದರು. ಪುತ್ತೂರಿನ ಇತಿಹಾಸದಲ್ಲಿ ಇದು ಕಾರ್ಯಕ್ರಮವಾಗಲಿದೆ ಎಂದು ಹೇಳಿದ ಅವರು ನಮ್ಮ ಕಲ್ಪನೆಯೇ ದೇಶದ ಸ್ವಾತಂತ್ರ್ಯಪೂರ್ವದಲ್ಲಿ ಯಾರು ಹೋರಾಟ ಮಾಡಿದ್ದಾರೆ? ಸ್ವಾತಂತ್ರ್ಯಪೂರ್ವದ ಸಾಕ್ಷತೆಗಾಗಿ, ಮಹಾತ್ಮಗಾಂಧಿಯ ಅಹಿಂಸಾ ಚಳವಳಿ ಬಗ್ಗೆ, ನೆಹರೂ, ಸುಭಾಶ್ಚಂದ್ರ ಬೋಸ್, ಅಜಾದ್ ಸೇರಿದಂತೆ ಹಲವು ನಾಯಕರನ್ನು ನೆನಪಿಸುವ ಕಾರ್ಯ ಇದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಪುತ್ತೂರು ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್ ಮೊದಲಾದವರು ಉಪಸ್ಥಿತರಿದ್ದರು.

ನಾವು ರಾಜಕೀಯ ಪಕ್ಷದ ವತಿಯಿಂದ ಮಾಡಿದರೂ ಕೂಡ ರಾಜಕೀಯ ದೂರವಿಟ್ಟು ಕೇವಲ ಸ್ವಾತಂತ್ರ್ಯ ನೆನಪಿಸುವ ಕಾರ್ಯಕ್ರಮ ಇದಾಗಿರುವುದರಿಂದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸುಗೊಳಿಸುವಂತೆ ಮನವಿ ಮಾಡಿದರು. ಅವತ್ತು ಸ್ವಾತಂತ್ರ್ಯ ಹೋರಾಟ ಮಾಡಿದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರು.

LEAVE A REPLY

Please enter your comment!
Please enter your name here