ಕಾವು:ಶ್ರೀಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಕ್ರೀಡಾಕೂಟ

0

ಕಾವು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವು ಇದರ ನೇತೃತ್ವದಲ್ಲಿ ಶ್ರೀಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ ಕಾರ್ಯಕ್ರಮ ಕಾವು ಶ್ರೀ ಪಂಚಲಿಗೇಶ್ವರದೇವಾಲಯದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 

ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹಾಗೂ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ ಚೆನ್ನಮಣೆ ಆಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಚಾಕೋಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ,ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ,ಜೊತೆ ಕಾರ್ಯದರ್ಶಿ ರಾಮಣ್ಣ ನಾಯ್ಕ ಅಚಾರಿಮೂಲೆ, ಸಮಿತಿ ಸದಸ್ಯರು ಗಳು,ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳಿಗೆ,,ಪ್ರಾಥಮಿಕ ಹಂತ , ಪ್ರೌಢ ಹಂತ, ಮಹಿಳೆಯರಿಗೆ,ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ರಸಪ್ರಶ್ನೆ ದೇಶ ಭಕ್ತಿಗೀತೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು.

ಗೆಳೆಯರ ಬಳಗ ಕಾವು ಪ್ರಾಯೋಜಕತ್ವದಲ್ಲಿಮುದ್ದು ಕ್ರಷ್ಣ ವೇಷ ಸ್ಪರ್ಧೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗೆಳೆಯರ ಬಳಗ ಕಾವು ಇವರ ಪ್ರಾಯೋಜಕತ್ವದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಇದೇ ಸಂದರ್ಭದಲ್ಲಿ ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.3 ವರ್ಷದೊಳಗಿನ ಪುಟಾಣಿಗಳಿಗೆ ಮತ್ತು 6 ವರ್ಷದೊಳಗಿನ ಪುಟಾಣಿಗಳಿಗೆ ಈ ಸ್ಪರ್ಧೆ ಅಯೋಜಿಸಲಾಗಿತ್ತು ಸುಮಾರು ಐವತ್ತುಕ್ಕೂ ಮಿಕ್ಕಿ ರಾಧಾ-ಕೃಷ್ಣ ವೇಷಧಾರಿ ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here