ಕುಮಾರಧಾರ ನದಿಗೆ ಸ್ನಾನಕ್ಕಿಳಿದ ಬೆಂಗಳೂರಿನ ಯುವಕ ಕಣ್ಮರೆ

0

ಕಡಬ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ಬೆಂಗಳೂರಿನ ಶಿವು(25 ವ) ಕುಮಾರಧಾರ ನದಿಗೆ ಸ್ನಾನಕ್ಕೆಂದು ಇಳಿದು ಕಣ್ಮರೆಯಾದ ಘಟನೆ ಆ.21ರಂದು ಮಧ್ಯಾಹ್ನ ನಡೆದಿದೆ. 21 ಜನರ ತಂಡ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದ್ದು ಇಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದಾರೆ.  

ಇವರಲ್ಲಿ ಶೀವು ಎಂಬವರು ಸ್ನೇಹಿತರ ಮಾತನ್ನು ಲೆಕ್ಕಿಸದೇ ತಡೆಹಗ್ಗ ದಾಟಿ ನೀರಿಗೆ ಇಳಿದಿದ್ದಾರೆ. ಮೂಲತಃ ಮಂಡ್ಯ ನಿವಾಸಿಯಾಗಿರುವ ಶಿವು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಬೆಂಗಳೂರಿನ ದೀಪಜಲಿ ನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಮಂಜುನಾಥ್ . ಅಗ್ನಿಶಾಮಕದಳ ಸಿಬಂದಿಗಳ ಭೇಟಿ ನೀಡಿದ್ದು ಶಿವುರವರಿಗೆ ಹುಡುಕಾಟ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here