ಸವಣೂರು ಸ್ನೇಹ ಸಿಂಚನಾದಲ್ಲಿ ಸನ್ಮಾನ ಸಮಾರಂಭ

0

ಪುತ್ತೂರು: ಅಂಗನವಾಡಿಯ ನಿವೃತ್ತ ಕಾರ‍್ಯಕರ್ತೆ ವಿಜಯಈಶ್ವರ ಗೌಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಅಧಿಕಾರಿ ವಾಗೀಶ್ವರಿರವರುಗಳನ್ನು ಸವಣೂರು ಕೆರೆಕೋಡಿ ಕುಸುಮ ಪಿ.ಶೆಟ್ಟಿರವರ ಸ್ನೇಹ ಸಿಂಚನಾ ನಿವಾಸದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಸವಣೂರು ಸಿ.ಎ, ಬ್ಯಾಂಕ್‌ನ ಉಪಕಾರ‍್ಯನಿರ್ವಹಣಾಧಿಕಾರಿ ಜಲಜಾ ಎಚ್.ರೈ, ನವೋದಯ ಪ್ರೇರಕಿ ಪ್ರೇಮ, ಶಾರದಾ ಮಾಲೆತ್ತಾರು, ಆಶಾಲತಾ ಮೆದು, ಮಮತಾ ಪಿ.ಶೆಟ್ಟಿ ನಡುಬೈಲು, ಸುಮಲತಾ ಜಿ.ಶೆಟ್ಟಿ ನಡುಬೈಲು, ಚಂದ್ರಕಲಾ ರೈ ಕೆರೆಕೋಡಿ, ಶೀಲಾವತಿ ರೈ ಕೆರೆಕೋಡಿ, ವಿಜಯಲಕ್ಷ್ಮಿ ಮುಗೇರು, ವಸಂತಿ, ಆತ್ಮಿ, ನಿವೇದಿತಾ ಕೇಕುಡೆ, ಯಶೋಧ ಮೆದು, ತೇಜಾಕ್ಷಿ ಕೆರೆಕೋಡಿ, ಮೋಹಿನಿ ಕಾಯರ್ಗ, ಗೀತಾ ಮಡಕೆ, ಅಪ್ಪಿ ಮಡಕೆ, ಸುಮಿತ್ರಾ ಕಾಯರ್ಗ, ಸವಿತಾ ಕಾಯರ್ಗ, ಉಮೈದಾ ಕೆರೆಕೋಡಿ, ನೆಬಿಸಾ ಕೇಕುಡೆ, ಫಾತ್ಮಿಮಾ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು. ಕುಸುಮ ಪಿ. ಶೆಟ್ಟಿ ಕೆರೆಕೋಡಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here