ಆಸ್ಟ್ರೇಲಿಯಾದ ಮೆಲ್ಬರ್ನ್ ರೋಟರಿ ಕ್ಲಬ್‌ಗೆ ರೋಟರಿ ಯುವ ಸ್ಥಾಪಕಾಧ್ಯಕ್ಷ ರತ್ನಾಕರ್ ರೈ ಭೇಟಿ-ಫ್ಲ್ಯಾಗ್ ವಿನಿಮಯ

0

ಪುತ್ತೂರು: ಆಸ್ಟ್ರೇಲಿಯಾದ ಮೆಲ್ಬರ್ನ್ ರೋಟರಿ ಕ್ಲಬ್‌ಗೆ ರೋಟರಿ ಯುವದ ಸ್ಥಾಪಕಾಧ್ಯಕ್ಷ ಹಾಗೂ ಪ್ರಸ್ತುತ ವರ್ಷ ರೋಟರ್‍ಯಾಕ್ಟ್ ಜಿಲ್ಲಾ ಸಭಾಪತಿ(ಡಿಆರ್‌ಸಿಸಿ)ಯಾಗಿ ಸೇವೆ ಸಲ್ಲಿಸುತ್ತಿರುವ ರತ್ನಾಕರ್ ರೈ ಕೆದಂಬಾಡಿಗುತ್ತುರವರು ಸೆ.5 ರಂದು ಭೇಟಿ ನೀಡಿ ರೋಟರಿ ಕ್ಲಬ್ ಪುತ್ತೂರು ಯುವದ ಹಾಗೂ ಮೆಲ್ಬರ್ನ್ ರೋಟರಿ ಕ್ಲಬ್‌ನ ಫ್ಲ್ಯಾಗ್ ಅನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2022, ಆಗಸ್ಟ್ 24 ರಿಂದ ಜರಗಿದ ಮಿಲಿಯನ್ ಡಾಲರ್ ಗ್ಲೋಬಲ್ ಕಾನ್ಫರೆನ್ಸ್‌ಗೆ ತಿಂಗಳಾಡಿ ಪದ್ಮಶ್ರೀ ಗ್ರೂಪ್‌ನ ಆಡಳಿತ ಪಾಲುದಾರರಾದ ಶ್ರೀಧರ್ ರೈ ಕೆದಂಬಾಡಿಗುತ್ತು ಹಾಗೂ ಪದ್ಮಾವತಿ ಎಸ್.ರೈ ಪುತ್ರ ಕೆದಂಬಾಡಿಗುತ್ತು ರತ್ನಾಕರ್ ರೈ ಸತತ ಎಂಟನೇ ಬಾರಿ 15 ದಿನಗಳ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದು ಈ ಸಂದರ್ಭದಲ್ಲಿ ಮೆಲ್ಬರ್ನ್ ರೋಟರಿ ಕ್ಲಬ್‌ಗೆ ಭೇಟಿ ನೀಡಿ ಅಲ್ಲಿನ ಕ್ಲಬ್ ಅಧ್ಯಕ್ಷರೊಂದಿಗೆ ಫ್ಲ್ಯಾಗ್ ವಿನಿಮಯ ಮಾಡುವುದರೊಂದಿಗೆ ರೋಟರಿ ಯುವ ಸೇರಿದಂತೆ ಪುತ್ತೂರಿನ ಏಳು ರೋಟರಿ ಕ್ಲಬ್‌ಗಳ ಸಮಾಜಮುಖಿ ಕಾರ್ಯವೈಖರಿಯನ್ನು ಪ್ರಸ್ತುತಪಡಿಸಿದ್ದು, ಮೆಲ್ಬರ್ನ್ ರೋಟರಿ ಕ್ಲಬ್ ಅಧ್ಯಕ್ಷೆ ರೋಟರಿ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿರುತ್ತಾರೆ ಎಂದು ರತ್ನಾಕರ್ ರೈ `ಸುದ್ದಿ’ಗೆ ತಿಳಿಸಿದರು.

ರತ್ನಾಕರ್ ರೈ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿದ್ದು, ಪುತ್ತೂರಿನ ಜೀವವಿಮಾ ವ್ಯವಹಾರ ಕ್ಷೇತ್ರದಲ್ಲಿ ಸತತ 12 ಬಾರಿ ಎಂಡಿಆರ್‌ಟಿ ಆಗಿ, ಮೂರು ಬಾರಿ ಸಿಒಟಿ(ಕೋರ್ಟ್ ಆಫ್ ದಿ ಟೇಬಲ್)ಆಗಿ ಆಯ್ಕೆಯಾಗಿ ಈ ವಿಶಿಷ್ಟ ಸಾಧನೆಯೊಂದಿಗೆ ಜೀವವಿಮಾ ನಿಗಮದ ಅತ್ಯಂತ ಪ್ರತಿಷ್ಠಿತ ಕಾರ್ಪೋರೇಟ್ ಕ್ಲಬ್‌ನ ಸದಸ್ಯತ್ಯವನ್ನು ಈ ಹಿಂದೆ ಪಡೆದಿದ್ದರು. 20 ವರ್ಷಗಳಿಂದ ವಿಮಾ ವ್ಯವಹಾರ ಮಾಡಿಕೊಂಡು ಮುಖ್ಯ ವಿಮಾ ಸಲಹೆಗಾರರಾಗಿದ್ದು ಮಾತ್ರವಲ್ಲದೆ 18ಕ್ಕಿಂತಲೂ ಹೆಚ್ಚು ಸೂಪರ್‌ವೈಸ್ಡ್ ಏಜೆಂಟರನ್ನು ನೇಮಕ ಮಾಡಿಕೊಂಡು ಬರುವ ಮೂಲಕ ರತ್ನಾಕರ್ ರೈ `ಡೈಮಂಡ್ ಆಂಡ್ ಗೋಲ್ಡ್ ಬ್ರಿಗೇಡ್‌ಶಿಪ್’ಗೆ ಅರ್ಹತೆ ಪಡೆದವರಾಗಿದ್ದಾರೆ.
8ನೇ ಬಾರಿ ವಿದೇಶಿ ಪ್ರವಾಸ:
ರತ್ನಾಕರ್ ರೈ ಈಗಾಗಲೇ ಆಮೇರಿಕಾದ ಕ್ಯಾಲಿಪೋರ್ನಿಯಾ, ಫಿಲಡೆಲ್ಫಿಯಾದ ಪೆನ್ವಿಲ್ವೇನಿಯಾ, ನ್ಯೂ ಒರ್ಲೆನ್‌ನ ಲೂಸಿಯಾನ, ಪ್ಲೋರಿಡಾದ ಒರ್ಲಾಂಡೋ, ಲಾಸ್ ಏಂಜಲಿಸ್ ಹಾಗೂ ಕೆನಡಾದ ಟೊರೊಂಟೋದ ಒನ್‌ಟರಿಯೋದಲ್ಲಿ ನಡೆದ ವರ್ಲ್ಡ್ ಇನ್ಸೂರೆನ್ಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದು, ಕಳೆದ 2019ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಈ ಬಾರಿ ಎಂಟನೇ ಬಾರಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಮಾತ್ರವಲ್ಲದೆ ಸತತ 12ಕ್ಕಿಂತಲೂ ಹೆಚ್ಚು ಬಾರಿ ಎಂಡಿಆರ್‌ಟಿಯಾಗಿ ಮಿಲಿಯನ್ ಡಾಲರ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಇದೀಗ ಎಂಡಿಆರ್‌ಟಿ ಲೈಫ್ ಮೆಂಬರ್ ಆಗಿ ಹೊರ ಹೊಮ್ಮಿರುತ್ತಾರೆ.

LEAVE A REPLY

Please enter your comment!
Please enter your name here