ಪುತ್ತೂರಿನ ಹಿರಿಯ ಶಿಕ್ಷಕರಿಗೆ ರೋಟರಿ ಸೆ೦ಟ್ರಲ್ ನಿಂದ ಗೌರವ ಸನ್ಮಾನ

0

ಪುತ್ತೂರು; ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಿರಿಯ ಅದ್ಯಾಪಕರುಗಳಿಗೆ ಅವರುಗಳ ಮನೆಯಲ್ಲೇ ಸನ್ಮಾನಿಸುವ ಕಾರ್ಯ ನಡೆಯಿತು.

ಲಿಟ್ಲ್ ಫ಼್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 39ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಲೀಲಾವತಿ, ಫಿಲೋಮಿನಾ ಪ್ರೌಢಶಾಲೆಯಲ್ಲಿ 37 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರವೀಂದ್ರ ರಾವ್, ಮುಕ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 29 ವರ್ಷ ಸೇವೆ ಸಲ್ಲಿಸಿದ ಕಸ್ತೂರಿ ಈ ಮೂವರು ಅದ್ಯಾಪಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಕಾರ್ಯದರ್ಶಿ ಚಂದ್ರಹಾಸ ರೈ, ತಿಂಗಳ ಸಂಯೋಜಕ ಪುರುಷೊತ್ತಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯ್ಕ್, ಮೆಂಬರ್ ಶಿಪ್ ಡೆವಲಪ್ ಮೆಂಟ್ ಚೇಯರ್ ಮ್ಯಾನ್ ಪದ್ಮನಾಭ ಶೆಟ್ಟಿ, ಸ್ಥಾಪಕ ಅದ್ಯಕ್ಷ ಸಂತೋಷ್ ಶೆಟ್ಟಿ, ಓಕೇಶನಲ್ ಸರ್ವೀಸ್ ನಿರ್ದೇಶಕ ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕ ಪಿ.ಎಮ್ ಅಶ್ರಫ್ ಮುಕ್ವೆ, ಟಿ .ಆರ್ .ಎಫ಼್ ಚೇರ್ ಮ್ಯಾನ್ ಶಿವರಾಮ್ ಎಮ್ ಎಸ್,ಬಾಗವಹಿಸಿದರು.

LEAVE A REPLY

Please enter your comment!
Please enter your name here