ಅಮ್ಮಾ ಕವರ್ ಸಾಂಗ್ ಟ್ರೈಲರ್ ಬಿಡುಗಡೆ

0

ಪುತ್ತೂರು : ಆರ್.ಎಸ್.ಫೊಟೊಪ್ಲೇ ಲಾಂಛನದಲ್ಲಿ ಚಂದ್ರು ಕಬ್ಬಳ ನಿರ್ಮಾಣದ ರಮ್ಯಶ್ರೀ ಕಥೆ-ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಅಮ್ಮಾ ಕವರ್ ಸಾಂಗ್‌ನ ಟ್ರೈಲರ್ ಆ.31ರ ಗಣೇಶ ಚತುರ್ಥಿಯಂದು ಆರ್.ಎಸ್.ಫೊಟೋಪ್ಲೇ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು.

ಹಾಡಿನಲ್ಲಿ ಲೋಲಾಕ್ಷಿ ಆಚಾರ್ಯ, ಕನ್ನಡ ಮಲಯಾಳಂ ನಟಿ ಸುಚಿತಾ ಎಸ್.ರೈ, ಸುರಕ್ಷಾ ಸಾಲಿಯಾನ್, ಪ್ರಜಿತಾ ಕರ್ಪೇ, ಬಾಲನಟಿ ರುತ್ವಾ ಹೆಚ್.ಪಿ. ನಟಿಸಿದ್ದಾರೆ. ಮಹಿಳಾ ನಿರ್ದೇಶಕಿ ರಮ್ಯಶ್ರೀ ನಿರ್ದೇಶಿಸಿರುವ ಹಾಡಿನಲ್ಲಿ ಮಹಿಳೆಯರೆ ಅಭಿನಯಿಸಿರುವುದು ವಿಶೇಷ. ಅಮ್ಮ ಮಗಳ ಸಂಬಂಧದ ಸುತ್ತ ನಡೆಯುವ ಕಥೆಯಾಗಿದ್ದು ಇದರ ಅಫಿಶಿಯಲ್ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡಿದೆ. ಸಿಂಧಿಯ ವರೋನಿಕಾ ಡಿಸೋಜರವರ ಸಾಹಿತ್ಯ ಮತ್ತು ಗಾಯನ, ಸುಪ್ರೀತ್‌ರವರ ಕ್ಯಾಮರಾ, ಶಿವದೂತೆ ಗುಳಿಗ ಖ್ಯಾತಿಯ ಮೇಕಪ್ ಆರ್ಟಿಸ್ಟ್ ಕಾಳಿದಾಸ ಮತ್ತು ವೆಂಕಟೇಶ್‌ರವರ ಮೇಕಪ್ ಹಾಗೂ ಶರಣ್ ಸಚ್ಚರಿಪೇಟೆರವರ ಪೋಸ್ಟರ್ ಡಿಸೈನ್ ಕೆಲಸ ಮಾಡಿದ್ದಾರೆ.

LEAVE A REPLY

Please enter your comment!
Please enter your name here