ಲಿವಾ ಮಿಸ್ ಯೂನಿವರ್ಸ್ ಸ್ಪರ್ಧಿ ದಿವಿತಾ ರೈಗೆ ಹುಟ್ಟೂರ ಅಭಿನಂದನೆ

0

ಮಂಗಳೂರು:ಲಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಪುತ್ತೂರಿನ ಚೆಲುವೆ ದಿವಿತಾ ರೈ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ನಗರದ ಅಂಬೇಡ್ಕರ್(ಜ್ಯೋತಿ) ವೃತ್ತದಿಂದ ತೆರೆದ ವಾಹನದಲ್ಲಿ ದಿವಿತಾ ರೈ ಅವರನ್ನು ಮೆರವಣಿಗೆಯಲ್ಲಿ ಬಂಟ್ಸ್ ಹಾಸ್ಟೆಲ್‌ನ ಗೀತಾ ಶೆಟ್ಟಿ ಮೆಮೋರಿಯಲ್ ಸಭಾಂಗಣಕ್ಕೆ ಕರೆತರಲಾಯಿತು. ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಿವಿತಾ ರೈ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ಸುಮಂಗಲಿಯರು ಆರತಿ ಬೆಳಗಿ,ತಿಲಕವಿಟ್ಟು,ಮಲ್ಲಿಗೆ ಹಾರವನ್ನು ಹಾಕಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.ಬಂಟರ ಮಾತೃ ಸಂಘ ಹಾಗೂ ಮಂಗಳೂರು ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದಿವಿತಾ ರೈ ಅವರನ್ನು ತುಳುನಾಡಿನ ಸಂಪ್ರದಾಯದಂತೆ ವೀಳ್ಯದೆಳೆ, ಅಡಿಕೆ ನೀಡಿ, ಸೀರೆ, ಕೃಷ್ಣನ ಮೂರ್ತಿ ಕೊಟ್ಟು ಅಭಿನಂದಿಸಲಾಯಿತು.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.ಡಾ.ಆಶಾ ಜ್ಯೋತಿ ರೈ ಸ್ವಾಗತಿಸಿ, ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದನೆ ಸಲ್ಲಿಸಿದರು.ಕೋಶಾಽಕಾರಿ ಕೃಷ್ಣಪ್ರಸಾದ್ ರೈ, ಶ್ರೀ ರಾಮಕೃಷ್ಣ ವಿದ್ಯಾರ್ಥಿ ನಿಲಯದ ಅಮೃತೋತ್ಸವ ಸಮಿತಿಯ ಸಂಚಾಲಕಿ ಶಾಲಿನಿ ಶೆಟ್ಟಿ, ಪದಾಧಿಕಾರಿ ಸವಿತಾ ಶೆಟ್ಟಿ ಉಪಸ್ಥಿತರಿದ್ದರು.

ಮಂಗಳೂರು ನಿವಾಸಿಗಳಾಗಿದ್ದು, ಸದ್ಯ ಮುಂಬೈಯಲ್ಲಿ ನೆಲೆಸಿರುವ ದಿವಿತಾ ರೈ ತಂದೆ ದಿಲೀಪ್ ರೈ, ತಾಯಿ ಪ್ರಮಿತಾ ರೈ ಹಾಗೂ ಅವರ ಸಂಬಂಽಕರು ಸಂಭ್ರಮದಲ್ಲಿ ಪಾಲ್ಗೊಂಡು ಕೃತಜ್ಞತೆ ವ್ಯಕ್ತಪಡಿಸಿದರು.

‘ಹುಟ್ಟೂರಿನ ಹೃದಯಸ್ಪರ್ಶಿ ಅಭಿನಂದನೆ ಎಂದೂ ಮೆರೆಯಲಾಗದ ಕ್ಷಣ.ನನ್ನ ಮೇಲೆ ಹುಟ್ಟೂರಿನ ಜನರಿಗೆ ಭಾರೀ ನಿರೀಕ್ಷೆಯಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಅದನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ.ನಾನು ಓದಿದ್ದು ವಾಸ್ತುಶಿಲ್ಪವಾದರೂ ಮಾಡೆಲಿಂಗ್ ಕ್ಷೇತ್ರ ನನ್ನನ್ನು ಆಕರ್ಷಿಸಿತು.ಯಾವುದೇ ಗುರಿ ಮುಟ್ಟಲು ಸ್ವಸಾಮರ್ಥ್ಯದ ಮೇಲೆ ನಂಬಿಕೆ, ಆತ್ಮವಿಶ್ವಾಸ ಮುಖ್ಯ ಎಂಬುದು ನನ್ನ ನಂಬಿಕೆ – ದಿವಿತಾ ರೈ

LEAVE A REPLY

Please enter your comment!
Please enter your name here