ಭಾರತ ಐಕ್ಯತಾ ಯಾತ್ರೆ ಯಶಸ್ವಿಗೆ ಕಾವು ಹೇಮನಾಥ್ ಶೆಟ್ಟಿ ನೇತೃತ್ವದಲ್ಲಿ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ಪ್ರಾರ್ಥನೆ

0

ಪುತ್ತೂರು : ದೇಶದ ಐಕ್ಯತೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ವಯನಾಡು ಸಂಸದ ರಾಹುಲ್ ಗಾಂಧೀಜಿಯವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 6 ತಿಂಗಳ ಕಾಲ ಸುಮಾರು 3574 ಕಿ.ಮೀ. ಭಾರತ ಐಕ್ಯತಾ ಪಾದಯಾತ್ರೆ ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದ್ದು ಈ ಯಾತ್ರೆಯ ಯಶಸ್ಸಿಗಾಗಿ ಸರ್ವ ಧರ್ಮಗಳ ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿಯವರ ನೇತೃತ್ವದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿ, ಜುಮ್ಮಾ ಮಸೀದಿಯ ದರ್ಗಾ, ಮ್ಯಾದೆ ದೇವುಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ, ರವಿಚಂದ್ರ ಆಚಾರ್ಯ, ಗಂಗಾಧರ ಶೆಟ್ಟಿ ಎಲಿಕ, ಅರುಣ್ ಕುಮಾರ್ ಪಡೀಲ್, ಕೊರಗಪ್ಪ ಗೌಡ, ಜಯಪ್ರಕಾಶ್ ರೈ ನೂಜಿಬೈಲು, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ರೋಶನ್ ಪಡೀಲ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಣ್ಚತ್ತಾರ್, ಮಸೀದಿ ಅಧ್ಯಕ್ಷ ಎಲ್‌ಟಿ ಅಬ್ದುಲ್‌ರಜಾಕ್ ಹಾಜಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾನ್ ಬಪ್ಪಳಿಗೆ, ಆಸ್ಪಕ್ ಬಪ್ಪಳಿಗೆ, ಇಸಾಕ್ ಸಾಲ್ಮರ, ಹಾಜಿ ಫಝಲ್ ಪಡೀಲ್, ಅಝಾದ್ ದರ್ಭೆ, ರಝಾಕ್ ಪಡೀಲ್, ಅನ್ವರ್‌ಖಾಸಿಂ, ಶಾನವಾಝ್ ಬಪ್ಪಳಿಗೆ, ಫಾರೂಕ್ ಕೆದುವಡ್ಕ, ಇಸ್ಮಾಯಿಲ್ ಬಲ್ನಾಡ್, ಇಸ್ಮಾಯಿಲ್ ಸಾಲ್ಮರ, ಅಬೂಬಕ್ಕರ್ ಮುಲಾರ್, ಹನೀಫ್ ಮುಂಡೂರು, ಚರ್ಚ್ ಪಾಲಾನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಸದಸ್ಯ ಝೇವಿಯರ್ ಡಿ. ಸೋಜಾ, ಕ್ರಿಸ್ತೋಫರ್ ವೆಲೆರಿಯನ್ ಡಯಾಸ್, ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಮೆಲ್ವಿನ್ ಫೆರ್ನಾಂಡೀಸ್ ಸೇರಿದಂತೆ ಹಲವರು ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಹನೀಫ್ ದಾರಿಮಿ ದುವಾ ಮಾಡಿದರು.

LEAVE A REPLY

Please enter your comment!
Please enter your name here