ಮೋದಿ ಕಾರ್ಯಕ್ರಮದ ವೀಕ್ಷಣೆ ವಿವರಣೆ ನೀಡಿದ ಕಾಂಗ್ರೆಸ್; ನಾಲ್ಕು ಜನ ಕುರುಡರು ಸೇರಿ ಆನೆಯನ್ನು ವರ್ಣಿಸಿದಂತಾಗಿದೆ

0

  • ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತ್ಯುತ್ತರ

ಪುತ್ತೂರು: ಸೆ. 2ರಂದು ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು, ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿರುವುದನ್ನು ಕಂಡಂತಹ ಕಾಂಗ್ರೆಸ್‌ನವರಿಗೆ ಹೊಟ್ಟೆ ಉರಿಯಾಗಿದೆ. ಈ ಕುರಿತು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಅವರು ಮೋದಿ ಕಾರ್ಯಕ್ರಮದ ವೀಕ್ಷಣೆ ವಿವರಣೆ ನೀಡಿದಂತೆ ಪತ್ರಿಕಾಗೋಷ್ಠಿ ನಡೆಸಿರುವುದು ನಾಲ್ಕು ಜನ ಕುರುಡರು ಸೇರಿ ಆನೆಯನ್ನು ವರ್ಣಿಸಿದಂತಾಗಿದೆ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಹೇಳಿದ್ದಾರೆ.

ಇತ್ತೀಚೆಗೆ ಮೋದಿ ಕಾರ್ಯಕ್ರಮಕ್ಕೆ ಸರಕಾರಿ ವೆಚ್ಚ ಮಾಡಲಾಗಿದೆ ಮತ್ತು ಪ್ರವೀಣ್ ನೆಟ್ಟಾರಿಗೆ ಶ್ರದ್ದಾಂಜಲಿ ಸಲ್ಲಿಸಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಆರೋಪಿಸಿ ನಡೆಸಿದ ಪತ್ರಿಕಾಗೋಷ್ಠಿಗೆ ಸಂಬಂಧಿಸಿ ಬಿಜೆಪಿಯಿಂದ ಸೆ.9ರಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿದೆ. ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಪ್ರಧಾನಿ ಕಾರ್ಯಕ್ರಮ ಸಂಪೂರ್ಣ ಸರಕಾರಿಯಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ದಾಂಜಲಿ ಸಲ್ಲಿಸಿಲು ಇದು ಪಕ್ಷದ ಕಾರ್ಯಕ್ರಮವಲ್ಲ. ಸರಕಾರಿ ಕಾರ್ಯಕ್ರಮಕ್ಕೆ ಏನು ಮಾತನಾಡಬೇಕೆಂಬ ಪರಿಜ್ಞಾನ ದೋಷಿಸುವರು ತಿಳಿದಿರಬೇಕು. ಜೊತೆಗೆ ಪ್ರವೀಣ್ ನೆಟ್ಟಾರು ಹತ್ಯೆಗೆ ಏನು ಮಾಡಬೇಕೋ ಅದನ್ನು ಕೇಂದ್ರ ಸರಕಾರ ಮಾಡಿದೆ. ಕನಿಷ್ಠ ಒಂದು ಬಾರಿಯೂ ಜನಪ್ರತಿನಿಧಿಯಾಗದ ಅಮಳ ರಾಮಚಂದ್ರ ಅವರಿಗೆ ಸರಕಾರಿ ಕಾರ್ಯಕ್ರಮ ಯಾವುದು ಪಕ್ಷದ ಕಾರ್ಯಕ್ರಮ ಯಾವುದು ಎಂದು ಪರಿಜ್ಞಾನ ಇರಬೇಕು. ಇದರ ಜೊತೆಗೆ ನಮ್ಮ ಕಾರ್ಯಕರ್ತರು ಸರಕಾರದ ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ತೆರಳಿಲ್ಲ. ಅದೇ ರೀತಿ ಬಲವಂತವಾಗಿ ಕರೆದೊಯ್ಯುವ ಪ್ರಮೇಯವೂ ಬಿಜೆಪಿಗೆ ಬಂದಿಲ್ಲ. ಮೋದಿಯವರ ಯೋಜನೆಗಳನ್ನು ಹೇಳಿದರೆ ಒಂದು ದಿನ ಸಾಕಾಗುವುದಿಲ್ಲ. ಇದಕ್ಕೆ ಉದಾರಹಣೆಯಾಗಿ ಇತ್ತೀಚೆಗೆ ಡಾ|ಡಿ ವಿರೇಂದ್ರ ಹೆಗ್ಡೆಯವರು ಪ್ರಧಾನಿಯರ ಸುಮಾರು 600 ಯೋಜನೆಗಳ ಪಟ್ಟಿ ಮಾಡಿದ್ದಾರೆ. ಆದರೆ ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮ ನೋಡಿ ಕಾಂಗ್ರೆಸ್‌ಗೆ ಹೊಟ್ಟೆ ಉರಿಯಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಲಿದೆ:
ಕಾಂಗ್ರೆಸ್ ಆಡಳಿತದಲ್ಲಿ ಅದೆಷ್ಟೋ ಹಿಂದು ಯುವಕರ ಬಲಿಯಾಗಿದೆ. ಆಗ ಯಾವುದೇ ಕ್ರಮ ಕೈಗೊಳ್ಳದೆ ಈಗ ನಮ್ಮ ಸರಕಾರ ಬಂದಾಗ ಹತ್ಯೆಯನ್ನು ಖಂಡಿಸಿ ಮೊಸಳೆ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುವಾಗ ಕಾಂಗ್ರೆಸ್‌ಗೆ ಇಂತಹ ನಾಟಕ ಸಾಮಾನ್ಯವಾಗಿದೆ. ಆದರೆ ಎಲ್ಲಾ ಅಂಕಿ ಅಂಶಗಳು ಜನರ ಮುಂದಿದೆ. ಹಾಗಾಗಿ ಕಾಂಗ್ರೆಸ್ ಇದರಲ್ಲಿ ಮುಜುಗರಕ್ಕೊಳಗಾಗಲಿದೆ. ಸಮಾವೇಶವ ಮಾಡುವಾಗ ಹಣ, ಹೆಂಡವನ್ನು ಹಂಚಿ ಜನತಂದು ಅಭ್ಯಾಸ ಇರುವ ಕಾಂಗ್ರೆಸ್‌ಗೆ ಕಳ್ಳದಾರಿಯಲ್ಲಿ ಅವರದ್ದೆ ರೀತಿಯಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಚುನಾವಣೆ ಹತ್ತಿರ ಬರುವಾಗ ಕಾಂಗ್ರೆಸ್ ಗಿಮಿಕ್:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದ ಬಳಿಕ ಮೂರುವರೆ ವರ್ಷದ ಅವಧಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗಳಿಗ ನೀರಿನ ಸೌಲಭ್ಯ ಆಗುತ್ತಿದೆ. ಈಗಾಗಲೇ 2ನೇ ಹಂತದ ಕೆಲಸ ಮುಗಿಯುತ್ತಿದೆ. ಪಂಚಾಯತ್‌ಗೆ ರೂ 1.50 ಕೋಟಿ ಅನುದಾನದಲ್ಲಿ ಟೆಂಡರ್ ಆಗಿ ಕೆಲಸ ಆಗುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಕಡೆಯಿಂದ ನೀರು ಪೂರೈಸುವ ಕೆಲಸ ಆಗುತ್ತದೆ. ಆದರೆ ಈ ಕುರಿತು ಆರೋಪ ಮಾಡುತ್ತಿರುವ ಅಮಳ ರಾಮಚಂದ್ರ ಅವರು ಅಧಿಕಾರಿಗಳ ಮೂಲಕ ಇದರ ಮಾಹಿತಿ ಪಡೆದು ಸಾಮಾನ್ಯ ಜ್ಞಾನ ಪಡೆಯಬಹುದು ಎಂದ ಅವರು ಕಾಂಗ್ರೆಸ್‌ನವರು ಚುನಾವಣೆ ಬಂದಾಗ ಗಿಮಿಕ್ ಮಾಡಲು ಆರಂಬಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಹರಿಪ್ರಸಾದ್ ಯಾದವ್, ಸುರೇಶ್ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here