ಕಬಕ : ಪದ್ಮಶ್ರೀ ಹರೇಕಳ ಹಾಜಬ್ಬರಿಂದ ‘ಚೆರ್ರಿಲರ್ನ್’ ಆಪ್ ಲೋಕಾರ್ಪಣೆ

0

ಪುತ್ತೂರು : ಕಬಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರೇಕಳ ಹಾಜಬ್ಬರವರಿಂದ ‘ಚೆರ್ರಿಲರ್ನ್’ ಕಲಿಕಾ ಆಪ್ ಸಾರ್ವಜನಿಕವಾಗಿ ಲೋಕಾರ್ಪಣೆಯಾಯಿತು.ಈ ಸಂದರ್ಭದಲ್ಲಿ ಚೆರ್ರಿಲರ್ನಿನ ಮುಖ್ಯ ಕಾರ್ಯನಿರ್ವಾಹಕ ಶ್ರೀನಿಧಿ ರವಿಶಂಕರ್, ನಿರ್ದೇಶಕರಾದ ಮಧುಸೂದನ್ ಆಯರ್, ಡಾ. ಅನಿಲ್‌ರಾಜ್‌ಮನೋಹರ್ ರೈ, ಫ್ರೆಂಚಾಯಿಸಿ ಮುಖ್ಯಸ್ಥರಾದ ಕೇಶವ ಚಂದ್ರಶೇಖರ್, ಕಬಕ ಗ್ರಾ.ಪಂ. ಅಧ್ಯಕ್ಷ ವಿನಯ್ ಕುಮಾರ್,ಉಪಾಧ್ಯಕ್ಷ ರುಕ್ಮಯ್ಯ ಗೌಡ, SDMC ಅಧ್ಯಕ್ಷರಾದ ವನಿತಾ, ಉಪಾಧ್ಯಕ್ಷರಾದ ಇಮ್ತಿಹಾಸ್,ಪಂಚಾಯತ್ ಸದಸ್ಯರಾದ ಸಾಬ ಹಾಗೂ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಲತಾ ಕುಮಾರಿ ಉಪಸ್ಥಿತರಿದ್ದರು.

ಚೆರ್ರಿಲರ್ನ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀನಿಧಿ ರವಿಶಂಕರ್ ಅವರು ಪ್ರಾಸ್ತಾವಿಕ ನುಡಿಯನ್ನಾಡಿದರು.ನಂತರ ಮಾತನಾಡಿದ ಪದ್ಮಶ್ರೀ ಹಾಜಬ್ಬನವರು, quot ಮನೆಯಲ್ಲಿ ಹಲವು ಅನಾನುಕೂಲವಿದ್ದ ಕಾರಣ ಚೆನ್ನಾಗಿ ಶಿಕ್ಷಣ ಪಡೆಯಲು ನನಗಾಗಲಿಲ್ಲ. ಆದರೆ ನನ್ನ ಪರಿಸ್ಥಿತಿ ಯಾರಿಗೂ ಬರಬಾರದೆಂದು ಶಾಲೆಕಟ್ಟಲು ನಿರ್ಧರಿಸಿದೆ.ಅದೇ ರೀತಿ ಮೊಬೈಲ್ ಆಪಿನ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಶಾಲಾ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಅವಕಾಶವನ್ನು ಚೆರ್ರಿಲರ್ನ್ ಸಂಸ್ಥೆಯವರು ಮಾಡಿರುವುದು ನನಗೆ ತುಂಬಾ ಸಂತಸವನ್ನುಂಟುಮಾಡಿದೆ ಎನ್ನುತ್ತಾ ಮಕ್ಕಳಿಗೆ ಹಾಗೂ ಚೆರ್ರಿಲರ್ನ್ ಸಂಸ್ಥೆಗೆ ಶುಭ ಹಾರೈಸಿದರು. ಶಾಲೆಯ ಕಡೆಯಿಂದ ಹಾಗೂ ಚೆರ್ರಿಲರ್ನ್ ಸಂಸ್ಥೆಯ ಕಡೆಯಿಂದ ಪದ್ಮಶ್ರೀ ಹರೇಕಳ ಹಾಜಬ್ಬರವರನ್ನು ಸನ್ಮಾನ ಮಾಡಲಾಯಿತು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಚೆರ್ರಿಲರ್ನ್ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಜಬ್ಬನವರು ಬಹುಮಾನವನ್ನು ವಿತರಿಸಿದರು.ಶಾಲಾ ಮಕ್ಕಳು ಹಾಜಬ್ಬನವರ ಕುರಿತು ಬರೆದ ಸ್ವರಚಿತ ಕವನವನ್ನು ಹಾಡಿದರು. ಚೆರ್ರಿಲರ್ನ್ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ.ಅನಿಲ್ ವಂದನಾರ್ಪಣೆ ಮಾಡಿದರು. ನೆರೆದವರಿಗೆಲ್ಲಾ ಸಿಹಿತಿಂಡಿಯನ್ನು ಹಂಚಿ ಕಾರ್ಯಕ್ರಮದ ಸಮಾರೋಪ ಮಾಡಲಾಯಿತು.

ಚೆರ್ರಿಲರ್ನ್ ಎಂದರೇನು?: ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ತೊಡಕುಗಳನ್ನು ಮನಗಂಡು, ಪ್ರಾಥಮಿಕ ಹಂತದಿಂದಲೇ ಮಕ್ಕಳ ಕಲಿಕೆಗೆ ಸಹಾಯ ಒಂದರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ, ತಮ್ಮ ಪಠ್ಯದ ವಿಷಯಗಳನ್ನು ಚಟುವಟಿಕೆಗಳು, ಆಕರ್ಷಕ ದೃಶ್ಯಾವಳಿಗಳು ಮತ್ತು ಅಣಕು ಪರೀಕ್ಷೆಗಳ ಮೂಲಕ ಕಲಿಯಲು ಸಹಕಾರಿಯಾಗುವ ಮೊಬೈಲ್ ತಂತ್ರಾಂಶವೇ ಚೆರ್ರಿಲರ್ನ್ ಆಪ್. ಚೆರ್ರಿಲರ್ನ್ ಆಪ್ ಪ್ರಾಥಮಿಕ ಹಂತದ ಬಳಕೆಯಲ್ಲಿದ್ದು ಪ್ರಸ್ತುತ ಚೆರ್ರಿಲರ್ನ್ ಆಪನ್ನು ಕರ್ನಾಟಕ ರಾಜ್ಯದ ೨೫,೦೦೦ ಕ್ಕೂ ಅಽಕ ಒಂದರಿಂದ ಐದನೇಯ ತರಗತಿಯವರೆಗಿನ ಮಕ್ಕಳು ಬಳಸುತ್ತಿದ್ದಾರೆ.

ಚೆರ್ರಿಲರ್ನಿನ ಪ್ರಯೋಜನಗಳು: ? ಕರ್ನಾಟಕ ರಾಜ್ಯ ಪಠ್ಯಕ್ರಮ ಆಧಾರಿತ ಒಂದರಿಂದ ಐದನೆಯ ತರಗತಿಯ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಸಂವಾದಾತ್ಮಕ
ಚಟುವಟಿಕೆಗಳು, ಕುತೂಹಲಕಾರಿ ಶಬ್ದಾವಳಿಗಳು, ಚಿತ್ರ ಹಾಗೂ ದೃಶ್ಯಾವಳಿಗಳ ಮೂಲಕ ನೀಡಲಾಗಿದೆ. ಇಂಗ್ಲೀಷ್ ಹಾಗೂ ಕನ್ನಡ ವ್ಯಾಕರಣವನ್ನು ಮೂಲದಿಂದಲೇ ಕಲಿಯಲು ಸಹಕಾರಿಯಾಗಿದೆ ಚೆರ್ರಿಲರ್ನ್ ಆಪಲ್ಲಿ ಕಲಿಕಾ ಪ್ರಕ್ರಿಯೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಲಾಗಿದೆ ಹಾಗೂ ಶಾಲೆಯಲ್ಲಿ ಕಲಿಸಿದ ಪಠ್ಯದ ವಿಷಯಗಳನ್ನೆಲ್ಲಾ ಮನೆಯಲ್ಲಿ ಸುಲಭವಾಗಿ ಮನನ ಮಾಡಿಕೊಳ್ಳುವ ಅವಕಾಶ. ಮಕ್ಕಳು ಓದಿದ, ಕಲಿತ ವಿಷಯಗಳನೆಲ್ಲಾ ಶಬ್ದ ಹಾಗೂ ದೃಶ್ಯಾವಳಿಗಳನ್ನು ನೋಡುತ್ತಾ ಉದಾಹರಣೆಗಳ ಮೂಲಕ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಲಾಯಿತು.

LEAVE A REPLY

Please enter your comment!
Please enter your name here