ಉಪ್ಪಿನಂಗಡಿ: ನಾಡಕಚೇರಿಗೆ ಡಿಸಿ ಭೇಟಿ: ಕಡತಗಳ ಪರಿಶೀಲನೆ

0

ರೈತ ಸಂಘದ ಮುಖಂಡರೊಂದಿಗೆ ಸಮಾಲೋಚನೆ

ಉಪ್ಪಿನಂಗಡಿ: ಇಲ್ಲಿನ ನಾಡಕಚೇರಿಗೆ ಶುಕ್ರವಾರ ಆಗಮಿಸಿದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕಡತಗಳ ಪರಿಶೀಲನೆ ನಡೆಸಿದರಲ್ಲದೆ, ಬಳಿಕ ರೈತ ಸಂಘದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ವಿಪರೀತ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಕೊಳೆರೋಗ ಬಾಧಿಸಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿರುವ ಬಗ್ಗೆ, ಸಾಲ ಮನ್ನಾದ ಯೋಜನೆಯಡಿ ಇನ್ನೂ ಹಲವು ರೈತರ ಖಾತೆಗಳಿಗೆ ಹಣ ಬಾರದ ಕುರಿತಾಗಿ, ಅಕ್ರಮ – ಸಕ್ರಮ ಭೂಮಿಗೆ ಎದುರಾಗುವ ಪ್ಲಾಟಿಂಗ್ ಸಮಸ್ಯೆ ಬಗ್ಗೆ, ಬಜತ್ತೂರು ಗ್ರಾಮದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಸೋಟಕ ಬಳಸಿ ಬಂಡೆಗಳನ್ನು ಒಡೆದಿದ್ದರಿಂದ ಪರಿಸರದ ಮನೆಗಳು ಹಾನಿಯಾದ ಬಗ್ಗೆ, ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಭೂಸ್ವಾಽನಗೊಂಡ ಜಮೀನಿಗೆ ಹಣ ವಿತರಣೆಯಲ್ಲಿ ತಾರತಮ್ಯವಾಗಿರುವುದನ್ನು ಸರಿಪಡಿಸುವ ಬಗ್ಗೆ ರೈತ ಮುಖಂಡರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ಜಿಲ್ಲಾಧಿಕಾರಿಯವರಿಂದ ವ್ಯಕ್ತವಾಯಿತು. ಈ ಸಂದರ್ಭ ತಹಶೀಲ್ದಾರ್ ನಿಸರ್ಗಪ್ರಿಯ, ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕ ನರಿಯಪ್ಪ, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ರೆಡ್ ಲಾರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು. ರೈತ ಸಂಘದ ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು, ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್, ಇಸಾಕ್ ಮಠ, ರಫೀಕ್ ಮಠ, ಶ್ರೀಧರ್ ಮಠ, ಅಸ್ಪಾಕ್ ಮಠ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here