ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ  ಹುಡುಗರ, ಹುಡುಗಿಯರ ಕಬಡ್ಡಿ ಪಂದ್ಯಾಟ- ಫಿಲೋಮಿನಾ ಕಾಲೇಜಿಗೆ ವಿನ್ನರ್ಸ್, ರನ್ನರ್ಸ್ ಪ್ರಶಸ್ತಿ

0

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಹಾಗೂ ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಸೆ.10 ರಂದು ನಡೆದ ತಾಲೂಕು ಮಟ್ಟದ ಹುಡುಗರ ಹಾಗೂ ಹುಡುಗಿಯರ ಕಬಡ್ಡಿ ಪಂದ್ಯಾಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹುಡುಗರ ವಿಭಾಗದಲ್ಲಿ ವಿನ್ನರ್ಸ್ ಹಾಗೂ ಹುಡುಗಿಯರ ವಿಭಾಗದಲ್ಲಿ ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿರುತ್ತದೆ.

ಹುಡುಗರ ವಿಭಾಗದಲ್ಲಿನ ಫೈನಲ್ ಹೋರಾಟದಲ್ಲಿ ಫಿಲೋಮಿನಾ ಕಾಲೇಜಿನ ಹುಡುಗರ ತಂಡ ಕೊಂಬೆಟ್ಟು ಸರಕಾರಿ ಜ್ಯೂನಿಯರ್ ಕಾಲೇಜನ್ನು ಸೋಲಿಸಿ ವಿನ್ನರ‍್ಸ್ ಆಗಿ ಹೊರಹೊಮ್ಮಿತು. ದ್ವಿತೀಯ ಕಲಾ ವಿಭಾಗದ ಕಾರ್ತಿಕ್ ಎಸ್, ಪ್ರಥಮ ಕಲಾ ವಿಭಾಗದ ಶಿಶಿಕ್ ಬಿ, ಮೊಹಮದ್ ಮುಝಮ್ಮಿಲ್, ದ್ವಿತೀಯ ವಾಣಿಜ್ಯ ವಿಭಾಗದ ಮೊಹಮದ್ ತಾಜುದ್ದೀನ್, ಮೊಹಮದ್ ನೌಫಲ್, ಕಿಶನ್ ರೈ ಎನ್, ಪ್ರಥಮ ವಾಣಿಜ್ಯ ವಿಭಾಗದ ಲತಿನ್ ಎನ್.ಭಂಡಾರಿ, ಪಿ.ಮನ್ವಿತ್ ಆಳ್ವ, ಮೊಹಿಯುದ್ದೀನ್ ಬಾದಿಶ್, ದ್ವಿತೀಯ ವಿಜ್ಞಾನ ವಿಭಾಗದ ಮೊಹಮದ್ ನೌಫಲ್, ಪ್ರಥಮ ವಿಜ್ಞಾನ ವಿಭಾಗದ ಪ್ರಣಾಮ್‌ರವರು ಭಾಗವಹಿಸಿರುತ್ತಾರೆ. ಕೂಟದಲ್ಲಿ ೧೦ ಕಾಲೇಜಿನ ತಂಡಗಳು ಭಾಗವಹಿಸಿದ್ದವು.

ಹುಡುಗಿಯರ ವಿಭಾಗದಲ್ಲಿ ಫೈನಲ್ ಹೋರಾಟದಲ್ಲಿ ಫಿಲೋಮಿನಾ ಕಾಲೇಜು ತಂಡವು ವಿವೇಕಾನಂದ ಕಾಲೇಜು ತಂಡದ ವಿರುದ್ಧ ಸೋತು ರನ್ನರ‍್ಸ್ ಪ್ರಶಸ್ತಿಯನ್ನು ಪಡೆಯಿತು. ಪ್ರಥಮ ವಾಣಿಜ್ಯ ವಿಭಾಗದ ಅಮೃತಾ ಕೆ, ದ್ವಿತೀಯ ವಿಜ್ಞಾನ ವಿಭಾಗದ ಚೈತ್ರ ಶೆಟ್ಟಿ, ಸಾನ್ವಿಕಾ ಕೆ.ಎಸ್, ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯ ಅಂಚನ್ ವೈ.ವೈ, ಚಮೀಶ ಯು, ಸೃಜನಾ ಎಸ್, ವಿಂಧ್ಯಾಶ್ರೀ ರೈ, ಅನಘಾ ಕೆ.ಎನ್, ಪ್ರಥಮ ಕಲಾ ವಿಭಾಗದ ಕೃತಿಕಾ, ದ್ವಿತೀಯ ವಾಣಿಜ್ಯ ವಿಭಾಗದ ಆಜ್ಞಾರವರು ಪಂದ್ಯಾಕೂಟದಲ್ಲಿ ಭಾಗವಹಿಸಿರುತ್ತಾರೆ. ಕೂಟದಲ್ಲಿ ಐದು ಕಾಲೇಜಿನ ತಂಡಗಳು ಭಾಗವಹಿಸಿದ್ದವು.

ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ತರಬೇತಿ ನೀಡಿರುತ್ತಾರೆ. ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರು ಮೆಚ್ಚುಗೆ ಸೂಚಿಸಿದ್ದಾರೆ.

ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅಹಮದ್ ರಾಫಿರವರು ಉತ್ತಮ ಕ್ಯಾಚರ್ ಹಾಗೂ ಹುಡುಗಿಯರ ವಿಭಾಗದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಕನ್ನಿಕಾ ಎಲ್.ಎಂರವರು ಉತ್ತಮ ರೈಡರ್ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here