ಪಾಣಾಜೆ ಪ್ರಾ.ಕೃ.ಪ.ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

  • ರೂ.37,41ಲಕ್ಷ ನಿವ್ವಳ ಲಾಭ, ಶೇ.6 ಡಿವಿಡೆಂಡ್
ನಿಡ್ಪಳ್ಳಿ; ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ ಇವರ ಅಧ್ಯಕ್ಷತೆಯಲ್ಲಿ ಸೆ.11ರಂದು ಸಂಘದ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷರು ವರದಿ ಮಂಡಿಸಿ ಮಾತನಾಡಿ 2021-22 ರ ಆರ್ಥಿಕ ವರ್ಷದಲ್ಲಿ ಸಂಘವು ರೂ.1,38,67,140 ಒಟ್ಟು ನಿವ್ವಳ ಲಾಭ ಗಳಿಸಿರುತ್ತದೆ.ಆದರೆ ಇನ್ನು ಮುಂದೆ ಸದಸ್ಯರ ಸಾಲಗಳ ಬರತಕ್ಕ ಬಡ್ಡಿಯನ್ನು ಲಾಭಕ್ಕೆ ಪರಿಗಣಿಸುವಂತಿಲ್ಲ ಎಂದು 2021-22 ನೇ ಸಾಲಿನಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಹಾಗಾಗಿ ವರದಿ ವರ್ಷದಲ್ಲಿ ಸದಸ್ಯರ ಸಾಲಗಳ ಮೇಲಿನ ಬರತಕ್ಕ ಬಡ್ಡಿಯನ್ನು (ರೂ. 1,01,25,500) ಲಾಭ- ನಷ್ಟ ತಖ್ತೆಯಿಂದ ಕಳೆದುಕೊಳ್ಳಲಾಗಿದೆ.
ಇದರಿಂದಾಗಿ 2021-22 ನೇ ಸಾಲಿನಲ್ಲಿ ರೂ.37,41,640  ನಿವ್ವಳ ಲಾಭ ಆಗಿರುತ್ತದೆ ಎಂದು ಹೇಳಿದ ಅವರು  ಶೇ.6 ಡೆವಿಡೆಂಡ್ ನೀಡಲಾಗುವುದು ಎಂದರು. 
ವರದಿ ವರ್ಷದ ಆರಂಭದಲ್ಲಿ 2,848 ಜನ ‘ ಎ’ ತರಗತಿ ಸದಸ್ಯರಿದ್ದು ಪ್ರಸಕ್ತ ಸಾಲಿಗೆ 105 ಮಂದಿ ಹೊಸದಾಗಿ ಸೇರ್ಪಡೆಗೊಂಡು 26 ಸದಸ್ಯರು ಸದಸ್ಯತ್ವ ತೊರೆದು ವರ್ಷಾಂತ್ಯಕ್ಕೆ 2,929 ಮಂದಿ ಸದಸ್ಯರಿದ್ದಾರೆ.
ಪಾಲುಬಂಡವಾಳ; ವರ್ಷಾರಂಭದಲ್ಲಿ ಸದಸ್ಯರ ಪಾಲುಬಂಡವಾಳ  ರೂ.2,98,40,465 ಇದ್ದು ವರ್ಷಾಂತ್ಯಕ್ಕೆ ರೂ.3,15,27,280 ಹೊರಬಾಕಿ ಇದ್ದು ಇದು ಕಳೆದ ವರ್ಷಕ್ಕಿಂತ ಶೇ.5.65 ರಷ್ಟು ವೃದ್ದಿಯಾಗಿದೆ ಎಂದು ಹೇಳಿದರು.
ಠೇವಣಿಗಳು; ವರ್ಷಾರಂಭದಲ್ಲಿ ಠೇವಣಿ ರೂ.31,04,27,730 ಇದ್ದು ವರ್ಷಾಂತ್ಯಕ್ಕೆ ರೂ.3,35,04,62,489 ಬಾಕಿ ಇರುತ್ತದೆ. ಇದು ಕಳೆದ ವರ್ಷಕ್ಕಿಂತ  ಶೇ.7.94 ರಷ್ಟು ಹೆಚ್ಚಳವಾಗಿದೆ.
ಸದಸ್ಯರ ಸಾಲಗಳು; ವರ್ಷಾರಂಭದಲ್ಲಿ ರೂ.46,17,61,398 ಇದ್ದ ಸಾಲವು ವರ್ಷದ ಕೊನೆಗೆ ರೂ.49,31,37,589 ಹೊರ ಬಾಕಿ ಇರುತ್ತದೆ. ಈ ವರ್ಷದಲ್ಲಿ ಸದಸ್ಯರಿಗೆ ರೂ.45,86,21,917 ಸಾಲ ವಿತರಿಸಲಾಗಿದೆ.ರೂ.42,72,45,726 ಸಾಲವನ್ನು ಮರು ಪಾವತಿಸಿರುತ್ತಾರೆ. ವರ್ಷದ ಕೊನೆಯಲ್ಲಿ ಒಟ್ಟು ರೂ.90,38,974 ಸುಸ್ತಿಸಾಲ ಇರುತ್ತದೆ. ಈ ವರ್ಷದಲ್ಲಿ ಸದಸ್ಯರ ಸಾಲವು ಶೇ.98 ರಷ್ಟು ಮರುಪಾವತಿ ಆಗಿರುತ್ತದೆ ಎಂದು ಅಧ್ಯಕ್ಷರು ಸಭೆಗೆ ವಿವರಿಸಿದರು.
ರೈತರ ಬೆಳೆವಿಮೆ ಯೋಜನೆ; ವರದಿ ವರ್ಷದಲ್ಲಿ 423 ಮಂದಿ ರೈತ ಸದಸ್ಯರು ರೈತರ ಬೆಳೆವಿಮೆ ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದು ರೂ.26,02,482 ವಿಮಾ ಪ್ರೀಮಿಯಂ ಪಾವತಿಸಲಾಗಿದೆ.
ನವೋದಯ ಸ್ವ- ಸಹಾಯ ಗುಂಪುಗಳು; ಸಂಘದ ಕಾರ್ಯವ್ಯಾಪ್ತಿಯಲ್ಲಿ  ಒಟ್ಟು 107 ನವೋದಯ ಸ್ವಸಹಾಯ ಗುಂಪುಗಳಿದ್ದು ಸಂಚಯ ಖಾತೆಯಲ್ಲಿ ರೂ.40,47,024 ಉಳಿತಾಯ ಆಗಿದೆ.99 ಗುಂಪುಗಳಿಗೆ  ರೂ.1,17,49,000 ಸಾಲ ನೀಡಲಾಗಿದೆ.
ಲೆಕ್ಕ ಪರಿಶೋಧನೆಯಲ್ಲಿ ‘ಎ’ ತರಗತಿ ಪಡೆದಿರುತ್ತದೆ. ಪ್ರಧಾನ ಕಚೇರಿಯಲ್ಲಿ ನೀಡುತ್ತಿರುವ ಎಲ್ಲಾ ಸೇವೆ ಹಾಗೂ ಸೌಲಭ್ಯಗಳನ್ನು ನಿಡ್ಪಳ್ಳಿ ಶಾಖೆಯಲ್ಲೂ ನೀಡಲಾಗುತ್ತದೆ. ಗ್ರಾಮದ ಸದಸ್ಯರ ಅನುಕೂಲಕ್ಕಾಗಿ ನಿಡ್ಪಳ್ಳಿ ಶಾಖೆಯಲ್ಲೇ ಸಾಲ ಸೌಲಭ್ಯ ನೀಡಲು ವ್ಯವಸ್ಥೆ ಮಾಡಲಾಗಿದೆ.
ಮುಂದಿನ ಯೋಜನೆಗಳು:
ರೂ.40 ಕೋಟಿಯಷ್ಟು ಠೇವಣಿ ಹೊಂದುವುದು, ರೂ.55 ಕೋಟಿಯಷ್ಟು ರೈತರಿಗೆ ಸಾಲ ನೀಡುವುದು ಮತ್ತು ಶೇಕಡಾ100 ಸಾಲ ವಸೂಲಾತಿ ಮಾಡುವುದು. ಸಂಘದ ಉಪಾಧ್ಯಕ್ಷ ಡಾ.ಅಖಿಲೇಶ್ ಪಿ.ಯಂ ಅರ್ಧಮೂಲೆ, ನಿರ್ದೇಶಕರಾದ ನಾರಾಯಣ ರೈ ಕೊಪ್ಪಳ, ತಿಮ್ಮಣ್ಣ ರೈ ಅನಾಜೆ, ರವೀಂದ್ರ ಭಂಡಾರಿ ಬೈಂಕ್ರೋಡು, ಕುಮಾರ ನರಸಿಂಹ ಬುಳೆನಡ್ಕ, ರವಿಶಂಕರ್ ಶರ್ಮ ಬೊಳುಕಲ್ಲು, ಪ್ರೇಮ ಬರೆಂಬೊಟ್ಟು,ಗೀತಾ ಆರ್.ರೈ, ಪಡ್ಯಂಬೆಟ್ಟು, ಗುಣಶ್ರೀ ಜಿ.ಪರಾರಿ, ಸಂಜೀವ ಕೀಲಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ ಸುಧಾಕರ ಭಟ್ ಪ್ರಾರ್ಥಿಸಿ, ಸಿಬ್ಬಂದಿ ಸಂದೇಶ್.ಬಿ ಸ್ವಾಗತಿಸಿದರು.ಸಿಬ್ಬಂದಿ ಪ್ರದೀಪ್ ರೈ ಎಸ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ .ಬಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಕೆ.ಹರೀಶ್ ಕುಮಾರ್, ತೃಪ್ತಿ. ಬಿ, ಯಂ.ಕೃಷ್ಣ ಕುಮಾರ್, ಜಿ.ಪದ್ಮನಾಭ ಮೂಲ್ಯ, ರಮೇಶ ನಾಯ್ಕ, ಚಿತ್ರ ಕುಮಾರ್ ಸಹಕರಿಸಿದರು. ಸಂಘದ ಸದಸ್ಯರು ‌ಪಾಲ್ಗೊಂಡರು.

LEAVE A REPLY

Please enter your comment!
Please enter your name here