ರೋಟರ್ಯಾಕ್ಟ್ ಕ್ಲಬ್ ನಿಂದ ಶಿಕ್ಷಕರ ದಿನಾಚರಣೆ

0

ಪುತ್ತೂರು: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿಂದ ಸೆ. 7ರಂದು ರೋಟರಿ ಟ್ರಸ್ಟ್ ಹಾಲ್ ನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಸಾಮೆತ್ತಡ್ಕ ಶಾಲಾ ಶಿಕ್ಷಕಿ ಮೀನಾಕ್ಷಿ ದಂಪತಿಯನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಅಂಬಿಕಾ ವಿದ್ಯಾಲಯದ ನಿರ್ದೇಶಕ ಸುರೇಶ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿದ್ದರು.
ರೊಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ಮೀನಾಕ್ಷಿ ಅವರ ಪತಿ ಆನಂದ ಗೌಡ, ರೋಟರಿ ಕ್ಲಬ್ ನ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್, ಸುಜಿತ್ ರೈ, ಕಿಶನ್ ಬಿ.ವಿ., ಸತೀಶ್ ನಾಯಕ್, ಕಾರ್ಯದರ್ಶಿ ಮಹೇಶ್ಚಂದ್ರ, ಸದಸ್ಯರಾದ ವಿಶಾಲ್, ವಿಜಯ್, ಸುಬ್ರಹ್ಮಣಿ, ನವೀನ್ ರೈ, ಶ್ರೀಕಾಂತ್, ಪುರುಷೋತ್ತಮ್ ಮೊದಲಾದವರು ಉಪಸ್ಥಿತರಿದ್ದರು. ಶಶಿಧರ್ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here