ಉಪ್ಪಿನಂಗಡಿ: ನೆಫ್ಟ್ ಮೂಲಕ ಜಮೆ ಮಾಡಿದ ಹಣ ಬೇರೊಂದು ಖಾತೆಗೆ ಜಮೆ-ವಂಚನೆ

0

ಉಪ್ಪಿನಂಗಡಿ : ತನ್ನದೇ ಹೆಸರುಳ್ಳ ವರ್ಚ್ಯುವಲ್ ಖಾತೆಗೆ ನೆ‌ಫ್ಟ್ ಮೂಲಕ ಜಮೆ ಮಾಡಿದ ಹಣ ಸದ್ರಿ ವರ್ಚ್ಯುವಲ್ ಖಾತೆಗೆ ಜಮೆಯಾಗದೆ ಬೇರೊಬ್ಬರ ಖಾತೆಗೆ ಜಮೆಯಾದ ಪ್ರಕರಣದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕೃಷಿಕರೊಬ್ಬರು ಗೃಹ ನಿರ್ಮಾಣದ ಬಾಬ್ತು ಯೋಜನೆಯೊಂದರ ಅಂಗವಾಗಿ ಇಂಪ್ಯಾಕ್ಟ್ ಗುರು ಟೆಕ್ನಾಲಜಿ ಪ್ರೈ ಲಿಮಿಟೆಡ್ ಮುಂಬಾಯಿ ಎಂಬ ಸಂಸ್ಥೆಯಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಅದರನ್ವಯ ಬ್ಯಾಂಕಿನಲ್ಲಿ ವರ್ಚ್ಯುವಲ್ ಖಾತೆಯನ್ನು ತೆರೆದಿದ್ದರು. ಸದ್ರಿ ಖಾತೆಗೆ ಹಣದ ವರ್ಗಾವಣೆಯಂತಹ ಪ್ರಕ್ರಿಯೆಗಳು ಯಾವುದೇ ಲೋಪವಿಲ್ಲದೆ ನಡೆದಿದ್ದವು. ಈ ಮಧ್ಯೆ ಸಂಸ್ಥೆಯ ಸಚಿನ್ ಎಂಬವರು ಮತ್ತಷ್ಟು ಗೃಹ ನಿರ್ಮಾಣದ ಯೋಜನೆಗಳ ಸೌಲಭ್ಯವನ್ನು ಒದಗಿಸಲಾಗುವುದೆಂದು ನಂಬಿಸಿ ಕೋಟಕ್ ಮಹೇಂದ್ರ ಬ್ಯಾಂಕ್ ಖಾತೆಯಲಿದ್ದೆನ್ನಲಾದ ವರ್ಚ್ಯುವಲ್ ಖಾತೆಗೆ ಹಣ ಜಮೆ ಮಾಡಲು ತಿಳಿಸಿದ ಹಿನ್ನೆಲೆಯಲ್ಲಿ 1,89,822/- ರೂಪಾಯಿ ಹಣವನ್ನು ನೆ-ï್ಟ ಮೂಲಕ ಜಮೆ ಮಾಡಿದ್ದು, ಸದ್ರಿ ಹಣ ವರ್ಗಾವಣೆಯು ದೂರುದಾರರ ಬ್ಯಾಂಕ್ ಖಾತೆಯಲ್ಲಿ ಅವರದ್ದೇ ಹೆಸರಿನ ಖಾತೆಗೆ ಜಮೆಯಾಗಿರುವುದನ್ನು ತೋರಿಸುತ್ತಿತ್ತು.
ಆದರೂ ಈ ಬಗ್ಗೆ ಸಂದೇಹ ಮೂಡಿದ್ದರಿಂದ ಮಹೇಂದ್ರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಸದ್ರಿ ಖಾತೆಯು ಸುದೇಶ್ ಮುರುಗನ್ ರವರ ಹೆಸರಿನಲ್ಲಿರುವುದು ಪತ್ತೆಯಾಗಿದ್ದು , ಕಳುಹಿಸಲಾದ ಎಲ್ಲಾ ಹಣ ಅದೇ ಖಾತೆಗೆ ಜಮೆಯಾಗಿರುವುದು ಕಂಡು ಬಂದಿದೆ. ವಿಚಾರಣೆಯ ವೇಳೆ ಸದ್ರಿ ಖಾತೆಯು ಅಂತರ್ಜಾಲ ವ್ಯವಸ್ಥೆಯಡಿ ತೆರೆಯಲಾದ ಖಾತೆ ಎಂದು ತಿಳಿದು ಬಂದಿದೆ.
ನೆಫ್ಟ್ ಮೂಲಕ ಕಳುಹಿಸುವ ಪ್ರಕ್ರಿಯೆಯಲ್ಲಿ ಒಂದು ಅಕ್ಷರ ತಪ್ಪಾಗಿದ್ದರೂ ಹಣ ವರ್ಗಾವಣೆಗೊಳ್ಳದೇ ಕಳುಹಿಸಿದವರ ಖಾತೆಗೆ ಹಣ ಹಿಂತಿರುಗುವ ಬಿಗುವಾದ ವ್ಯವಸ್ಥೆ ಇರುವಾಗ , ಅದೇ ನೆ‌ಫ್ಟ್ ಮೂಲಕ ತನ್ನ ಹೆಸರಿಗೆ ಕಳುಹಿಸಲಾದ ಹಣ ತನ್ನ ಬ್ಯಾಂಕ್ ಖಾತೆಯಲ್ಲಿ ತನ್ನ ಹೆಸರಿನ ವರ್ಚ್ಯುವಲ್ ಖಾತೆಗೆ ಜಮೆಯಾಗಿರುವುದನ್ನು ತೋರಿಸುತ್ತಿರುವ ವೇಳೆಯಲ್ಲಿಯೇ ಬೇರೊಬ್ಬರ ಖಾತೆಗೆ ಜಮೆಯಾಗುತ್ತಿರುವುದು ದೂರುದಾರರಿಗೆ ವಿಸ್ಮಯ ಮೂಡಿಸಿದೆ. ಮಾತ್ರವಲ್ಲದೆ ಹೈಟೆಕ್ ವಂಚನೆಯ ಶಂಕೆ ಮೂಡಿಸಿದೆ.
ಈ ಬಗ್ಗೆ ಹಣ ಕಳುಹಿಸಲಾದ ಎಲ್ಲಾ ವಿವರಗಳನ್ನು ದಾಖಲಿಸಿ ವಂಚನೆಗೀಡಾದ ವ್ಯಕ್ತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ನೆಫ್ಟ್ ಅರ್ಜಿ ಫಾರಂ ನಲ್ಲಿ ಉಲ್ಲೇಖಿಸಲಾದ ಬೆನಿಫಿಷರಿ ಯ ಹೆಸರಿಗೆ ಬದಲಾಗಿ ಅನ್ಯ ಹೆಸರಿನ ಖಾತೆಗೆ ಹಣ ಜಮೆಯಾಗಬೇಕಾದರೆ ಒಟ್ಟು ವ್ಯವಸ್ಥೆಯಡಿ ವಂಚಕರು ನುಸುಳಿರುವ ಸಾಧ್ಯತೆ ಯಾ ವ್ಯವಸ್ಥೆಯಲ್ಲಿ ಎಲ್ಲೋ ಸಡಿಲಿಕೆ ಇದ್ದು ವಂಚಕರು ಕೈಯಾಡಿಸುವ ಅವಕಾಶ ಇದ್ದಂತಿದೆ. ಪ್ರಕರಣದ ಬಗ್ಗೆ ಸಂಬಂಧ ಪಟ್ಟ ಇಲಾಖೆ ನಿಗಾವಿರಿಸಬೇಕಾಗಿದೆ ಎಂದು ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here