ಸೆ. 20: ಪುತ್ತೂರಿನಲ್ಲಿ ಮುಳಿಯ, ಸುದ್ದಿ ಸಹಯೋಗದಲ್ಲಿ ಕೃಷಿಕೋದ್ಯಮ

0

ಪುತ್ತೂರು: ಮುಳಿಯ ಹಾಗೂ ಸುದ್ದಿ ಸಹಯೋಗದಲ್ಲಿ ಕೃಷಿಕೋದ್ಯಮ ಕಾರ್ಯಕ್ರಮ ಪುತ್ತೂರು ಮುಳಿಯ ಜ್ಯುವೆಲ್ಸ್ ನ ಅಪರಂಜಿ ರೂಫ್ ಗಾರ್ಡನ್ ನಲ್ಲಿ ಸೆ. 20ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಳಿಯ ಜ್ಯುವೆಲ್ಸ್ ನ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವೇಣು ಶರ್ಮ ಮುನ್ನುಡಿಯ ಮಾತುಗಳನ್ನಾಡಲಿದ್ದಾರೆ. 10 ಗಂಟೆಯಿಂದ ಅನುಭವಿ ಪರಿಣತರೊಂದಿಗೆ ಮಾತುಕತೆ ನಡೆಯಲಿದ್ದು, ಇಂಟಿಗ್ರೆಟೆಡ್ ಅಗ್ರಿಕಲ್ಚರಿಸ್ಟ್ ಮಾ ಇಂಟಿಗ್ರೇಟರ್ಸ್ ಫೌಂಡರ್ ಅಶೋಕ್ ಕುಮಾರ್, ಕಾಸರಗೋಡು ಸಿ.ಪಿ.ಸಿ.ಆರ್.ಐ.ನ ಚೀಫ್ ಟೆಕ್ನಿಕಲ್ ಆಫೀಸರ್ ಯಚ್. ಮುರಳೀಕೃಷ್ಣ, ಕೃಷಿಕ ವಿಶ್ವೇಶ್ವರ ಭಟ್ ಬಂಗಾರಡ್ಕ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. 12.15ರಿಂದ 1 ಗಂಟೆಯವರೆಗೆ ನಡೆಯುವ ಸಂವಾದವನ್ನು ಪುರಂದರ ಕುಬಣೂರಾಯ ಹಾಗೂ ವೇಣು ಶರ್ಮ ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ 1ಕ್ಕೆ ಸಮಾರೋಪ ನಡೆಯಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ್ ಉಪಸಂಹಾರ ಮಾಡಲಿದ್ದಾರೆ. ಕೃಷ್ಣ ನಾರಾಯಣ ಮುಳಿಯ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಬಗ್ಗೆ ಡಾ‌. ವೇಣು ಕಳೆಯತ್ತೋಡಿ, ಕೃಷಿ ತಂತ್ರಗಾರಿಕೆ ಬಗ್ಗೆ ಶ್ರೀಹರಿ ಭಟ್ ಸಜಂಗದ್ದೆ, ನರ್ಸರಿ ಬಗ್ಗೆ ವೇಣು ಗೋಪಾಲ್, ಇನ್ಸ್ಟಾ ಬಾಸ್ಕೆಟ್ ಹಾಗೂ ಕೃಷಿ ಮಳಿಗೆ ಬಗ್ಗೆ ಕೃಷ್ಣ ಮೋಹನ್, ಆಯುರ್ವೇದ ಮೂಲಿಕೆಗಳ ಕೃಷಿ ಬಗ್ಗೆ ಡಾ. ಹರಿಕೃಷ್ಣ ಪಾಣಾಜೆ, ಸುರಂಗ ನೀರಾವರಿ ಬಗ್ಗೆ ಗೋವಿಂದ ಭಟ್ ಮಾಣಿಲ, ಹೈನುಗಾರಿಕೆ ಬಗ್ಗೆ ಕಸ್ತೂರಿ ಅಡ್ಯಂತಾಯ, ಬಸಳೆ ಕೃಷಿ ಬಗ್ಗೆ ಸುರೇಶ್ ಗೌಡ, ತರಕಾರಿ ಕೃಷಿ ಬಗ್ಗೆ ಶ್ರೀರಾಮ ಭಟ್ಟ ಚೆನ್ನಾಂಗೋಡು, ಕೃಷಿ ವಿಷಯದಲ್ಲಿ ಶ್ರೀನಿವಾಸ ಭಟ್ಟ ಚಂದುಕೂಡ್ಲು, ಕೃಷಿ ಸಂಘಟನೆ (ಸಾಮಾಜಿಕ ಜಾಲಾತಾಣ)ದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ಮಂಡಿಸಲಿದ್ದಾರೆ.

ಮುಳಿಯ ಹಾಗೂ ಸುದ್ದಿ ಸಹಯೋಗದಲ್ಲಿ ಹೊಸತನದೊಂದಿಗೆ ಕೃಷಿಕೋದ್ಯಮ ಕೃಷಿ ಬದುಕಿನ ಪಯಣದಲ್ಲಿ ಹೊಸತನದ ಹೆಜ್ಜೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಸರು ನೋಂದಾಯಿಸಲು 8494938916 ಸಂಪರ್ಕಿಸಿ.

LEAVE A REPLY

Please enter your comment!
Please enter your name here