ಲಂಚ,ಭ್ರಷ್ಟಾಚಾರ:ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ವಾಕ್ಸಮರ

0

ಬೆಂಗಳೂರು:ಶೇ.40 ಲಂಚದ ಪ್ರಕರಣದ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ತಿರುಗಿದ್ದು, ಘೋಷಣಾ ಫಲಕ ಪ್ರದರ್ಶಿಸಿ ಆರೋಪ-ಪ್ರತ್ಯಾರೋಪಕ್ಕೆ ಆಸ್ಪದವಾಯಿತು.

ಮಳೆ ಮತ್ತು ಪ್ರವಾಹದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುದೀರ್ಘ ಉತ್ತರದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಮ್ಮ ಯಾವುದೇ ಪ್ರಶ್ನೆಗಳಿಗೂ ಸರ್ಕಾರ ತೃಪ್ತಿಕರ ಉತ್ತರ ನೀಡಲಿಲ್ಲ ಎಂದು ತಕರಾರು ಎತ್ತಿದರು.ಕಾಂಗ್ರೆಸ್‌ನ ಇತರ ಸದಸ್ಯರೂ ಧ್ವನಿಗೂಡಿಸಿದರು.ಕಾಂಗ್ರೆಸ್ ಸದಸ್ಯರು, ಶೇ.40 ಕಮಿಷನ್ ಸರ್ಕಾರ ಮತ್ತು ಇತರ ಆರೋಪಗಳನ್ನು ಉಲ್ಲೇಖಿಸಿ ಬರೆದ ಫಲಕ ಪ್ರದರ್ಶಿಸಿ ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದೆ ಬಂದು ನಿಂತರು. ಪ್ರತಿಯಾಗಿ ಬಿಜೆಪಿ ಸದಸ್ಯರೂ, ಕಾಂಗ್ರೆಸ್ ಅವಽಯಲ್ಲಿ ನಡೆದಿತ್ತೆನ್ನಲಾದ ಹಗರಣಗಳ ಮಾಹಿತಿ ಒಳಗೊಂಡ ಫಲಕ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಹಲವು ಸಚಿವರೂ ಫಲಕ ಹಿಡಿದು ನಿಂತಿದ್ದರು. ಧಿಕ್ಕಾರ,ಶೇಮ್ ಎಂಬಿತ್ಯಾದಿ ಘೋಷಣೆಗಳು ತಾರಕಕ್ಕೇರಿತ್ತು.‘ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ.ರಾಜ್ಯದ ಜನತೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ’ ಎಂದು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ,‘ಕಾಂಗ್ರೆಸ್ ಪಕ್ಷ ವಿಚ್ಛಿದ್ರಕಾರಿ ವಿರೋಧ ಪಕ್ಷವಾಗಿದೆ’ ಎಂದು ಕಿಡಿಕಾರಿದರು. ‘ನಿಮ್ಮದು ಶೇ.40 ಕಮಿಷನ್ ಸರ್ಕಾರ, ಅತ್ಯಂತ ಭ್ರಷ್ಟ ಆಡಳಿತ’ ಎಂದು ಸಿದ್ದರಾಮಯ್ಯ ಹರಿಹಾಯ್ದರು. ತಿರುಗೇಟು ನೀಡಿದ ಬೊಮ್ಮಾಯಿ, ‘ನಿಮ್ಮದು ಶೇ.100 ಕಮಿಷನ್ ಸರ್ಕಾರವಾಗಿತ್ತು. ಎಲ್ಲವನ್ನೂ ತನಿಖೆ ಮಾಡಿಸುತ್ತೇನೆ.ರಾಜಕಾಲುವೆ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರ ಸ್ಯಾಂಪಲ್ ಮಾತ್ರ’ ಎಂದು ಕಡತ ಪ್ರದರ್ಶಿಸಿದರು.

 

ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಆರ್.ಅಶೋಕ, ಸಿ.ಸಿ.ಪಾಟೀಲ, ವಿ.ಸುನಿಲ್ ಕುಮಾರ್, ಬಿ.ಸಿ.ಪಾಟೀಲ, ಪ್ರಭು ಚವ್ಹಾಣ, ಮುರುಗೇಶ ನಿರಾಣಿ, ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು -ಲಕ ಹಿಡಿದು ನಿಂತರು.ಸಭಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಸದನದಲ್ಲಿ ಹೀಗೆ -ಲಕ ಪ್ರದರ್ಶಿಸಬಾರದು’ ಎಂದರು.ಗದ್ದಲದ ನಡುವೆ ಎರಡು ಮಸೂದೆಗಳನ್ನು ಮಂಡಿಸಿ, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

LEAVE A REPLY

Please enter your comment!
Please enter your name here