ಗೋಳಿತ್ತೊಟ್ಟು ಗ್ರಾ.ಪಂ.ಜಮಾಬಂದಿ ಸಭೆ

0

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮ ಪಂಚಾಯತದ 2021-22ನೇ ಸಾಲಿನ ಜಮಾಬಂದಿ ಸೆ.15ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ದ.ಕ.ಮಂಗಳೂರು ಇಲ್ಲಿನ ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಮಂಜುಳಾ ಜಿ.,ಅವರು ಜಮಾಬಂದಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾ.ಪಂ.ನ ಲೆಕ್ಕಪತ್ರಗಳ ಪರಿಶೀಲನೆ ನಡೆಯಿತು. ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಟೇರಿ, ಉಪಾಧ್ಯಕ್ಷೆ ಶೋಭಾಲತಾ, ಸದಸ್ಯರಾದ ಕೆ.ಬಾಬು ಪೂಜಾರಿ ಕಿನ್ಯಡ್ಕ, ಜೀವಿತಾ ಪೆರಣ, ಗುಲಾಬಿ, ಎ.ಬಾಲಕೃಷ್ಣ, ಹೇಮಲತ, ಪದ್ಮನಾಭ ಪೂಜಾರಿ, ಸವಿತಾ ಕೆ.,ಶಿವಪ್ರಸಾದ್ ಎಸ್.ಎಸ್., ನೋಣಯ್ಯ ಗೌಡ, ಜಾನಕಿ, ಶೃತಿ ಪಿ., ವಾರಿಜಾಕ್ಷಿ, ವಿ.ಸಿ.ಜೋಸೆಫ್ ಹಾಗೂ ಗ್ರಾಮಸ್ಥರು, ವಿವಿಧ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಪಿಡಿಒ ಜಗದೀಶ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ಎಸ್.ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here