ಕಾವು: ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ

0

ಕಾವು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇವರ ಸಹಯೋಗದೊಂದಿಗೆ ಕಾವು ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ-ಫೋಷಣ್ ಅಭಿಯಾನ ಕಾರ್ಯಕ್ರಮವು ಸೆ.21ರಂದು ನಡೆಯಿತು.

ಅಂಗನವಾಡಿ ಮೇಲ್ವಿಚಾರಕಿ ಸುಲೋಚನ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಶಾಲಾ ಪೂರ್ವ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆ ಉಷಾ ಡಿ.ಎಂರವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು, ವೇದಿಕೆಯಲ್ಲಿ ಸಮಿತಿ ಅಧ್ಯಕ್ಷೆ ವಸಂತಿ, ಅರಿಯಡ್ಕ ಗ್ರಾ.ಪಂ ಸದಸ್ಯೆಯರಾದ ಅನಿತಾ ಆಚಾರಿಮೂಲೆ, ಜಯಂತಿ ಪಟ್ಟುಮೂಲೆ ಉಪಸ್ಥಿತರಿದ್ದರು. ಫೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಯಶೋಧ, ವಸಂತಿ, ಶಾರದ, ಜಯಲಕ್ಷ್ಮೀ, ವಿಜಯಲಕ್ಷ್ಮೀ, ಪದ್ಮಾವತಿ, ಪ್ರತಿಮಾ, ಆಶಾ, ರೂಪ, ನಳಿನಿ, ನಳಿನಾಕ್ಷಿ, ಕವಿತ, ಲಲಿತ, ಪದ್ಮಾವತಿ, ಉಷಾ, ರಮ್ಯ, ಬೇಬಿ, ಜಯಲಕ್ಷ್ಮೀ, ಜಯಂತಿ, ವಿದ್ಯಾಶ್ರೀಯವರು ಪೌಷ್ಠಿಕ ಆಹಾರ ತಯಾರಿಸಿ ತಂದಿದ್ದರು. ಕಾವು ನನ್ಯ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯರವರು ಬಹುಮಾನದ ಪ್ರಾಯೋಜಕತ್ವ ನೀಡಿದರು. ಅಂಗನವಾಡಿ ಪುಟಾಣಿಗಳಾದ ರಕ್ಷಾ, ಶೀಶಾನ್, ಮಧುರ, ದೀಕ್ಷಾ, ಸಾಗರಿಕ್, ರಮ್ಯ, ವರ್ಷ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ ಸ್ವಾಗತಿಸಿ ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು.

LEAVE A REPLY

Please enter your comment!
Please enter your name here